ಬಗೆಹರಿಯದ ರಹಸ್ಯ; ಗಡಿಕೇಶ್ವರದಲ್ಲಿ ಮತ್ತೆ ಭಾರೀ ಶಬ್ದಕ್ಕೆ ಮನೆಯಿಂದ ಹೊರಗೆ ಓಡಿ ಬಂದ ಜನ

ಬಗೆಹರಿಯದ ರಹಸ್ಯ; ಗಡಿಕೇಶ್ವರದಲ್ಲಿ ಮತ್ತೆ ಭಾರೀ ಶಬ್ದಕ್ಕೆ ಮನೆಯಿಂದ ಹೊರಗೆ ಓಡಿ ಬಂದ ಜನ

ಕಲಬುರಗಿ: ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಮತ್ತೆ ಭೂಮಿಯಿಂದ ಭಾರೀ ಸದ್ದು ಉಂಟಾಗಿದ್ದು, ಭೂಮಿಯಿಂದ ಬಂದ ಭಾರೀ ಸದ್ದಿನಿಂದ ಜನರಿಗೆ ಭೂ ಕಂಪನದ ಅನುಭವ ಉಂಟಾಗಿದೆ.

ಕೇರಳ್ಳಿ ಗ್ರಾಮದಲ್ಲಿ ಮುಂಜಾನೆ 7:30ಕ್ಕೆ 7:32 ಮತ್ತು 9:52 ರ ಸುಮಾರಿಗೆ ಒಟ್ಟು ಮೂರು ಬಾರಿ ಸದ್ದು ಕೇಳಿ ಬಂದಿದ್ದು ದೊಡ್ಡ ಪ್ರಮಾಣದ ಸದ್ದಿನಿಂದ ಹೆದರಿದ ಅಲ್ಲಿನ ಜನ ಮನೆಯೊಳಗಿಂದ ಹೊರಬಂದಿದ್ದಾರೆ. ಕಳೆದ ವರ್ಷ ಕೂಡಾ ಚಳಿಗಾಲದಲ್ಲಿ ಭೂಮಿಯಿಂದ ವಿಚಿತ್ರ ಸದ್ದು ಬಂದಿತ್ತು. ಇದೀಗ ಮತ್ತೆ ಭೂಮಿಯಿಂದ ಸದ್ದು ಬಂದಿರುವದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ಇದನ್ನೂ ಓದಿ:  ನಿರ್ಮಾಣ ಹಂತದ ಸೇತುವೆಯ ಕಾಮಗಾರಿ ವೇಳೆ ಅವಘಡ: ಆರು ಜನ ಕಾರ್ಮಿಕರಿಗೆ ಗಾಯ

ಆಗಾಗ ಭೂಗರ್ಭದಿಂದ ಬರುತ್ತಿರೋ ಶಬ್ದದಿಂದ ಕಂಗಾಲಾದ ಗಡಿಕೇಶ್ವರ ಗ್ರಾಮಸ್ಥರು, ಕ್ಷಣಕಾಲ ಭೂಮಿ‌ ಕಂಪಿಸಿದ ಅನುಭವವಾಗಿದ್ದು, ಮನೆಯಲ್ಲಿನ ಸಾಮಾನುಗಳು ಅಲ್ಲಾಡಿವೆ ಎಂದು ಹೇಳಿದ್ದಾರೆ.

Source: newsfirstlive.com Source link