ಗದಗನಲ್ಲಿ ಹಾವಳಿ ಎಬ್ಬಿಸಿದ ನಕಲಿ ಪೊಲೀಸ್​ ವಾಹನಕ್ಕೆ ಸಾರ್ವಜನಿಕರು, ಪೊಲೀಸರೂ ಸುಸ್ತು!

ಗದಗನಲ್ಲಿ ಹಾವಳಿ ಎಬ್ಬಿಸಿದ ನಕಲಿ ಪೊಲೀಸ್​ ವಾಹನಕ್ಕೆ ಸಾರ್ವಜನಿಕರು, ಪೊಲೀಸರೂ ಸುಸ್ತು!

ಗದಗ: ನಕಲಿ ಪೊಲೀಸ್ ವಾಹನವೊಂದು ಬೇಕಾ ಬಿಟ್ಟಿಯಾಗಿ ಓಡಾಡುತ್ತಿರುವುದನ್ನು ಕಂಡು ಜನರು ಗೊಂದಲಕ್ಕೀಡಾದ ಘಟನೆ ನಗರದಲ್ಲಿ ನಡೆದಿದೆ.

ನಗರದಲ್ಲಿ ನಕಲಿ ಪೊಲೀಸ್​ ವಾಹನವೊಂದು ಬೇಕಾ ಬಿಟ್ಟಿಯಾಗಿ ಸಂಚರಿಸುತ್ತಿದೆ ಎಂದು, ಕ್ರಾಂತಿ ಸೇನಾ ಸಂಘಟನೆಯ ಸದಸ್ಯರು ಮತ್ತು ಸ್ಥಳೀಯರು ಪೊಲೀಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದು, ಸಿನಿಮಾ ಶೂಟಿಂಗ್​ಗೆ ಸಂಬಂಧಿಸಿದ ನಕಲಿ ಪೊಲೀಸ್​ ವಾಹನ ನಗರದಲ್ಲಿ ಸಂಚರಿಸುತ್ತಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಕೇಂದ್ರ ಸಚಿವ ನಾರಾಯಣಸ್ವಾಮಿ ಯಡವಟ್ಟು: ಹುತಾತ್ಮ ಸೈನಿಕನ ಬದಲಾಗಿ ಜೀವಂತ ಸೈನಿಕನ ಮನೆಗೆ ಹೋಗಿ ಸಾಂತ್ವನ

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಛತ್ರಪತಿ ಸಿನಿಮಾ ಶೂಟಿಂಗ್​ ನಡೆಯುತ್ತಿದ್ದು, ಸಿನಿಮಾಗಾಗಿ ವಾಹನವೊಂದನ್ನ ಪೊಲೀಸ್​ ವಾಹನವಾಗಿ ಮಾರ್ಪಾಡಿಸಿ ವಾಹನದ ಮೇಲೆ ಪೊಲೀಸ್​ ಎಂದು ಬರೆಯಲಾಗಿತ್ತು. ಮತ್ತು ವಾಹನದ ಮುಂದೆ ನಕಲಿ ನಂಬರ್​ ಹಾಕಲಾಗಿದ್ದು, ಹಿಂದೆ ವಾಹನದ ಅಸಲಿ ನಂಬರ್​ ಹಾಕಲಾಗಿತ್ತು. ಇದನ್ನು ಕಂಡ ಸಾರ್ವಜನಿಕರು ತೀವ್ರ ಗೊಂದಲಕ್ಕೀಡಾಗಿದ್ದರು ಎನ್ನಲಾಗಿದೆ.

ಪೊಲೀಸರು ಚಾಲಕನನ್ನು ಹಿಡಿದು ವಿಚಾರಿಸಿದಾಗ, ಶೂಟಿಂಗ್​ ವಾಹನ ಎಂಬ ಮಾಹಿತಿ ಬಹಿರಂಗಗೊಂಡಿದ್ದು, ಬೇಕಾಬಿಟ್ಟಿಯಾಗಿ ಓಡಾಡದಂತೆ ಚಾಲಕನಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳಿಸಿರುವುದಾಗಿ ವರದಿಯಾಗಿದೆ.

Source: newsfirstlive.com Source link