2024 ರ ಚುನಾವಣೆ ಗೆಲ್ಲುವುದೇ ಗುರಿ; ವಿಪಕ್ಷಗಳ ನಾಯಕರ ಸಭೆಯಲ್ಲಿ ಸೋನಿಯಾ ಒಗ್ಗಟ್ಟಿನ ಮಂತ್ರ

2024 ರ ಚುನಾವಣೆ ಗೆಲ್ಲುವುದೇ ಗುರಿ; ವಿಪಕ್ಷಗಳ ನಾಯಕರ ಸಭೆಯಲ್ಲಿ ಸೋನಿಯಾ ಒಗ್ಗಟ್ಟಿನ ಮಂತ್ರ

ನವದೆಹಲಿ: 2024 ರ ಚುನಾವಣೆಯನ್ನ ಗುರಿಯಾಗಿಟ್ಟುಕೊಂಡು ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ವಿಪಕ್ಷಗಳ ನಾಯಕರ ಜೊತೆಗೆ ವರ್ಚುವಲ್ ಸಭೆ ಕರೆದಿದ್ದರು.

ಸಭೆಯಲ್ಲಿ ಟಿಎಂಸಿ, ಎನ್​ಸಿಪಿ, ಡಿಎಂಕೆ, ಶಿವ್​ಸೇನಾ, ಜೆಎಂಎಂ, ಸಿಪಿಐ, ಸಿಪಿಐ(ಎಂ), ಎನ್​ಸಿ, ಆರ್​ಜೆಡಿ, ಅಐಯುಡಿಎಫ್, ವಿಸಿಕೆ, ಲೋಕತಾಂತ್ರಿಕ್ ಜನತಾ ದಳ, ಜೆಡಿಎಸ್, ಆರ್​ಎಲ್​ಡಿ, ಆರ್​ಎಸ್​ಪಿ, ಕೇರಳ ಕಾಂಗ್ರೆಸ್, ಪಿಡಿಪಿ ಮತ್ತು ಐಯುಎಂಎಲ್​ನ ನಾಯಕರು ಭಾಗವಹಿಸಿದ್ದರು.

ಇದನ್ನೂ ಓದಿ: ರಾಹುಲ್ ಗಾಂಧಿ ಪೋಸ್ಟ್​ ಮಾಡಿದ್ದ ಫೋಟೋಗಳನ್ನ ಡಿಲೀಟ್ ಮಾಡಿದ ಫೇಸ್​​ಬುಕ್, ಇನ್​ಸ್ಟಾಗ್ರಾಮ್

ವಿಪಕ್ಷಗಳ ನಾಯಕರನ್ನುದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ.. 2024 ರ ಚುನಾವಣೆ ಗೆಲ್ಲುವುದು ನಮಗೆ ಸವಾಲಾಗಿದೆ, ಆದ್ರೆ ಜೊತೆಯಾಗಿ ನಾವಿದನ್ನು ಗೆಲ್ಲಬಹುದಾಗಿದೆ ಎಂದು ಹೇಳಿದ್ದಾರೆ. ದೇಶದ ಹಿತಾಸಕ್ತಿಗಾಗಿ ನಾವು ಮತ್ತೆ ನಿಲ್ಲುವ ಸಮಯ ಎದುರಾಗಿದೆ. ನಮ್ಮ ಕೊನೆಯ ಗುರಿ 2024 ರ ಲೋಕಸಭಾ ಚುನಾವಣೆಯೇ ಆಗಿದೆ. ಅದಕ್ಕಾಗಿ ನಾವು ವ್ಯವಸ್ಥಿತವಾಗಿ ಪ್ಲಾನ್ ಮಾಡಬೇಕಿದೆ. ಒಂದೇ ಮನಸ್ಥಿತಿಯಿಂದ ನಾವು ದೇಶಕ್ಕೆ ಸ್ವಾತಂತ್ರ್ಯ ಚಳುವಳಿಯಲ್ಲಿ ಮತ್ತು ಸಂವಿಧಾನದಲ್ಲಿ ನಂಬಿಕೆ ಇಟ್ಟ ಸರ್ಕಾರವನ್ನು ರಚಿಸಬೇಕಿದೆ ಎಂದಿದ್ದಾರೆ.

ನಾವು ಜೊತೆಯಾಗಿ ಕೆಲಸ ಮಾಡುವುದರ ಹೊರತಾಗಿ ಪರ್ಯಾಯ ಮಾರ್ಗಗಳಿಲ್ಲ ಅಂತಲೂ ಇದೇ ವೇಳೆ ಸೋನಿಯಾ ಗಾಂಧಿ ವಿಪಕ್ಷ ನಾಯಕರನ್ನುದ್ದೇಶಿಸಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

Source: newsfirstlive.com Source link