ರಾಹುಲ್ ಗಾಂಧಿ ಪೋಸ್ಟ್​ ಮಾಡಿದ್ದ ಫೋಟೋಗಳನ್ನ ಡಿಲೀಟ್ ಮಾಡಿದ ಫೇಸ್​​ಬುಕ್, ಇನ್​ಸ್ಟಾಗ್ರಾಮ್

ರಾಹುಲ್ ಗಾಂಧಿ ಪೋಸ್ಟ್​ ಮಾಡಿದ್ದ ಫೋಟೋಗಳನ್ನ ಡಿಲೀಟ್ ಮಾಡಿದ ಫೇಸ್​​ಬುಕ್, ಇನ್​ಸ್ಟಾಗ್ರಾಮ್

ನವದೆಹಲಿ: ದೆಹಲಿಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೊಳಗಾಗಿದ್ದ ಸಂತ್ರಸ್ತೆಯ ಪೋಷಕರ ಫೋಟೋಗಳನ್ನ ಈ ಹಿಂದೆ ರಾಹುಲ್ ಗಾಂಧಿ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು. ಸಂತ್ರಸ್ತೆಯ ಪೋಷಕರ ಫೋಟೋಗಳನ್ನ ಹಂಚಿಕೊಂಡಿದ್ದಕ್ಕೆ ರಾಹುಲ್ ಗಾಂಧಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟರ್ ರಾಹುಲ್ ಗಾಂಧಿ ಟ್ವಿಟರ್ ಖಾತೆಯನ್ನ ಲಾಕ್ ಮಾಡಿತ್ತು. ಅಲ್ಲದೇ ರಾಹುಲ್ ಹಂಚಿದ್ದ ಫೋಟೋಗಳನ್ನ ತೆಗೆದುಹಾಕಿತ್ತು. ಟ್ವಿಟರ್ ನಂತರ ಇದೀಗ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂ ಖಾತೆಗಳಿಂದಲೂ ರಾಹುಲ್ ಗಾಂಧಿ ಹಂಚಿಕೊಂಡಿದ್ದ ಫೋಟೋಗಳನ್ನು ತೆಗೆದುಹಾಕಿವೆ.

ಇದನ್ನೂ ಓದಿ: ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದ್ದೇಕೆ..?

ಸೋಷಿಯಲ್ ಮೀಡಿಯಾಗಳಿಗೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗ ನೋಟಿಸ್ ನೀಡಿ ಈ ಫೋಟೋಗಳನ್ನು ತೆಗೆದುಹಾಕುವಂತೆ ಹೇಳಿದ್ದವು. ಈ ಹಿನ್ನೆಲೆ ಫೇಸ್​ಬುಕ್ ಹಾಗೂ ಇನ್​ಸ್ಟಾಗ್ರಾಂನಿಂದ ರಾಹುಲ್ ಗಾಂಧಿ ಫೋಟೋಗಳನ್ನು ತೆಗೆದುಹಾಕಿರುವುದಾಗಿ ಈ ಸಂಸ್ಥೆಗಳು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ಮಾಹಿತಿ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ: BJP, RSSಗೆ ಹೆದರುವವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಜಾಗವಿಲ್ಲ- ರಾಹುಲ್ ಗಾಂಧಿ

ಕೆಲವು ದಿನಗಳ ಹಿಂದೆ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂ ಸಂಸ್ಥೆಗಳು ರಾಹುಲ್ ಗಾಂಧಿಗೆ ತಾವು ಹಂಚಿಕೊಂಡ ಸಂತ್ರಸ್ತೆಯ ಫೋಟೋಗಳನ್ನು ಡಿಲೀಟ್ ಮಾಡುವಂತೆ ಸೂಚನೆ ನೀಡಿದ್ದವು.

Source: newsfirstlive.com Source link