‘ನಮ್ಮ ರಕ್ಷಣಾ ವ್ಯವಸ್ಥೆ ಬಲಾಢ್ಯವಾಗಿದೆ.. ಬಾಹ್ಯ ಬೆದರಿಕೆಗೆ ಹೆದರುವ ಅವಶ್ಯಕತೆ ಭಾರತಕ್ಕಿಲ್ಲ’

‘ನಮ್ಮ ರಕ್ಷಣಾ ವ್ಯವಸ್ಥೆ ಬಲಾಢ್ಯವಾಗಿದೆ.. ಬಾಹ್ಯ ಬೆದರಿಕೆಗೆ ಹೆದರುವ ಅವಶ್ಯಕತೆ ಭಾರತಕ್ಕಿಲ್ಲ’

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜಿಲ್ಲೆಯಲ್ಲಿ ಮಾತನಾಡಿ.. ಅಫ್ಘಾನಿಸ್ಥಾನದಲ್ಲಿ ದಿನದಿಂದ‌ ದಿನಕ್ಕೆ ಅರಾಜಕತೆ ತಾಂಡವಾಡುತ್ತಿದೆ.. ಈಗಾಗಲೇ ವಿದೇಶಾಂಗ ಸಚಿವ ಜೈಶಂಕರ್ ಅವರು ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಭಾರತ ಸರ್ಕಾರ ಅಫ್ಘಾನಿಸ್ಥಾನದ ಪರಿಸ್ಥಿತಿಯನ್ನು ಗಹನವಾಗಿ ಗಮನಿಸುತ್ತಿದೆ. ಅಲ್ಲಿ‌ ಸಿಲುಕಿಕೊಂಡಿರುವ ಪ್ರತಿಯೊಬ್ಬ ಭಾರತೀಯರನ್ನ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಸಂಸತ್​​ ಭವನದಿಂದ ಸಲ್ಮಾ ಅಣೆಕಟ್ಟುವರೆಗೆ; ಅಫ್ಘಾನಿಸ್ತಾನಕ್ಕೆ ಭಾರತ ನೀಡಿದ ಕೊಡುಗೆ!

ಕೇಂದ್ರ ಸರ್ಕಾರ ಈಗಾಗಲೇ ಅನೇಕರನ್ನ ಜನರನ್ನ ರಕ್ಷಣೆ ಮಾಡಿದೆ. ಭಾರತದ ಕೊನೆಯ ಭಾರತೀಯ ವ್ಯಕ್ತಿಯನ್ನ ರಕ್ಷಣೆ ಮಾಡುವವರೆಗೂ ಸರ್ಕಾರ ಕಾರ್ಯ ನಿರ್ವಹಿಸಲಿದೆ. ಅದಕ್ಕೆ ಬೇಕಾದಂತಹ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಸರ್ಕಾರ ಸನ್ನದ್ಧವಾಗಿದೆ. ಕೆಲವೊಂದು ವಿಷಯಗಳನ್ನ ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ.. ಅಲ್ಲಿ ಕನ್ನಡಿಗರು ಎಷ್ಟು ಜನ ಇದ್ದಾರೆ ಎಂಬ ಸ್ಪಷ್ಟತೆ ಇಲ್ಲ.. ಕನ್ನಡಿಗರು, ಆಂಧ್ರದವರು ಎನ್ನದೇ ಭಾರತದ ಎಲ್ಲರನ್ನೂ ರಕ್ಷಣೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.

ಇದನ್ನೂ ಓದಿ: ಹಾಡಹಗಲೇ ಅಫ್ಘಾನ್​​​​ ಸೇನೆಯ ನಾಲ್ವರು ಕಮಾಂಡರ್​​ಗಳನ್ನು ನೇಣಿಗೇರಿಸಿದ ತಾಲಿಬಾನ್

ಅಲ್ಲಿ ಕೆಲವು ವ್ಯವಸ್ಥೆಗಳು ಅಯೋಮಯ ಸ್ಥಿತಿ ತಲುಪಿರುವುದರಿಂದ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಭಾರತ ಸರ್ಕಾರ ಯಾವುದೇ ಬಾಹ್ಯ ಬೆದರಿಕೆಗೆ ಹೆದರುವ ಅವಶ್ಯಕತೆ ಇಲ್ಲ.. ನಮ್ಮ ರಕ್ಷಣಾ ವ್ಯವಸ್ಥೆ ಬಲಾಢ್ಯವಾಗಿದೆ ಹೀಗಾಗಿ ಎಲ್ಲ ಪ್ರಯತ್ನ ನಡೆಯುತ್ತಿದೆ. ಗಡಿ ಪ್ರದೇಶ ಹೊರತುಪಡಿಸಿ ದೇಶದ ಬೇರೆಲ್ಲೂ ಭಯೋತ್ಪಾದನಾ ಚಟುವಟಿಕೆಗಳು ನಡೆದಿಲ್ಲ. ದೇಶದಲ್ಲಿ ಶೂನ್ಯ ಭಯೋತ್ಪಾದನಾ ಚಟುವಟಿಕೆ ಇದೆ ಹೀಗಾಗಿ ಭಯಪಡುವ ಯಾವುದೇ ಅವಶ್ಯಕತೆ ಇಲ್ಲ ಎಂದಿದ್ದಾರೆ.

Source: newsfirstlive.com Source link