ಮಂಡ್ಯ: ಪೈಪ್​ಲೈನ್​ ಒಡೆದು ಕಾಲುವೆಯಂತಾದ ಮೈಸೂರು-ಬೆಂಗಳೂರು ಹೆದ್ದಾರಿ

ಮಂಡ್ಯ: ಪೈಪ್​ಲೈನ್​ ಒಡೆದು ಕಾಲುವೆಯಂತಾದ ಮೈಸೂರು-ಬೆಂಗಳೂರು ಹೆದ್ದಾರಿ

ಮಂಡ್ಯ: ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಒಡೆದು ನೀರು ಹೆದ್ದಾರಿ ನುಗ್ಗಿದರ ಪರಿಣಾಮ, ಹೆದ್ದಾರಿ ವಾಹನ ಸವಾರರು ಪರದಾಡಿದ ಘಟನೆ ಬಾಬುರಾಯನಕೊಪ್ಪಲು ಗ್ರಾಮದ ಲೋಕಪಾವನಿ ಸೇತುವೆ ಬಳಿ ನಡೆದಿದೆ.

blank

ಇದನ್ನೂ ಓದಿ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸುಮಲತಾ ಅಸಮಾಧಾನ

ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್​ ಒಡೆದು ಲಕ್ಷಾಂತರ ಲೀಟರ್​ ಕುಡಿಯುವ ನೀರು,ಕಾರಂಜಿ ರೂಪದಲ್ಲಿ  ಮೈಸೂರು- ಬೆಂಗಳೂರು ಹೆದ್ದಾರಿಗೆ ಹರಿದಿದೆ. ಪರಿಣಾಮ ಹೆದ್ದಾರಿಯಲ್ಲಿ ಮಂಡಿವರೆಗೆ ನೀರು ನಿಂತಿದ್ದು, ವಾಹನ ಸವಾರರು ಸಂಚರಿಸಲು ಪರದಾಡಿದ್ದಾರೆ.

blank

ಇನ್ನು ಹೆದ್ದಾರಿಯಲ್ಲಿ ನೀರು ನಿಂತು ಕಾಲುವೆಯಂತಾದ್ರು, ಗಮನ ಹರಿಸದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ಸ್ಥಳೀಯರು, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.

Source: newsfirstlive.com Source link