ದೈತ್ಯ ಹೆಬ್ಬಾವನ್ನೇ ನುಂಗಲು ಯತ್ನಿಸಿದ ಕಾಳಿಂಗ ಸರ್ಪ.. ಹಾವುಗಳ ಕಾದಾಟಾಕ್ಕೆ ಬೆರಗಾದ ಜನ

ದೈತ್ಯ ಹೆಬ್ಬಾವನ್ನೇ ನುಂಗಲು ಯತ್ನಿಸಿದ ಕಾಳಿಂಗ ಸರ್ಪ.. ಹಾವುಗಳ ಕಾದಾಟಾಕ್ಕೆ ಬೆರಗಾದ ಜನ

ಉತ್ತರ ಕನ್ನಡ: ಸಾಮಾನ್ಯವಾಗಿ ಹಾವು ಕಪ್ಪೆಯಂತಹ ಸಣ್ಣ ಜೀವಿಗಳನ್ನು ಹಿಡಿದು ತಿನ್ನುವುದನ್ನು ನಾವು ನೋಡಿರುತ್ತೇವೆ. ಆದರೆ, ಹೆಬ್ಬಾವುಗಳು ಮಾತ್ರ ದೊಡ್ಡದಾದ ಪ್ರಾಣಿಗಳನ್ನು ಕ್ಷಣ ಮಾತ್ರದಲ್ಲಿ ನುಂಗಿ ಬಿಡುತ್ತವೆ. ಬಲು ಅಪರೂಪ ಎಂಬಂತೆ ಕೆಲವೊಮ್ಮೆ ಸಾಮಾನ್ಯ ಹಾವುಗಳು ತಮಗಿಂತ ದೊಡ್ಡದಾದ, ದೊಡ್ಡ ದೇಹದ ಇತರ ಜೀವಿಗಳನ್ನು ಹಿಡಿದು ತಿಂದುಬಿಡುತ್ತವೆ.

ಆದರೆ ಇಲ್ಲಿ ಉಲ್ಟಾ ಎಂಬಂತೆ ದೈತ್ಯ ಹೆಬ್ಬಾವನ್ನು ನುಂಗಲು ಕಾಳಿಂಗ ಸರ್ಪ ಸರ್ವ ಪ್ರಯತ್ನ ನಡೆಸಿದ ಬಲು ಅಪರೂಪದ ದೃಶ್ಯ ಕಾರವಾರದ ಹರಿದೇವ ನಗರದಲ್ಲಿ ಕಂಡು ಬಂದಿದೆ. ಈ ದೃಶ್ಯ ಕಂಡ ಜನ ಒಂದು ಕ್ಷಣ ಭಯಾನಕ ಕಾಳಿಂಗ ಹಾವಿನ ಉಗ್ರರೂಪ ಕಂಡು ಅವಕ್ಕಾಗಿದ್ದಾರೆ.

blank

ಹೌದು, ಈ ವಿಚಾರ ಆಶ್ಚರ್ಯವಾದರೂ ನಿಜ. ಸುಮಾರು ಅರ್ಧ ಘಂಟೆಗಳ ಕಾಲ ಕಾಳಿಂಗ ಹಾಗೂ ಹೆಬ್ಬಾವಿನ ನಡುವೆ ಕದನ ನಡೆದಿದ್ದು, ಹೆಬ್ಬಾವನ್ನ ನುಂಗಲು ಪ್ರಯತ್ನಿಸಿದ ಕಾಳಿಂಗ ಸರ್ಪವನ್ನ ಹೆಬ್ಬಾವು ಸುತ್ತಿಹಾಕಿಕೊಂಡಿದೆ. ಹಾವುಗಳನ್ನ ನೋಡಿ ಸ್ಥಳೀಯರಲ್ಲಿ ಆತಂಕ ಉಂಟಾಗಿದ್ದು ತಕ್ಷಣವೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಹಾವುಗಳ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: NASA ಪ್ರಶಸ್ತಿಗೆ ಭಾಜನರಾದ ಕನ್ನಡಿಗ -ಬರೋಬ್ಬರಿ ₹1.41 ಕೋಟಿ ವಿದ್ಯಾರ್ಥಿ ವೇತನ

Source: newsfirstlive.com Source link