ಮೈ ಝಮ್ಮೆನಿಸುತ್ತೆ ಕೈಲಾಶ್​ ಖೇರ್​ ಮೋಡಿಯ ’ಭಜರಂಗಿ-2’ ಟೈಟಲ್​ ಸಾಂಗ್​

ಮೈ ಝಮ್ಮೆನಿಸುತ್ತೆ ಕೈಲಾಶ್​ ಖೇರ್​ ಮೋಡಿಯ ’ಭಜರಂಗಿ-2’ ಟೈಟಲ್​ ಸಾಂಗ್​

ಡಾ.ಶಿವರಾಜ್ ಕುಮಾರ್ ಸಿನಿಮಾಗಳೆಂದ್ರೆ ಒಂಥರ ಸಾಲು ಸಾಲು ಬರೋ ಹಬ್ಬಗಳಿದಂಗೆ.. ಒಂದರ ಮೆಲೊಂದು ಹಬ್ಬಗಳಂತೆ ಬರುತ್ತಿರುತ್ತವೆ.. ಸದ್ಯ 122ನೇ ಸಿನಿಮಾ ರಿಲೀಸ್​​​​​​ ಹೊಸ್ತಿಲಿನಲ್ಲಿ ನಿಂತಿರೋ ಸೆಂಚುರಿ ಸ್ಟಾರ್ ವರಮಹಾಲಕ್ಷ್ಮೀ ಹಬ್ಬಕ್ಕೆ ಸಾಲು ಸಾಲು ಸಿನಿಮಾಸ್ ಸೂಪರ್ ಸಮಾಚಾರವನ್ನ ತನ್ನ ಅಭಿಮಾನಿ ಬಳಗ ನೀಡಿದ್ದಾರೆ.. ಹಾಗಾದ್ರೆ ಶಿವಣ್ಣ ಈಗೀನ ಮತ್ತು ಮುಂದಿನ ಸಿನಿಮಾಗಳ ಸಮಾಚಾರವೇನು..?

ಜಸ್ಟ್ ಮೊನ್​ ಮೊನ್ನೆ ಶಿವಣ್ಣ ‘ನೀ ಸಿಗೋವರೆಗೂ’ ಸಿನಿಮಾದ ಮೂಲಕ ಶಿವ ಸೈನ್ಯಕ್ಕೆ ಸಂತೋಷದ ಸಮಾಚಾರ ಕೊಟ್ಟಿದ್ದರು ಶಿವಣ್ಣ.. ಈ ವರಮಹಾಲಕ್ಷ್ಮೀ ಹಬ್ಬಕ್ಕೆ ತನ್ನ ಇಂದಿನ ಹಾಗೂ ಮುಂದಿನ ಸಿನಿಮಾಗಳ ಮಸ್ತ್ ಮಾಹಿತಿಯನ್ನ ಕೊಟ್ಟು ಶಿವಸೈನ್ಯವನ್ನ ಪುಳಕಿತರನ್ನಾಗಿಸಿದ್ದಾರೆ..

blank

ಸಿನಿಮಾಗಳ ವಿಚಾರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೆಜಕ್ಕೂ ಸೆಂಚುರಿ ಸ್ಟಾರೇ.. ಕೊರೊನಾ ಪರೊನಾ ಇರದೇ ಇದ್ದಿದ್ರೆ ಇಷ್ಟೊತ್ತಿಗಾಗಲೇ ಒಂದು 130 ಸಿನಿಮಾ ಮುಗಿಸಿ ಮುನ್ನುಗಿ ಬಿಡ್ತಿದ್ರು ಸೆಂಚುರಿ ಸಾರ್ವಭೌಮ.. ಲಕ್ಷ್ಮೀ ಪೂಜೆಯ ಅಂಗವಾಗಿ ಎ.ಹರ್ಷ ನಿರ್ದೇಶನದ ಜಯಣ್ಣ-ಭೋಗಣ್ಣ ನಿರ್ಮಾಣದ ಭಜರಂಗಿ -2 ಚಿತ್ರದ ಮೈ ಜುಮ್ ಎನ್ನಿಸೋ ಹಾಡೊಂದನ್ನ ಬಿಡುಗಡೆ ಮಾಡಿಡೆ ಮಾಡಲಾಗಿದೆ.. ಅರ್ಜುನ್ ಜನ್ಯ ಸಂಗೀತ ಝರಿಗೆ ಕೆ.ಕಲ್ಯಾಣ್ ಸಾಹಿತ್ಯ ಸಿರಿ ಪೋಣಿಸಿ ಕೈಲಾಶ್ ಕೇರ್ ಕಂಠ ಸಿರಿ ಬೆರಸಿಕೊಂಡು ಭಜರಂಗಿ-2 ಸಿನಿಮಾದ ಟೈಟಲ್ ಸಾಂಗ್ ಹೊರಹೊಮ್ಮಿದೆ..

ಈ ವರ್ಷದ ಸೆಪ್ಟೆಂಬರ್ ತಿಂಗಳು ಪ್ರೇಕ್ಷಕರ ಮುಂದೆ ಭಜರಂಗಿ-2 ಸಿನಿಮಾ ಬಂದು ನಿಲ್ಲಲಿದೆ.. ಇದರ ನಡುವೆ ಶಿವಣ್ಣ ಮತ್ತೆರಡು ಸಿನಿಮಾಗಳು ಸ್ಯಾಂಡಲ್​ವುಡ್ ಭೂಪಟದಲ್ಲಿ ಅಡಿಗಲ್ಲನ್ನ ಇಟ್ಟಿವೆ.. ಮೊನ್ ಮೊನ್ನೆ ‘‘ನೀ ಸಿಗೋವರೆಗೂ’’ ಸಿನಿಮಾದ ಮುಹೂರ್ತವಾಯ್ತು.. ಇದು ಶಿವಣ್ಣನ 124ನೇ ಚಿತ್ರ.. ಇನ್ನೂ 125ನೇ ಸಿನಿಮಾ ‘ವೇದಾ’ ಎಂದು ಅನೌನ್ಸ್ ಆಗಿದೆ.. ಈಗ ಶಿವಣ್ಣನ 126 , 127ನೇ ಸಿನಿಮಾಗಳ ಸ್ವಾರಸ್ಯ ಸಮಾಚಾರ ವರಮಹಾಲಕ್ಷ್ಮೀ ಹಬ್ಬದ ಸಲುವಾಗಿ ಹೊರ ಬಂದಿರೋದು ವಿಶೇಷ..

ಶಿವಣ್ಣನ 126ನೇ ಸಿನಿಮಾ ಸ್ಯಾಂಡಲ್​ವುಡ್​ನ ಮಲ್ಟಿಟ್ಯಾಲೆಂಟೆಡ್ ರಿಷಬ್ ಶೆಟ್ಟಿ ಪಾಲಿಗೆ ಆಗಿದೆ.. ಒನ್ ಆಗೇನ್ ಮತ್ತೊಮ್ಮೆ ಮಗದೊಮ್ಮೆ ಶಿವಣ್ಣ ಚಿತ್ರಕ್ಕೆ ಜಯಣ್ಣ ಬಂಡವಾಳ ಹುಡುತ್ತಿದ್ದಾರೆ.. ಕಳೆದ ಗುರುವಾರ ಒಂದು ಸುತ್ತಿನ ಕಥೆಯ ಮಾತುಕಥೆಯನ್ನ ಮುತ್ತರಾಜ ನಿವಾಸದಲ್ಲಿ ನಿರ್ದೇಶಕ ರಿಷಬ್ ಮತ್ತು ನಿರ್ಮಾಪಕ ಜಯಣ್ಣ ಮಾಡಿರೋದು ವಿಶೇಷ..

ಇನ್ನು ಶಿವಣ್ಣನ 127ನೇ ಸಿನಿಮಾದ ಬಗ್ಗೆಯೂ ಸುದ್ದಿ ಸಮಾಚಾರ ಹೊರ ಬಂದಿದೆ.. ಚಿಕ್ಕ ವಯಸಿನಲ್ಲೇ ಡೈರೆಕ್ಟರ್ ಕ್ಯಾಪ್ ತೊಟ್ಟ ಲೋಹಿತ್.ಎಚ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಆ್ಯಕ್ಟ್ ಮಾಡ್ತಿದ್ದಾರೆ.. ಯಾವುದು ಆ ಸಿನಿಮಾ ಅನ್ನೋ ಪ್ರಶ್ನೆಗೆ ಉತ್ತರ ‘ಸತ್ಯ ಮಂಗಳ’.. ನೀವು ಸತ್ಯ ಮಂಗಳ ಫಾರೆಸ್ಟ್ ಅನ್ನ ಕೇಳಿರ್ತಿರಲ್ವಾ.. ಅದೇ ಹೆಸರಿನ ಸಿನಿಮಾ ಇದು.. ಹಾರರ್ ಕಥೆಯೊಂದನ್ನ ಶಿವಣ್ಣ ಬಳಿ ಹೇಳಿಸಲು ಹೊರಟಂತೆ ಕಾಣುತ್ತಿದೆ ನಿರ್ದೇಶಕ ಲೋಹಿತ್.. ಒಟ್ಟಿನಲ್ಲಿ ಶಿವಣ್ಣನ ಕಡೆಯಿಂದ ಸಾಲು ಸಾಲು ಸಿನಿಮಾಗಳ ಹಬ್ಬ ಮುಂದಿನ ದಿನಗಳಲ್ಲಿ ಕನ್ನಡ ಸಿನಿ ಪ್ರೇಕ್ಷಕ ಕುಲಕ್ಕೆ ಸಿಗೋದಂತು ಗ್ಯಾರಂಟಿ..

Source: newsfirstlive.com Source link