ನಾಳೆ ಜಿಂದಾಲ್​ಗೆ ಸಿದ್ದರಾಮಯ್ಯ ಪ್ರಯಾಣ; 10 ದಿನಗಳ ಕಾಲ ಪ್ರಕೃತಿ ಚಿಕಿತ್ಸೆ

ನಾಳೆ ಜಿಂದಾಲ್​ಗೆ ಸಿದ್ದರಾಮಯ್ಯ ಪ್ರಯಾಣ; 10 ದಿನಗಳ ಕಾಲ ಪ್ರಕೃತಿ ಚಿಕಿತ್ಸೆ

ಬೆಂಗಳೂರು: ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಳೆ ಜಿಂದಾಲ್​ಗೆ ತೆರಳಲಿದ್ದಾರೆ. ನಾಳೆಯಿಂದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಲಿದ್ದು ಹತ್ತು ದಿನಗಳ ಕಾಲ ಅಲ್ಲಿಯೇ ಪ್ರಕೃತಿ ಚಿಕಿತ್ಸೆ ಪಡೆಯಲಿದ್ದಾರೆ.

ಆಗಸ್ಟ್ 31ರಂದು ಸಂಜೆ ಸಿದ್ದರಾಮಯ್ಯ ಅವರು ಚಿಕಿತ್ಸಾ ಕೇಂದ್ರದಿಂದ ವಾಪಸಾಗಲಿದ್ದಾರೆ. ಈ ಹಿಂದೆ ಧರ್ಮಸ್ಥಳದ ಶಾಂತಿವನದಲ್ಲಿ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಗೆ ಒಳಗಾಗಿದ್ದರು. ಹಲವು ಬಾರಿ ಮತ್ತೊಮ್ಮೆ ಪ್ರಕೃತಿ ಚಿಕಿತ್ಸೆಗೆಂದು ಪ್ಲಾನ್ ಮಾಡಿದರೂ ನಾನಾ ಕಾರಣಗಳಿಂದ ಕ್ಯಾನ್ಸಲ್ ಆಗಿತ್ತಂತೆ. ಇನ್ನು ಸಿದ್ದರಾಮಯ್ಯ ಅವರು ಪೋಸ್ಟ್ ಕೋವಿಡ್​ನ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.. ಅವರ ದೇಹದ ಶುಗರ್ ಲೆವೆಲ್ ಕಂಟ್ರೋಲ್ ತಪ್ಪಿದ್ದು ಇದರಿಂದ ಚಿಂತಿತರಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಹೆಚ್ಚಾಯ್ತು ಶುಗರ್ ಲೆವೆಲ್: ಜಿಂದಾಲ್​ನಲ್ಲಿ 10 ದಿನ ಪ್ರಕೃತಿ ಚಿಕಿತ್ಸೆಗೆ ಮುಂದಾದ ಮಾಜಿ ಸಿಎಂ

Source: newsfirstlive.com Source link