ಹಾಡಹಗಲೇ ವೃದ್ಧ ದಂಪತಿಯನ್ನು ಬರ್ಬರವಾಗಿ ಕೊಂದ ದುಷ್ಕರ್ಮಿಗಳು

ಹಾಡಹಗಲೇ ವೃದ್ಧ ದಂಪತಿಯನ್ನು ಬರ್ಬರವಾಗಿ ಕೊಂದ ದುಷ್ಕರ್ಮಿಗಳು

ಬೆಂಗಳೂರು: ನಗರದಲ್ಲಿ ಹಾಡಹಗಲೇ ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಕಾಶಿನಗರದಲ್ಲಿ ನಡೆದಿದೆ.

ಶಾಂತರಾಜು (65) ಹಾಗೂ ಪ್ರೇಮಲತಾ (62) ಹತ್ಯೆ‌ಯಾದವರು. ವೃದ್ಧ ದಂಪತಿಯ ಈ ಹತ್ಯೆಗೆ ಸಿಲಿಕಾನ್​ ಸಿಟಿ ಬೆಚ್ಚಿಬಿದ್ದಿದೆ. ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು, ಚಾಕುವಿನಿಂದ ಕುತ್ತಿಗೆಯನ್ನು ಸೀಳಿ ಹತ್ಯೆ ಮಾಡಿದ್ದಾರೆ.

20 ವರ್ಷದಿಂದಲೂ ಕಾಶಿನಗರದಲ್ಲಿ ವಾಸವಿದ್ದ ದಂಪತಿಗೆ ಮಕ್ಕಳಿರಲಿಲ್ಲ, ಹೀಗಾಗಿ ಇಬ್ಬರೆ ಮನೆಯಲ್ಲಿ ವಾಸಿಸುತ್ತಿದ್ದರಂತೆ. ಇನ್ನು ಮೃತ ಶಾಂತರಾಜು ಬಿಎಂಟಿಸಿಯ ನಿವೃತ್ತ ಉದ್ಯೋಗಿಯಾಗಿದ್ದು, ಒಂದು ಮನೆಯಲ್ಲಿ‌ ವಾಸವಿದ್ದು, ಇನ್ನುಳಿದ 2 ಮನೆಗಳನ್ನು ಬಾಡಿಗೆಗೆ ನೀಡಿದ್ರು ಎನ್ನಲಾಗಿದೆ. ಇನ್ನು ವೃದ್ಧ ದಂಪತಿಯ ಚಿನ್ನಾಭರಣ, ಹಣ ದೋಚುವ ಸಲುವಾಗಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪರಿಚಯಸ್ಥರೇ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

blank

ಮಧ್ಯಾಹ್ನದದವರೆಗೆ ಅಕ್ಕಪಕ್ಕದವರ ಜತೆಗಿದ್ದರು, ಮಧ್ಯಾಹ್ನದ ನಂತರ ದುಷ್ಕರ್ಮಿಗಳು ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ಇನ್ನು ಘಟನಾ ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಚಯಸ್ಥರಿಂದಲೇ ಕೃತ್ಯ ನಡೆದಿರುವುದಾಗಿ ಹೇಳಲಾಗ್ತಿದೆ.

Source: newsfirstlive.com Source link