ಒಂದು ಜಿಲ್ಲೆ ಕಳೆದುಕೊಂಡ ತಾಲಿಬಾನಿಗಳು; ಅಮ್ರುಲ್ಲಾ ಸಾಲೇಹ್ ನೇತೃತ್ವದ ಮೈತ್ರಿಗೆ ಮೊದಲ ಗೆಲುವು

ಒಂದು ಜಿಲ್ಲೆ ಕಳೆದುಕೊಂಡ ತಾಲಿಬಾನಿಗಳು; ಅಮ್ರುಲ್ಲಾ ಸಾಲೇಹ್ ನೇತೃತ್ವದ ಮೈತ್ರಿಗೆ ಮೊದಲ ಗೆಲುವು

ಅಫ್ಘಾನಿಸ್ತಾನವನ್ನ ತಾಲಿಬಾನ್ ವಶಪಡಿಸಿಕೊಂಡರೂ ಪಂಜ್​ಶಿರ್ ಜಿಲ್ಲೆಯೊಂದನ್ನ ಮಾತ್ರ ತಾಲಿಬಾನಿಗಳು ವಶಪಡಿಸಿಕೊಳ್ಳಲಾಗಿರಲಿಲ್ಲ. ಪಂಜ್​ಶಿರ್​​ಗೆ ತೆರಳಿದ್ದ ಆಫ್ಘನ್ ಸರ್ಕಾರ ಉಪಾಧ್ಯಕ್ಷ ಅಮ್ರುಲ್ಲಾ ಸಾಲೇಹ್ ಇದೀಗ ಉತ್ತರ ಅಫ್ಘನ್​ನ ಸ್ಥಳೀಯ ನಾಯಕರ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ತಾಲಿಬಾನಿಗಳ ವಿರುದ್ಧ ಅಘೋಷಿತ ಯುದ್ಧ ಘೋಷಿಸಿದ್ದಾರೆ.

ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ; ‘ನಾವೀಗ ನಿರಾಶ್ರಿತರು’ ಎಂದು ಹಾಡುತ್ತಾ ನೋವು ತೋಡಿಕೊಂಡ ಮಹಿಳೆಯರು

ಈ ಯುದ್ಧದ ಮೊದಲ ಜಯ ಎಂಬಂತೆ ಇದೀಗ ಅಮ್ರುಲ್ಲಾ ಸಾಲೇಹ್ ಮತ್ತು ಅಹ್ಮದ್ ಮಸೂದ್ ನೇತೃತ್ವದದಲ್ಲಿ ತಾಲಿಬಾನಿಗಳು ವಶಪಡಿಸಿಕೊಂಡಿದ್ದ ಚರಿಕರ್ ಜಿಲ್ಲೆಯನ್ನ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಹರಿದಾಡುತ್ತಿದ್ದು ಚರಿಕರ್ ಜಿಲ್ಲೆಯಲ್ಲಿ ಹಲವು ನಾಯಕರು ಮೈತ್ರಿ ಬಾವುಟವನ್ನ ಹಿಡಿದು ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ.

ಇದನ್ನೂ ಓದಿ: ಜೋ ಬೈಡನ್ ಯಡವಟ್ಟು; ₹1.5 ಲಕ್ಷ ಕೋಟಿ ಬೆಲೆಯ ಶಸ್ತ್ರಾಸ್ತ್ರ, ವಾಹನ ತಾಲಿಬಾನ್​​ ಪಾಲು

ಚರಿಕರ್ ಜಿಲ್ಲೆಯನ್ನ ವಶಪಡಿಸಿಕೊಂಡ ಬೆನ್ನಲ್ಲೇ ಮತ್ತೆರಡು ಜಿಲ್ಲೆಗಳಲ್ಲಿ ಮೈತ್ರಿ ಪಕ್ಷಗಳು ಮತ್ತು ತಾಲಿಬಾನಿಗಳ ನಡುವೆ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ. ಸದ್ಯ ಚರಿಕರ್ ಜಿಲ್ಲೆಯನ್ನು ವಶಪಡಿಸಿಕೊಂಡಿದ್ದು ಮೈತ್ರಿ ಪಕ್ಷಗಳಿಗೆ ಸಿಕ್ಕ ಮೊದಲ ಜಯವಾಗಿದೆ.

Source: newsfirstlive.com Source link