ಬಳ್ಳಾರಿಗೆ ವಾಪಸ್ಸಾದ ಜನಾರ್ದನ ರೆಡ್ಡಿ; ಕುಟುಂಬ ಸಮೇತರಾಗಿ ವರಮಹಾಲಕ್ಷ್ಮಿ ಪೂಜೆ

ಬಳ್ಳಾರಿಗೆ ವಾಪಸ್ಸಾದ ಜನಾರ್ದನ ರೆಡ್ಡಿ; ಕುಟುಂಬ ಸಮೇತರಾಗಿ ವರಮಹಾಲಕ್ಷ್ಮಿ ಪೂಜೆ

ಬಳ್ಳಾರಿ: ಜಿಲ್ಲೆಗೆ ಗಾಲಿ ಜನಾರ್ದನ ರೆಡ್ಡಿ ವಾಪಸ್ಸಾಗಿದ್ದಾರೆ. ಬಳ್ಳಾರಿಗೆ ಬಂದ ದಿನವೇ ಅತ್ಯಾಪ್ತನಿಗೆ ಜನಾರ್ದನ ರೆಡ್ಡಿ ಬುಡಾ ಅಧ್ಯಕ್ಷ ಸ್ಥಾನ ಒದಗಿಸಿದ್ದಾರೆ. ರೆಡ್ಡಿ ಬಳ್ಳಾರಿಗೆ ಬರುವ ಮುನ್ನಾ ದಿನ ಬುಡಾ ಅಧ್ಯಕ್ಷ ಪಾಲನ್ನ ನೇಮಕವಾಗಿದ್ದರೂ ತಡೆ ಹಿಡಿಯಲಾಗಿತ್ತು ಎನ್ನಲಾಗಿದೆ.

ಇನ್ನು ಬಳ್ಳಾರಿಗೆ ಬಂದ ದಿನವೇ ಅಧಿಕಾರ ಕೊಡಿಸಿದ್ದಲ್ಲದೇ ರಾಜಕೀಯ ಬ್ಯಾನರ್ ಗಳಲ್ಲಿ ರೆಡ್ಡಿ ಫೋಟೋ ರಾರಾಜಿಸುತ್ತಿವೆ. ಕಳೆದೊಂದು ದಶಕದಿಂದ ರೆಡ್ಡಿ ಭಾವಚಿತ್ರವಿರುವ ಬ್ಯಾನರ್​ಗಳೇ ಕಣ್ಮರೆಯಾಗಿದ್ದವಂತೆ. ಬಳ್ಳಾರಿಯ ಎಸ್​ಪಿ ಸರ್ಕಲ್ ನಲ್ಲಿ ನೂತನ ಅಧ್ಯಕ್ಷರೊಂದಿಗೆ ರೆಡ್ಡಿ ಫೋಟೋ ರಾರಾಜಿಸುತ್ತಿವೆ.

ಇಂದು ವರಮಹಾಲಕ್ಷ್ಮಿ ಪೂಜೆಯಲ್ಲಿ ಕುಟುಂಬ ಸಮೇತ ಜನಾರ್ದನ ರೆಡ್ಡಿ ಪಾಲ್ಗೊಂಡಿದ್ದರು. ಜನಾರ್ಧನ್ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮೀ, ಪುತ್ರಿ ಬ್ರಹ್ಮಿಣಿ, ಮಗ ಕಿರೀಟ ರೆಡ್ಡಿ ಪೂಜೆಯಲ್ಲಿ ಭಾಗಿಯಾಗಿದ್ದರು.

Source: newsfirstlive.com Source link