ಸೆಲ್ಫಿ-ಗ್ರೂಫಿಗಳ ನಡುವಿನ ಹಾರರ್​ ಕಥೆ ಹೇಳೋಕೆ ರೆಡಿಯಾದ ಹೊಸಬರ ‘ಗ್ರೂಫಿ’

ಸೆಲ್ಫಿ-ಗ್ರೂಫಿಗಳ ನಡುವಿನ ಹಾರರ್​ ಕಥೆ ಹೇಳೋಕೆ ರೆಡಿಯಾದ ಹೊಸಬರ ‘ಗ್ರೂಫಿ’

ಸದ್ಯಕ್ಕಂತೂ ಸಿನಿಮಾ ಮಂದಿಗಳಲ್ಲಿ ಸಿನಿಮಾ ನೋಡೋ ವಾತಾವರಣ ಕೊಂಚ ಕಡಿಮೆ ಇದೆ.. ಒಳ್ಳೆ ಒಳ್ಳೆ ಸಿನಿಮಾಗಳು ಥಿಯೇಟರ್​ಗಳಿಗೆ ಬರಬೇಕಿದೆ ಪ್ರೇಕ್ಷಕ ಪ್ರಭುಗಳು ಕೂಡ ತಮ್ಮ ಪಾದಗಳನ್ನ ಥಿಯೇಟರ್ ಅಂಗಳದ ಕಡೆ ಇಡಬೇಕಿದೆ.. ಇಂತಹ ಟೈಮ್​​ನಲ್ಲಿ ಪ್ರೇಕ್ಷಕರನ್ನ ಕರೆಸಿ ರಂಜಿಸೋ ಭರವಸೆಯನ್ನ ನೀಡಿದೆ ಗ್ರೂಫಿ ಸಿನಿಮಾ..

blank

ಒಬ್ಬರೋ ಇಬ್ಬರೋ ಸೆರ್ಕೋಂಡು ಮುಮ್ಮುಖವಾಗಿ ಮೊಬೈಲ್​ನಲ್ಲಿ ಫೋಟೋ ತೆಗೆದುಕೊಳ್ಳೋದನ್ನ ಸೆಲ್ಫಿ ಅಂತಾರೆ.. ಹತ್ತಾರು ಜನ ಒಟ್ಟಿಗೆ ಸೇರ್ಕೊಂಡು ಫೋಟೋ ಕ್ಲಿಕಿಸಿಕೊಂಡ್ರೆ ಗ್ರೂಫಿ ಅಂತಾರೆ.. ಹಿಂದೊಮ್ಮೆ ಪೇಪರ್​ನಲ್ಲಿ ಬಂದ ಒಂದು ಸುದ್ದಿ ಸಮಾಚಾರವನ್ನ ಹಾರರ್ ಕಮ್ ಸಸ್ಪೆನ್ಸ್ ಲವ್ ಸ್ಟೋರಿಯನ್ನ ಮಾಡಿ ಗೆದ್ದಿದೆ ಗ್ರೂಫಿ ತಂಡ..

ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ಬರ್ತಿದೆ ಹೊಸಬರ ಸಿನಿಮಾ ‘ಗ್ರೂಫಿ’

ಸಿನಿಮಾದ ಟೈಟಲೇ ಹೇಳುವಂತೆ ಸಿನಿಮಾ ನಿರ್ದೇಶಕರೆ ಹೇಳಿಕೊಂಡೊಂತೆ ಇದು ಸಸ್ಪೆನ್ಸ್ ಕಮ್ ಲವ್ ಸ್ಟೋರಿ ಕಮ್ ಹಾರರ್ ಸಿನಿಮಾ.. ಅಬ್ಬಬ್ಬಾ ಇಷ್ಟಲ್ಲಾ ಒಂದೇ ಸಿನಿಮಾದಲ್ಲಿ ಅಂದುಕೊಂಡ್ರ ಹೌದು. ಒಂದು ಒಂದು ಸಿನಿಮಾದಲ್ಲಿ ಏನೆಲ್ಲಾ ಇರ್ಬೆಕು ಅಂತ ಅನ್ಕೋತೀವೋ ಅದನ್ನಲ್ಲ ನೀಟಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು..

ಕಾಲೇಜು ಸ್ಟುಡೆಂಟ್ ಪ್ರಾಜೆಕ್ಟ್ ವರ್ಕ್ ಗಾಗಿ ಪ್ರಿನ್ಸಿಪಾಲ್ ಒಪ್ಪಿಗೆ ಕೇಳದೆ ಸಾಧನೆ ಶಿಖರವನ್ನ ಏರಲು ಮುಂದಾಗುತ್ತಾರೆ.. ಪ್ರಶ್ಚಿಮ ಘಟ್ಟದ ಬೆಟ್ಟ ಗುಡ್ಡಗಳನ್ನ ಇಂಟ್ರಸ್ಟಿಂಗ್ ಜರ್ನಿಯೊಂದಿಗೆ ಒಂದು ಲವ್ ಸ್ಟೋರಿ, ಅದ್ರಲೊಂದು ಟ್ವಿಸ್ಟ್, ಒಂದು ನಿಗೂಢತೆ ಮತ್ತು ಭಯ, ಸಸ್ಪೆನ್ಸ್​​ಗಳ ನಡುವೆ ಸಾಧನೆ , ಆ ಸಾಧನೆಯ ಹಿಂದೆ ಒಂದು ಬೋಧನೆ.. ಈ ಅಷ್ಟು ಸಂದರ್ಭ ಸ್ವಾರಸ್ಯಗಳು ಗ್ರೂಫಿ ಸಿನಿಮಾದೊಳಗೆ ಅಡಗಿದೆ.. ಇಂಟರ್​​ವೆಲ್ ತನಕ ಸಿನಿಮಾ ಒಂದೂ ರೀತಿ ಇದ್ರೆ ಇಂಟರ್​​ವಲ್ ಆದ್ಮಲೆ ಪ್ರೇಕ್ಷಕರ ಎಡ್ಜ್ ಆಫ್ ದಿ ಸೀಟ್ ಮೇಲೆ ತಂದು ಕೂರಿಸುತ್ತೆ.. ಸಿನಿಮಾ ನೋಡಿದ ಗಣ್ಯರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ..

blank

ಕೆ.ಜಿ ಸ್ವಾಮಿ ನಿರ್ಮಾಣದ ಗ್ರೂಫಿ ಸಿನಿಮಾದಲ್ಲಿ ಮುಖ್ಯಪಾತ್ರದಾರಿಗಳಾಗಿರೋ ಆರ್ಯನ್ ಪದ್ಮಶ್ರೀ ಎಸ್ ಜೈನ್ ,ಗಗನ್ , ಉಮಾ ಮಯ್ಯೂರಿ , ಪ್ರಜ್ವಲಾ , ಸಂಧ್ಯಾ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡಿದ್ದಾರೆ.. ವಿಜೇತ್​ ಕೃಷ್ಣ ಸಂಗೀತ ಕೇಳೋದಕ್ಕೆ ಇಂಪಾಗಿದೆ.. ಲಕ್ಷ್ಮೀ ಕಾಂತ್ ಕ್ಯಾಮೆರಾ ನೋಡಲು ತಂಪಾಗಿದೆ..

ಸೆಲ್ಫಿ ಗೀಳಿಗೆ ಬಿದ್ದು ಎಷ್ಟೋ ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ…ಈ ರೀತಿ ಆಗಿರುವ ಒಂದು ನೈಜ ಘಟನೆಯನ್ನು ಆದರಿಸಿ ನಿರ್ದೇಶಕ ಡಿ. ರವಿ ಅರ್ಜುನ್ ಸುಂದರವಾಗಿ ತೋರಿಸಿಕೊಟ್ಟಿದ್ದಾರೆ.. ಧೈರ್ಯ ಮಾಡಿ ಸಿರಗನ್ನಡ ಪ್ರೇಕ್ಷಕರನ್ನ ರಂಜಿಸಲು ಮುಂದೆ ಬಂದಿರೋ ಹೊಸಬರ ಗ್ರೂಫಿ ತಂಡಕ್ಕೆ ನಿಮ್ಮ ಆರ್ಶಿವಾದ ಇರ್ಲಿ..

Source: newsfirstlive.com Source link