ಸಾರಾ ಅಲಿಖಾನ್ ಫೋಟೋ ಶೂಟ್​ಗೆ ಫಿದಾ ಆದ ಡಿಸೈನರ್ ಮನಿಷ್ ಮಲ್ಹೋತ್ರಾ

ಸಾರಾ ಅಲಿಖಾನ್ ಫೋಟೋ ಶೂಟ್​ಗೆ ಫಿದಾ ಆದ ಡಿಸೈನರ್ ಮನಿಷ್ ಮಲ್ಹೋತ್ರಾ

ಬಾಲಿವುಡ್ ನಿಟ ಸಾರಾ ಅಲಿ ಖಾನ್ ಮತ್ತೊಮ್ಮೆ ಹಾಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಬಾರಿ ಬಿಕಿನಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಜೊತೆಗೆ ಸ್ನೇಕ್ ಪ್ರಿಂಟ್ ಶ್ರಗ್ ಧರಿಸಿದ್ದಾರೆ.

ಸಾರಾ ಫೋಟೋಶೂಟ್​ಗೆ ಡಿಸೈನರ್ ಮನಿಷ್ ಮಲ್ಹೋತ್ರಾ ಮತ್ತು ಚಿಕ್ಕಮ್ಮ ಸಬಾ ಅಲಿ ಖಾನ್ ರಿಯಾಕ್ಟ್ ಮಾಡಿದ್ದಾರೆ. ಪ್ರತಿಬಾರಿ ಫೋಟೋಶೂಟ್ ಮಾಡಿಸಿಕೊಂಡಾಗಲೂ ಸಾರಾ ಅಲಿಖಾನ್​ಗೆ ಹೊಗಳಿಕೆಯ ಮಹಾಪೂರವೇ ಹರಿದುಬರುತ್ತವೆ.

 

 

View this post on Instagram

 

A post shared by Sara Ali Khan (@saraalikhan95)

ಈ ಬಾರಿ ತಮ್ಮ ಫೋಟೋ ಜೊತೆಗೆ ಸಖತ್ ಕ್ಯಾಪ್ಷನ್​ನ್ನೂ ಸಾರಾ ಕೊಟ್ಟಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿರುವ ಸಾರಾ ಅಲಿಖಾನ್.. ತುಟಿಗಳ ಹೇಳಲು ಹೆದರುವುದನ್ನು ಕಣ್ಣುಗಳು ಕಿರುಚಿ ಹೇಳುತ್ತವೆ. ಸೋ ನೀನು ಏನಾದರೂ ಮುಚ್ಚಿಟ್ಟುಕೊಂಡಿದ್ದರೆ ಬೇರೆಡೆಗೆ ನೋಡು ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಕಮೆಂಟ್ ಹಾಕಿರುವ ಡಿಸೈನರ್ ಮನಿಷ್ ಮಲ್ಹೋತ್ರಾ ಲವ್ ಸ್ಟ್ರಕ್ ಇಮೋಜಿ ಹಾಕಿದ್ದಾರೆ. ಇತ್ತ ಚಿಕ್ಕಮ್ಮ ಸಬಾ ಅಲಿ ಖಾನ್ ಮಾಷಾ ಅಲ್ಲಾ ಎಂದು ಬರೆದಿದ್ದಾರೆ.

Source: newsfirstlive.com Source link