ಬಿಗ್​ ಮನೆಯಲ್ಲಿ ಅಸಮಾಧಾನದ ಕಿಚ್ಚು.. ಏನ್​ ಅಂತಿದ್ದಾರೆ ಸೀರಿಯಲ್​ ತಾರೆಯರು..?

ಬಿಗ್​ ಮನೆಯಲ್ಲಿ ಅಸಮಾಧಾನದ ಕಿಚ್ಚು.. ಏನ್​ ಅಂತಿದ್ದಾರೆ ಸೀರಿಯಲ್​ ತಾರೆಯರು..?

ಮಿನಿ ಬಿಗ್​ ಬಾಸ್​ನಲ್ಲಿ ಅಸಮಾಧಾನದ ಕಿಚ್ಚು ಹೊತ್ತುತ್ತಿದ್ದು, ಕಿಚನ್​ ಕ್ಲೀನಿಂಗ್ ವಿಷಯಕ್ಕೆ ನಯನಾ ಎಲ್ಲರಿಗೂ ಕ್ಲಾಸ್​ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಬಿಗ್​ ಬಾಸ್​ ಹತ್ತಿರ ಕೂಡ ದೂರು ಹೇಳುತ್ತಾರೆ ನಯನಾ.

ಎಲ್ಲರೂ ಮಾತನಾಡುತ್ತಾ ಕುಳಿತಿರುತ್ತಾರೆ.. ಅಲ್ಲಿಗೆ ಬಂದ ನಯನಾ.. ನಾನು ಚಂದನಾ ಮಾತ್ರಾ ಕ್ಲೀನಿಂಗ್ ಮಾಡುತ್ತಿದ್ದು, ಅಡುಗೆ ಮನೆ ಸ್ವಚ್ಛ ಮಾಡುವಷ್ಟರಲ್ಲಿ ಸಾಕಾಗ್ತಿದೆ. ಬೆನ್ನು, ಮೈಕೈ ನೋವು ಶುರುವಾಗಿದ್ದು, ಅಡುಗೆ ಡಿಪಾರ್ಟಮೆಂಟ್​ ಒಬ್ಬರ ಸ್ವತ್ತಲ್ಲ.. ಎಲ್ಲರೂ ಕೈ ಜೋಡಿಸಿ ಕ್ಲೀನ್​ ಮಾಡಿದ್ರೆನೇ ಚಂದ.. ಊಟ ಮಾಡುವ ಜಾಗ ಶುದ್ಧವಾಗಿರಬೇಕು ಎಂದು ಕಿಡಿಕಾರುತ್ತಾರೆ.

blank

ಇನ್ನು ಬೆಂಕಿ ಕಡ್ಡಿ ಟಾಸ್ಕ್​ನಲ್ಲಿ ಸೋತ ವೈಷ್ಣವಿಯನ್ನ ನಯನಾ ಹಾಗೂ ಚಂದನಾ ಅವೈಡ್​ ಮಾಡುತ್ತಿದ್ದಾರೆ ಅಂತಾ ವೈಷ್ಣವಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಭಿನವ್​ ಏನ್​ ಆಯ್ತು ಅಂತಾ ವೈಷ್ಣವಿಗೆ ಕೇಳಿದ್ರು.

ಇದಕ್ಕೆ ವೈಷ್ಣವಿ ಉತ್ತರಿಸಿ.. ಚಂದನಾ ಹಾಗೂ ಎಲ್ಲರೂ ಲಿಪ್​​ಸ್ಟಿಕ್​ ಬಗ್ಗೆ ಮಾತಾಡುತ್ತಿದ್ದರು. ಅದಕ್ಕೆ ನಾನು ಚೆನ್ನಾಗಿದೆ ಅಲ್ವಾ ಅಂತಾ ಚಂದನಾ ಹತ್ತಿರ ಮಾತಾಡಲು ಹೋದೆ.. ಆದ್ರೆ ಅವಳು ಕೊಟ್ಟ ರಿಯಾಕ್ಷನ್​ನಿಂದ ತುಂಬಾ ಬೇಜಾರಾಯ್ತು ಅಂದ್ರು. ಒಟ್ನಲ್ಲಿ ಒಬ್ಬರಿಗೊಬ್ಬರು ಗೊತ್ತಿದ್ದರೂ ಕೂಡ ಒಂದೇ ಮನೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಇರುವುದು ಕಷ್ಟಸಾದ್ಯ ಅಂತಿದ್ದಾರೆ ಕಿರುತೆರೆಯ ತಾರೆಯರು.

Source: newsfirstlive.com Source link