ಮೊಹಮ್ಮದ್​ ಸಿರಾಜ್​ ಯುಗ ಆರಂಭ; ಉಮೇಶ್​-ಇಶಾಂತ್​​ ಸ್ಥಾನಕ್ಕೆ ಕುತ್ತು?

ಮೊಹಮ್ಮದ್​ ಸಿರಾಜ್​ ಯುಗ ಆರಂಭ; ಉಮೇಶ್​-ಇಶಾಂತ್​​ ಸ್ಥಾನಕ್ಕೆ ಕುತ್ತು?

ಟೀಮ್​ ಇಂಡಿಯಾ ಬೌಲಿಂಗ್​ ಕಾಂಪಿಟೇಷನ್​​ನಲ್ಲಿ, ಕೆಲ ಬೌಲರ್​ಗಳ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ಅನುಭವಿಗಳಾದ ಇಶಾಂತ್​ ಶರ್ಮಾ, ಉಮೇಶ್​ ಯಾದವ್​ ಕರಿಯರ್​​ ಅಂತ್ಯವಾಗೋ ಕಾಲ ಕೂಡ ಸನ್ನಿಹಿತವಾಗಿದೆ. ಯಾಕಂದ್ರೆ, ಸಿರಾಜ್ ನೀಡಿರುವ ಬೌಲಿಂಗ್​​ ಪೆಟ್ಟು ಅಂತಹದ್ದು.

ಪ್ರಸ್ತುತ ಟೀಮ್​ ಇಂಡಿಯಾದಲ್ಲಿ ಮಿನುಗ್ತಿರುವ ನಕ್ಷತ್ರ, ಯುವ ವೇಗಿ ಸಿರಾಜ್​. ಟೆಸ್ಟ್​​ಗೆ ಹೇಳಿ ಮಾಡಿಸಿದಂತಹ ಬೌಲಿಂಗ್ ಶೈಲಿ ಹೊಂದಿರುವ ಸಿರಾಜ್, ಆಡಿದ ಕೆಲವೇ ಪಂದ್ಯಗಳಲ್ಲಿ, ತಮ್ಮ ಟ್ಯಾಲೆಂಟ್ ಸಾಬೀತುಪಡಿಸಿದ್ದಾರೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ಆಸ್ಟ್ರೇಲಿಯಾ-ಇಂಗ್ಲೆಂಡ್ ಟೆಸ್ಟ್​ ಸರಣಿ.! ಮೋಸ್ಟ್​​ ಟ್ರಸ್ಟೆಡ್​ ಬೌಲರ್​ ಎನಿಸಿರುವ ಸಿರಾಜ್​, ವಿದೇಶಿ ಪಿಚ್​​ಗಳಲ್ಲೂ ದರ್ಬಾರ್ ನಡೆಸ್ತಿದ್ದಾರೆ. ಆ ಮೂಲಕ ಸಿರಾಜ್, ಅನುಭವಿ ವೇಗಿಗಳ ಟೆನ್ಶನ್ ಹೆಚ್ಚಿಸಿದ್ದಾರೆ.

blank

ಸದ್ಯ ಟೆಸ್ಟ್​ ಕ್ರಿಕೆಟ್​ನ ಗೇಮ್​ ಚೇಂಜರ್​​ ಆಗಿರುವ ಸಿರಾಜ್​, ಆ್ಯಟಿಟ್ಯೂಡ್​, ಅಗ್ರೆಸ್ಸಿವ್​ ಆಟ ಎಲ್ಲರಿಗೂ ಅಚ್ಚುಮೆಚ್ಚಾಗಿದೆ. ಸಿರಾಜ್​​ ಬೌಲಿಂಗ್​ ಕೂಡ ಫಾರಿನ್​ ಕಂಡೀಷನ್ಸ್​​ನಲ್ಲಿ ವರ್ಕೌಟ್​ ಆಗ್ತಿರುವ ಕಾರಣ, ವಿದೇಶಿ ಪಿಚ್​​ಗಳಿಗೇ​ ಹೇಳಿ ಮಾಡಿಸಿದ ಬೌಲರ್ ಆಗಿದ್ದಾರೆ. ಫೇಸ್​​, ಬೌನ್ಸ್​​​,​​ ಸ್ವಿಂಗ್​, ಯಾರ್ಕರ್, ಲೈನ್​​ ಅಂಡ್​​​ ಲೆಂಥ್ ಕೂಡ ಉತ್ತಮವಾಗಿದೆ. ಇದರ ಜೊತೆಗೆ ಇಶಾಂತ್​ ಶರ್ಮಾರ ಬೌಲಿಂಗ್​ ಅಸ್ಥಿರ ಪ್ರದರ್ಶನ ಕೂಡ ಸಿರಾಜ್​ಗೆ, ಪ್ಲಸ್​ ಪಾಯಿಂಟ್​ ಆಗಿದೆ.

blank

ಆಸ್ಟ್ರೇಲಿಯಾ-ಇಂಗ್ಲೆಂಡ್​​ನಲ್ಲಿ ಪ್ರೂವ್​​ ಮಾಡಿದ ಸಿರಾಜ್​​.!
13ನೇ ಆವೃತ್ತಿಯ IPL​​ನಲ್ಲಿ ಮಿಂಚಿದ ಕಾರಣ, ಸಿರಾಜ್​ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾದ್ರು. ಮೆಲ್ಬರ್ನ್​​​ ಟೆಸ್ಟ್​​​ನಲ್ಲಿ​ 5 ವಿಕೆಟ್​ ಕಬಳಿಸಿ ಅಬ್ಬರಿಸಿದ ಯುವ ವೇಗಿ, ಸಿಡ್ನಿ – ಬ್ರಿಸ್ಬೇನ್​​ ಟೆಸ್ಟ್​​​ನಲ್ಲೂ ಮುಂದುವರಿಸಿದ್ದರು. ಇದೀಗ ಇಂಗ್ಲೆಂಡ್ ​ಸರಣಿಯಲ್ಲೂ ಸಿರಾಜ್​ ಬೊಂಬಾಟ್​ ಬೌಲಿಂಗ್​​ ಮಾಡ್ತಿದ್ದು, ಎರಡೂ ಪಂದ್ಯಗಳಲ್ಲಿ 11 ವಿಕೆಟ್​ ಕಬಳಿಸಿ ಮ್ಯಾಚ್​ ವಿನ್ನರ್ ಎನಿಸಿದ್ದಾರೆ. ಹಾಗಾಗಿ ಮುಂದಿನ ಪಂದ್ಯಕ್ಕೆ ಸಿರಾಜ್​​ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಪಂದ್ಯ ಪಂದ್ಯಕ್ಕೂ ಸಿರಾಜ್​ರ ಬೆಳವಣಿಗೆ, ಮೊಹಮ್ಮದ್​ ಶಮಿ, ಜಸ್​ಪ್ರಿತ್​ ಬೂಮ್ರಾಗೆ ಭೀತಿ ಹುಟ್ಟಿಸಿದೆ. ಹೌದು, ಸದ್ಯ 2ನೇ ಬೌಲರ್​ ಆಗಿ ಆಯ್ಕೆಯಾಗ್ತಿರೋ ಸಿರಾಜ್​, ಶಮಿ-ಬೂಮ್ರಾರನ್ನ ಹಿಂದಿಕ್ಕಿ ಫಸ್ಟ್ ಚಾಯ್ಸ್​ ಬೌಲರ್​​ ಆಗಿ ಗುರುತಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅಷ್ಟೆ ಅಲ್ಲದೆ, ಸಿರಾಜ್​​ರ ಸೂಪರ್​​ ಕನ್ಸಿಸ್ಟೆನ್ಸಿಯಿಂದಾಗಿ ಉಮೇಶ್​​ ಯಾದವ್​-ಇಶಾಂತ್​ ಶರ್ಮಾ ಸ್ಥಾನ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.

blank

Source: newsfirstlive.com Source link