ಸನ್ಮಾನ ಕಾರ್ಯಕ್ರಮದಲ್ಲಿ ರೈತರ ಅಳಲು ಕೇಳದ ಕೇಂದ್ರ ಸಚಿವ ಭಗವಂತ ಖೂಬಾ

ಸನ್ಮಾನ ಕಾರ್ಯಕ್ರಮದಲ್ಲಿ ರೈತರ ಅಳಲು ಕೇಳದ ಕೇಂದ್ರ ಸಚಿವ ಭಗವಂತ ಖೂಬಾ

ಬೀದರ್: ಕೇಂದ್ರ ಸಚಿವರಲ್ಲಿ ತಮ್ಮ ನೋವು ಹೇಳಿಕೊಳ್ಳಲು ಬಂದಿದ್ದ ರೈತರನ್ನು ಪೊಲೀಸರು ತಡೆದಿದ್ದು, ರೈತರ ಭೇಟಿಗೆ ಅವಕಾಶ ನೀಡದೇ ಕೇಂದ್ರ ನವೀಕರಿಸಬಹುದಾದ ಇಂಧನ ಹಾಗು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಮೊಂಡುತನ ಪ್ರದರ್ಶಿಸಿದ್ದಾರೆ ಎಂದು ಕಾರಂಜಾ ರೈತ ಸಂತ್ರಸ್ತರು ಗರಂ ಆಗಿದ್ದಾರೆ.

ಇಂದು ನಗರದ ಝೀರಾ ಕನ್ವೆನ್ಷನ್ ಹಾಲ್​ನಲ್ಲಿ ನಾಗರಿಕ ಸನ್ಮಾನ ಸಮಿತಿಯಿಂದ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ, ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರಂಜಾ ರೈತ ಸಂತ್ರಸ್ತರು ಸಚಿವರನ್ನ ಭೇಟಿ ಮಾಡಲು ಹರಸಾಹಸ ಪಟ್ಟಿದ್ದಾರೆ. ವೇದಿಕೆ ಬಳಿ ಎರಡು ಕಡೆ ಸಚಿವರನ್ನ ಭೇಟಿಗೆ ಯತ್ನಿಸಿದರೂ ಪೊಲೀಸರು ತಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  ಕೇಂದ್ರ ಸಚಿವ ನಾರಾಯಣಸ್ವಾಮಿ ಯಡವಟ್ಟು: ಹುತಾತ್ಮ ಸೈನಿಕನ ಬದಲಾಗಿ ಜೀವಂತ ಸೈನಿಕನ ಮನೆಗೆ ಹೋಗಿ ಸಾಂತ್ವನ

blank

ಇನ್ನು ಹಾಲ್​ನ ಆವರಣದಲ್ಲಿ ಕೂಡ ಸಂತ್ರಸ್ತ ರೈತರಿಗೆ ಭೇಟಿಯಾಗದಂತೆ ಪೊಲೀಸರು ತಡೆದಿದ್ದು, ಬಳಿಕ ವೇದಿಕೆ ಬಳಿ ಹೋಗಿ ನಿಂತರು ಕೇಂದ್ರ ಸಚಿವರು ಮಾತ್ರ ರೈತರಿಗೆ ಕ್ಯಾರೆ ಎನ್ನದೇ ಮೊಂಡುತನ ಪ್ರದರ್ಶಿಸಿದ್ದಾರೆ ಎನ್ನಲಾಗಿದೆ

ಕೊನೆಗೂ ಕೇಂದ್ರ ಸಚಿವರ ಭೇಟಿಯಾಗದೇ ನಿರಾಸೆಗೊಂಡು ವಾಪಸಾದ ಕಾರಂಜಾ ಸಂತ್ರಸ್ತ ರೈತರು, ಸಭೆ, ಸಮಾರಂಭ, ಸನ್ಮಾನ ಮೆರವಣಿಗೆಯಂತಹ ಸಂಭ್ರಮದಲ್ಲಿರುವ ಕೇಂದ್ರ ಸಚಿವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..

Source: newsfirstlive.com Source link