ಸಾಮೂಹಿಕ ವಿವಾಹದಲ್ಲಿ 2 ಕುಟುಂಬಗಳ ನಡುವೆ ಮಾರಾಮಾರಿ; ತಾಳಿ ಕಟ್ಟೋ ವಿಷಯಕ್ಕೆ ಕಲಹ

ಸಾಮೂಹಿಕ ವಿವಾಹದಲ್ಲಿ 2 ಕುಟುಂಬಗಳ ನಡುವೆ ಮಾರಾಮಾರಿ; ತಾಳಿ ಕಟ್ಟೋ ವಿಷಯಕ್ಕೆ ಕಲಹ

‘ತಾಳಿ ಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ’ ಎಂದು ಸ್ವರ ಮಾಂತ್ರಿಕ ದಿ. ಎಸ್​. ಪಿ. ಬಾಲಸುಬ್ರಹ್ಮಣ್ಯಂ ಅವರ ಕಂಠಸಿರಿಯಲ್ಲಿ ಕನ್ನಡದಲ್ಲಿ ಸುಂದರವಾದ ಹಾಡೊಂದಿದೆ. ಇಂತಹ ಶುಭ ಘಳಿಗೆಯಲ್ಲಿ ಎರಡು ಕುಟುಂಬಗಳ ವರರು ಕೈಯಲ್ಲಿ ಹೂವಿನ ಹಾರ ಹಿಡಿದು ನಗುತ್ತಾ ಪೋಟೋಗೆ ಪೋಸ್​ ನೀಡೋದು ಬಿಟ್ಟು ತಾವು ತಾವೇ ಬಡಿದಾಡಿಕೊಂಡಿದ್ದಾರೆ..

ಹೌದು ವಧು ವರರು ತಾಳಿ ಕಟ್ಟುವ ವಿಚಾರವಾಗಿ ಬಡಿದಾಡಿಕೊಂಡ ಅಪರೂಪದ ಘಟನೆಯೊಂದು ತಮಿಳುನಾಡಿನ ಕುಂದ್ರತೂರ್ ಪ್ರದೇಶದಲ್ಲಿ ನಡೆದಿದೆ. ಮದುವೆಯಲ್ಲಾಗುವ ವೆಚ್ಚಕ್ಕೆ ಕಡಿವಾಣ ಹಾಕಲು ಕುಂದ್ರತೂರ್ ಮುರುಗನ್​ ದೇವಸ್ಥಾನದ ಕಮಿಟಿಯವ್ರು ಸಾಮೂಹಿಕ ಮದುವೆ ಆಯೋಜಿಸಿದ್ದಾರೆ.

ಇದನ್ನೂ ಓದಿ: ಸೂಪರ್​ ಮಾರ್ಕೆಟ್​ನಲ್ಲಿ ಖರೀದಿಗೆ ಬಂದಿದ್ದ ಮಹಿಳೆಗೆ ಕೈಗೆ ಸಿಕ್ಕಿದ್ದು ಭಯಂಕರ ಹಾವು

ಈ ಸಾಮೂಹಿಕ ಮದುವೆಗೆ ಸಾಕಷ್ಟು ವಧು ವರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಆದರೆ ತಾಳಿ ಕಟ್ಟುವ ವೇಳೆಯಲ್ಲಿ ನೂತನ ಎರಡು ಕುಟುಂಬಗಳ ನಡುವೆ ಮಾರಾಮಾರಿ ಶುರುವಾಗಿದೆ

ಮೊದಲು ತಾಳಿ ಕಟ್ಟುವ ವಿಚಾರವಾಗಿ ನಡೆದ ಜಗಳದಲ್ಲಿ ಎರಡು ಕುಟುಂಬಗಳು ಜಗಳಕ್ಕಿಳಿದಿದ್ದು, ಜಗಳ ತಾರಕಕ್ಕೇರಿದೆ. ಇವರ ನಡುವೆ ಉಳಿದ ನವ ದಂಪತಿಗಳು ಕೈಯಲ್ಲಿ ತಾಳಿ ಹಿಡಿದು ಬೆಕ್ಕಸ ಬೆರಗಾಗಿ ನಿಂತ ಪ್ರಸಂಗ ನಡೆದಿದೆ. ಸದ್ಯ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ..

Source: newsfirstlive.com Source link