ಚುಚ್ಚು ಮದ್ದು ರಹಿತ ಸ್ವದೇಶಿ ಲಸಿಕೆ ಜೈಕೋವ್​-ಡಿಗೆ ಸಿಕ್ತು DCGI ಅನುಮತಿ

ಚುಚ್ಚು ಮದ್ದು ರಹಿತ ಸ್ವದೇಶಿ ಲಸಿಕೆ ಜೈಕೋವ್​-ಡಿಗೆ ಸಿಕ್ತು DCGI ಅನುಮತಿ

ನವದೆಹಲಿ: ಸ್ವದೇಶಿ ಕಂಪನಿ ಝೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಚುಚ್ಚುಮದ್ದು ರಹಿತ ಲಸಿಕೆ ಜೈಕೋವ್​-ಡಿಗೆ DCGI ತುರ್ತು ಬಳಕೆಗೆ ಅನುಮತಿ ನೀಡಿದೆ.

12 ವರ್ಷ ಮೇಲ್ಪಟ್ಟವರು ಈ ಲಸಿಕೆಯ 3 ಡೋಸ್​ ಪಡೆಯಬಹುದು.. 12-18 ವರ್ಷದ ಮಕ್ಕಳಿಗೆ ಜೈಕೋವ್​-ಡಿ ಸುರಕ್ಷಿತ ಎಂದು ಕಂಪನಿ ಹೇಳಿದೆ. ಲಸಿಕೆ ತುರ್ತು ಬಳಕೆಗೆ ತಜ್ಞರು ಶಿಫಾಸರು ಮಾಡಿದ್ದರು. ಇದೀಗ ಡಿಸಿಜಿಐ ಅನುಮತಿ ನೀಡಿದೆ. ಡಿಸಿಜಿಐನಿಂದ ಅನುಮತಿ ಪಡೆದ 2 ನೇ ಸ್ವದೇಶಿ ಲಸಿಕೆ ಎಂಬ ಹೆಗ್ಗಳಿಕೆಯೂ ಈಗ ಝೈಡಸ್ ಕ್ಯಾಡಿಲಾದ ಜೈಕೋವ್​ಡಿಗೆ ಸಿಕ್ಕಿದೆ. ಪ್ರಯೋಗದ ವೇಳೆ ಈ ಲಸಿಕೆ ಕೊರೊನ ವಿರುದ್ಧ 66.6% ಪರಿಣಾಮಕಾರಿ ಎಂದು ತಿಳಿದುಬಂದಿತ್ತು. ಭಾರತದಲ್ಲಿ 6ನೇ ಲಸಿಕೆಯಾಗಿ ಜೈಕೋವ್​​-ಡಿ ಬಳಕೆಯಾಗಲಿದೆ.

Source: newsfirstlive.com Source link