ಚಳಿಯಲ್ಲಿ ಜಿಹಾದ್ ಮಾಡೋಕೆ ಆಗಲ್ಲ; ತಾಲಿಬಾನಿಗಳ ಮಾತುಗಳನ್ನ 600 ಗಂಟೆ ಕೇಳಿದ್ದವ ಹೇಳಿದ್ದೇನು?

ಚಳಿಯಲ್ಲಿ ಜಿಹಾದ್ ಮಾಡೋಕೆ ಆಗಲ್ಲ; ತಾಲಿಬಾನಿಗಳ ಮಾತುಗಳನ್ನ 600 ಗಂಟೆ ಕೇಳಿದ್ದವ ಹೇಳಿದ್ದೇನು?

ಈಯಾನ್ ಫ್ರಿಟ್ಜ್​.. ಇವರು 2008 ರಿಂದ 2013 ವರೆಗೆ ಅಮೆರಿಕ ಏರ್​ಫೋರ್ಸ್​ನಲ್ಲಿ ಸೇವೆ ಸಲ್ಲಿಸಿದವರು. ತಾಲಿಬಾನ್ ವಿರುದ್ಧದ ಅಮೆರಿಕ ಸಮರದಲ್ಲಿ ಅಮೆರಿಕ ಸೇನೆಯ ಪರವಾಗಿ ಆಫ್ಘಾನ್​​ ನೆಲದಲ್ಲಿ ಉಗ್ರರರ ವಿರುದ್ಧ ರಹಸ್ಯ ಕಾರ್ಯಾಚರಣೆ ಮಾಡಿ ಯಶಶ್ವಿಯಾದವರು. ತಾಲಿಬಾನಿ ಉಗ್ರರ ಹುಟ್ಟಡಗಿಸಲು ಅಮೆರಿಕ ಸೇನೆಯ ರೋಚಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಈಯಾನ್ ಫ್ರಿಟ್ಜ್​, ಬರೋಬ್ಬರಿ 600 ಗಂಟೆಗಳ ಕಾಲ ವಿಮಾನದಲ್ಲಿ ಕೂತು ತಾಲಿಬಾನಿ ಉಗ್ರರ ಮಾತು, ಅವರ ವಿಧ್ವಂಸಕ ಕೃತ್ಯದ ಯೋಜನೆ, ಅವರ ಗುರಿ, ಅವರ ಕೆಲಸಗಳ ಕುರಿತ ಮಾತುಗಳನ್ನ ರೇಡಿಯೋ ಡಿವೈಸ್​ ಮೂಲಕ ಕೇಳಿಸಿಕೊಂಡವರು. ಆಫ್ಘಾನ್ ನೆಲವನ್ನ ಸ್ವಾಧೀನಪಡಿಸಿಕೊಳ್ಳಲು ತಾಲಿಬಾನಿಗಳು ಹಪಾಹಪಿಸುತ್ತಿರುವ ಪರಿಗಳನ್ನ ಕಣ್ಣಾರೆ ಕಂಡವರು. ಇಂದು ಆಫ್ಘಾನಿಸ್ತಾನವನ್ನ ತಾಲಿಬಾನಿ ಉಗ್ರರು ಕೊನೆಗೂ ತಮ್ಮ ತೆಕ್ಕೆಗೆ ಪಡ್ಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ತಾವು ಅಂದು ನಡೆಸಿದ ರೋಚಕ ಕಾರ್ಯಾಚರಣೆಯ ವಿವರಗಳ ಮಾಧ್ಯಮವೊಂದಕ್ಕೆ ಲೇಖನ ಬರೆದು ತಮ್ಮ ಅಲ್ಲಿನ ಅನುಭವಗಳನ್ನ ಹಂಚಿಕೊಂಡಿದ್ದಾರೆ.. ಅದರ ವಿವರ ಇಲ್ಲಿದೆ..

ತಾಲಿಬಾನ್​ ಬಗ್ಗೆ ಏನೆಲ್ಲಾ ತಿಳ್ಕೊಂಡೆ..?

ನಾನು.. ಈಗ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಉಗ್ರರ ಜೊತೆ 600 ಗಂಟೆಗಳ ಕಾಲ ಕಳೆದಿದ್ದೇನೆ. ನನ್ನ ಆ ಪ್ರವಾಸ ಮುಗಿಯೋವರೆಗೂ ನನಗೆ ಉಗ್ರರು ಏನು ಹೇಳ್ತಿದ್ದಾರೆಂದು ಅರ್ಥವಾಗಲಿಲ್ಲ.
ಜನ ನನ್ನನ್ನ ಕೇಳ್ತಿದ್ದಾರೆ, ‘ಅಫ್ಘಾನಿಸ್ತಾನದಲ್ಲಿ ಏನು ನಡೀತಿದೆ..?’ ನಾನು ಅವರಿಗೆ ಹೇಳ್ತೇನೆ.. ಏನಂದ್ರೆ ನಾನು ವಿಮಾನದ ಮೇಲೆ ಹಾರಾಡುತ್ತ ತಾಲಿಬಾನಿಗಳ ಮಾತುಗಳನ್ನ ಕೇಳಿಸಿಕೊಳ್ಳುತ್ತಿದೆ.. ನನ್ನ ಮಿತ್ರಪಡೆಗೆ ತಾಲಿಬಾನಿಗಳ ‘ಬೆದರಿಕೆಯ ಎಚ್ಚರಿಕೆ’ಯನ್ನ ನೀಡೋದು ನನ್ನ ಕೆಲಸವಾಗಿತ್ತು. ಇದೇ ಕಾರಣಕ್ಕೆ ನಾನು ತಾಲಿಬಾನಿಗಳ ವಿಧ್ವಂಸಕ ಪ್ಲಾನ್​ಗಳನ್ನ ತಿಳಿದುಕೊಳ್ಳಲು ಹೆಚ್ಚಿನ ಸಮಯವನ್ನ ಮೀಸಲಿಟ್ಟು ಕಳೆದಿದ್ದೇನೆ.. ನಿಮಗೆ ಉಗ್ರರ ಪಿತೂರಿಗಳನ್ನ ಹೇಳಲೇಬೇಕು!

blank

ನಾನು ಈ ಜವಾಬ್ದಾರಿ ಪಡೆಯುವ ಮುನ್ನ, ತಾಲಿಬಾನಿ ಉಗ್ರರ ಘೋರ ಕೆಲಸಗಳ ಭಯಾನಕ ಮಾತುಗಳನ್ನ ಕೇಳಿಸಿಕೊಳ್ಳುತ್ತೀರಿ ಎಂದು ನಂಗೆ ಎಚ್ಚರಿಕೆ ನೀಡಲಾಗಿತ್ತು. ಆ ಕೆಲಸವನ್ನ ನಾನು ಖಂಡಿತವಾಗಿಯೂ ಮಾಡಿದ್ದೇನೆ. ನೂರಾರು ಗಂಟೆಗಳ ಕಾಲ ತಾಲಿಬಾನಿ ಉಗ್ರರ ಮಾತುಗಳನ್ನ ಆಲಿಸಿಕೊಂಡಿದ್ದೇನೆ, ಅವರ ಪ್ಲಾನ್​ಗಳ ಬಗ್ಗೆಯೂ ತಿಳಿದುಕೊಂಡಿದ್ದೇನೆ. ನಿಮ್ಮ ಸ್ನೇಹಿತರಲ್ಲೋಬ್ಬರನ್ನ ಅವರು ಕೊಲ್ಲಲು ಪ್ರಯತ್ನಿಸುತ್ತಿರುವ ಪಿತೂರಿಗಳನ್ನ ನಿಮಗೆ ಹೇಳುತ್ತೇನೆ..

ಉಗ್ರರು ನನಗೆ ಭಯವನ್ನ ಮಾತ್ರ ಹುಟ್ಟಿಸುತ್ತಿರಲ್ಲ! ಆಗಾಗ ನನ್ನನ್ನ ನಗಿಸುತ್ತಿದ್ದರು. ಒಮ್ಮೆ ನಾನು ಉತ್ತರ ಅಫ್ಘಾನಿಸ್ತಾನದಲ್ಲಿ ಇದ್ದೆ.. ಅಂದು ಚಳಿಗಾಲ.. 7,000 ಅಡಿಗಳಿಗಿಂತ ಎತ್ತರದಲ್ಲಿ ನಾನಿದ್ದೆ.. ಮೈಕೊರೆಯುವ ಚಳಿ ಅದು.. ಈ ವೇಳೆ ಉಗ್ರರ ಮಾತುಗಳು ಹೀಗಿದ್ದವು..

blank

ಸಂಭಾಷಣೆಗಳು ಹೇಗಿರುತ್ತಿದ್ದವು..?

‘IED ಅನ್ನ ಕೆಳಭಾಗದಲ್ಲಿ ಬೆಂಡ್ ಮಾಡಿ ಇಟ್ಟಿರಿ; ಅದು ಅವರ (ಅಮೆರಿಕ ಸೇನೆ) ಗಮನಕ್ಕೆ ಬರಲ್ಲ’
‘ಬೆಳಗ್ಗೆ ತನಕ ಕಾಯಬಹುದು’
‘ಇಲ್ಲ.. ಇದಾಗಲ್ಲ. ಅವರು (ಅಮೆರಿಕ ಸೇನೆ) ಬೇಗ ಬರಬಹುದು. ನಮಗೆ ನೂರಾರು ಜನರ ಕೊಲ್ಲಲು ಇದರ ಅಗತ್ಯ ಇದೆ’
‘ಐ ಥಿಂಕ್, ಐ ವಿಲ್ ವೇಟ್’
‘ಇಲ್ಲ, ಇಲ್ಲ ಅದಾಗಲ್ಲ.. ಅದನ್ನ ಅಲ್ಲಿಯೇ ಇಡಿ..’
‘ಇಡಲೇ ಬೇಕಾ..?’
‘ಹೌದು.. ಅದನ್ನ ಮಾಡಿ’
‘ಹೀಗೆ ಮಾಡಲು ನಂಗೆ ಇಷ್ಟ ಇಲ್ಲ’
‘ತಮ್ಮಾ.. ಯಾಕೆ ಆಗಲ್ಲ..? ಜಿಹಾದ್​ಗಾಗಿ ನಾವು ಮಾಡಲೇಬೇಕು!
‘ಅಣ್ಣಾ.. ಜಿಹಾದ್​ಗೆ ಇದು ತುಂಬಾ..’

ಹೌದು.. ಉಗ್ರರು ಮನುಷ್ಯರನ್ನ ಕೊಲ್ಲಲು ಪ್ಲಾನ್ ಮಾಡ್ತಿರುವ ಇಂತಹ ಮಾತುಗಳನ್ನ ಕೇಳಿ ನಂಗೆ ಆಗಾಗ ನಗು ಬರ್ತಿತ್ತು. ತಮ್ಮ ವಿಧ್ವಂಸಕ ಕೃತ್ಯಗಳ ಮಧ್ಯೆ ಉಗ್ರರಿಂದ ಈ ಥರದ ಜೋಕ್​ಗಳು ಬರುತ್ತಿದ್ದವು..

2011ರಲ್ಲಿ ನಾನು ಮಾಡಿದ ಈ ಕೆಲಸಕ್ಕೆ ಮತ್ತೆ 20 ಜನರಿಗೆ ತರಬೇತಿ ನೀಡಲಾಯಿತು. ಆದರೆ ಅವರಲ್ಲಿ ಯಾರೂ ಕೂಡ ನನ್ನಷ್ಟು ಪರಿಣಿತಿ ಪಡೆಯಲಿಲ್ಲ.. ಆದರೆ ಇಬ್ಬರು ಮಾತ್ರ ತುಂಬಾ ನಾಜೂಕ್ ಆಗಿ ಕೆಲಸವನ್ನ ಕಲಿತುಕೊಂಡರು. ಅಫ್ಘಾನಿಸ್ತಾನದ ಪ್ರಮುಖ ಭಾಷೆಗಳಾದ ದರಿ ಮತ್ತು ಪಾಶ್ಟೋದಲ್ಲಿ ನಮಗೆ ತರಬೇತಿ ನೀಡಲಾಗಿತ್ತು. ನಂತರ ಏರ್​ಫೋರ್ಸ್​ನ ಸ್ಪೆಷಲ್ ಆಪರೇಷನ್ ಕಮಾಂಡ್​ನ ವಿಮಾನದಲ್ಲಿ ಭಾಷಾಶಾಸ್ತ್ರಜ್ಞರಾಗಲು ವಿಶೇಷ ತರಬೇತಿ ಪಡೆಯಲು ನಿಯೋಜಿಸಲಾಯಿತು.

blank

AFSOC (ಏರ್​ ಫೋರ್ಸ್​ ಸ್ಪೆಷಲ್ ಆಪರೇಷನ್ ಕಮಾಂಡ್) ಒಂದು ಡಜನ್ ವಿವಿಧ ಯುದ್ಧ ವಿಮಾನಗಳನ್ನ ಹೊಂದಿತ್ತು. ಆದರೆ ನಾನು ಹಾರಾಟ ನಡೆಸಿದ್ದು ಕೇವಲ ಗನ್​ಶಿಪ್​​ ವಿಮಾನದಲ್ಲಿ ಮಾತ್ರ. ಈ ಗನ್​ಶಿಪ್ ವಿಮಾನಗಳು ತುಂಬಾ ಭಿನ್ನವಾಗಿರುತ್ತವೆ. ಆದರೆ ಅವೆಲ್ಲವೂ ಸರಕು ವಿಮಾನಗಳು. ಬಗೆಬಗೆಯ ಶಸ್ತ್ರಾಸ್ತ್ರಾಗಳನ್ನ ಹೊಂದಿದ್ದು, ಭಯಂಕರ ವಿನಾಶಕಾರಿ ಸಾಮರ್ಥ್ಯವನ್ನ ಹೊಂದಿವೆ. ಕೆಲವು ಕಾರುಗಳನ್ನ ಹಾನಿಗೊಳಿಸಬಹುದು, ಇನ್ನು ಕೆಲವು ಕಟ್ಟಡವನ್ನ ನಾಶಪಡಿಸಬಹುದು. ಆದರೆ ಅಫ್ಘಾನಿಸ್ತಾನದಲ್ಲಿ ನಾವು ಈ ಶಸ್ತ್ರಾಸ್ತ್ರಗಳನ್ನು ಜನರ ವಿರುದ್ಧ ಬಳಸಿದ್ದೇವೆ. ನನ್ನ ಕೆಲಸ ಜನರಿಗೆ ಯಾವುದು ಒಳ್ಳೆಯದು ಆಗುತ್ತೆ ಅಂತಾ ನಿರ್ಧರಿಸೋದಾಗಿತ್ತು..

99 ಬಾರಿ ನಡೆದ ಯುದ್ಧೋನ್ಮುಕ್ತ ಕಾರ್ಯಾಚರಣೆಯಲ್ಲಿ ಒಟ್ಟು 600ಗಂಟೆಗಳ ಕಾಲ ಯುದ್ಧ ವಿಮಾನವನ್ನ ಹಾರಿಸಿದ್ದೇನೆ. ಈ ಎಲ್ಲಾ ಸಂದರ್ಭದಲ್ಲಿಯೂ ಗುಂಡಿನ ಕಾಳಗವೇ ಹೆಚ್ಚು ನಡೆದಿದೆ. ಸುಮಾರು 100 ಗಂಟೆಗಳ ಕಾಲ ಉಗ್ರರ ಪ್ಲಾನಿಂಗ್​ ಬಗ್ಗೆ ಚರ್ಚೆ ನಡೆಸಿರೋದನ್ನ ಕೇಳಿಸಿಕೊಂಡಿದ್ದೇನೆ. ವಿಕೃತಿ ಮೆರೆಯಲು ಅವರು ಏನೆಲ್ಲಾ ಚರ್ಚೆ ಮಾಡುತ್ತಿದ್ದರು ಅನ್ನೋದನ್ನ ಕದ್ದು ಆಲಿಸಿದ್ದೇನೆ.

ಗಾಸಿಪ್​ ಬಗ್ಗೆಯೂ ಮಾತಾಡ್ತಾರೆ
ತಾಲಿಬಾನಿಗಳು ತಮ್ಮ ಪ್ಲಾನ್​ಗಳ ಬಗ್ಗೆ ಮಾತಾಡ್ತಿರುವಾಗ ಜಿಹಾದ್​ ಬಗ್ಗೆ ಜೋಕ್ ಮಾಡ್ತಿರುತ್ತಾರೆ. ಅಲ್ಲದೇ ತಮ್ಮ ನೆರೆ ಹೊರೆಯವರ ಕುರಿತ ಅನೇಕ ವಿಚಾರಗಳ ಬಗ್ಗೆಯೂ ಮಾತಾಡ್ತಾರೆ. ತಮ್ಮ ಊಟದ ಪ್ಲಾನ್, ಅಕ್ಕಪಕ್ಕದವ್ರ ಗಾಸಿಪ್, ರಸ್ತೆ ಸರಿ ಇಲ್ಲದಿರುವ ಬಗ್ಗೆ, ವಾತಾವರಣ, ಜಗಳ, ಕಿಂಡಲ್ ಮಾಡೋದು, ಸಿಲ್ಲಿ ಹೆಸರು ಇಟ್ಕೊಂಡು ಕರೆಯೋದು, ತಮಾಷೆ ಮಾಡಿಕೊಳ್ಳೋದು, ಒಬ್ಬರನ್ನ ಒಬ್ಬರು ಕೆಣಿಕಿಕೊಳ್ಳುವುದು, ಭವಿಷ್ಯದ ಬಗ್ಗೆ ಹಗಲು ಕನಸು ಕಾಣೋದ್ರ ಬಗ್ಗೆಯೂ ಉಗ್ರರ ಕ್ಯಾಂಪ್​ಗಳಲ್ಲಿ ಚರ್ಚೆ ನಡೆಯುತ್ತಿರುತ್ತದೆ. ಅಮೆರಿಕದವರು ಇಲ್ಲಿಂದ ಯಾವಾಗ ಹೋಗುತ್ತಾರೆ. ನಾವು ಹೇಗೆ ಅವರನ್ನ ಮಣಿಸಿ ದೇಶದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯೋದು ಅನ್ನೋದ್ರ ಬಗ್ಗೆಯೂ ಗಂಭೀರವಾಗಿ ಚರ್ಚೆ ಮಾಡಿರೋದನ್ನ ನಾನು ಕೇಳಿಸಿಕೊಂಡಿದ್ದೇನೆ.

ಪಾಶ್ಟೋ ಮತ್ತು ದಾರಿ ಭಾಷೆಯಲ್ಲಿ ಅವರು ಶ್ಲೋಕಗಳನ್ನ ಹೇಳುತ್ತಾರೆ. ಆಗಾಗ ತಮ್ಮನ್ನ ತಾವೇ ಅವಮಾನ ಮಾಡಿಕೊಳ್ತಾರೆ. ಈ ಎರಡು ಭಾಷೆಗಳಲ್ಲಿ ಅನೇಕ ಶಬ್ದಗಳು ಡಬಲ್ ಮೀನಿಂಗ್ ಅರ್ಥ ಕಲ್ಪಿಸುತ್ತದೆ. ಹೀಗಾಗಿ ಇವರು ಕೆಲವು ಶಬ್ದಗಳನ್ನ ಮತ್ತೆ ಮತ್ತೆ ಹೇಳಿಕೊಳ್ಳುವ ಪ್ರವೃತ್ತಿಯನ್ನ ಬೆಳೆಸಿಕೊಂಡಿದ್ದಾರೆ. ಅಫ್ಘಾನಿಯರು ಒಂದು ಹೆಸರು ಅಥವಾ ಹೇಳಿಕೆಗಳನ್ನ ಪುನರಾವರ್ತಿಸ್ತಾರೆ. ಈ ರೇಡಿಯೋಗಳಲ್ಲಿ ಉದ್ದೇಶಪೂರ್ವಕವಾಗಿಯೇ ಹೆಸರುಗಳನ್ನ ರಿಪೀಟ್ ಮಾಡುತ್ತಾರೆ.

blank

ಒಂದು ವೇಳೆ ಹೆಸರನ್ನ ಕರೆಯೋದಾದ್ರೆ ಆತನ ಹೆಸರನ್ನ ಪದೇ ಪದೇ ಕರೆಯುತ್ತಾರೆ. ಒಮ್ಮೆ 50ಕ್ಕೂ ಹೆಚ್ಚು ಆತನ ಹೆಸರನ್ನ ಕರೆದಿದ್ದ. ಯಾರು ಯಾರನ್ನ ಕರೆಯುತ್ತಾರೆ ಅನ್ನೋದು ಗೊತ್ತಾಗ ಕಾರಣ ನಾನು ಇಡೀ ಸಮಯ ಕೇಳುತ್ತಿದ್ದೆ. ಆದರೆ ನಿಜವಾದ ಕಲಿಮಾ ಪ್ರತಿಕ್ರಿಯಿಸಿರಲಿಲ್ಲ. ಬಹುಶ ಅವರ ಹೊಂದಿದ್ದ ಡಿವೈಸ್ ಆಫ್ ಆಗಿತ್ತೇನೋ. ಅಥವಾ ಮಾತನಾಡಲು ಆತನಿಗೆ ಇಷ್ಟ ಇರಲಿಲ್ಲವೇನೋ. ಇಲ್ಲ ಸತ್ತು ಹೋಗಿರಬಹುದು..

ಯುದ್ಧದಲ್ಲೇ ಮುಳುಗಿರುತ್ತಾರೆ..
ಇನ್ನು ಈ ತಾಲಿಬಾನಿ ಉಗ್ರರು ಯಾವುದೇ ವಸ್ತುಗಳ ಮಾರಾಟ ಸಭೆ, ಮೂವಿ ಸೆಟ್ ಅಥವಾ ಲಾಕರ್ ರೂಮ್​​ ಬಗ್ಗೆ ಮಾತನಾಡಿದ್ದು ಕಂಡು ಬಂದಿಲ್ಲ. ಬಹುಶಃ ಅವರು ಹೋರಾಟ ಅವರು ಯುದ್ಧದ ಬಗ್ಗೆ ಹೆಚ್ಚು ಟ್ರೈನಿಂಗ್ ಪಡೆದುಕೊಂಡಿರೋದ್ರಿಂದ ಬಹುಪಾಲು ಅದರಲ್ಲೇ ಮುಳುಗಿರುತ್ತಿದ್ದರು. ನನ್ನ 22ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಾನು ಕಣ್ಣಾರೆ ನೋಡಿದೆ.. ಇದು ಉತ್ಪ್ರೇಕ್ಷೆ ಅಲ್ಲ! ಯುದ್ಧ ನಡೆಯುತ್ತಿರುವ ಮಧ್ಯದಲ್ಲಿ 500 ಪಂಡ್​ ತೂಕದ ಬಾಂಬ್​ಗಳನ್ನ ಫೈಟರ್ ಜೆಟ್​ ಬೀಳಿಸಿ ಹೋಗಿತ್ತು. ಈ ಸಂದರ್ಭದಲ್ಲಿ ಸುಮಾರು 20 ಮಂದಿ ಸುಟ್ಟು ಬೂದಿಯಾಗಿದ್ದರು. ನಂತರ ನಾನು ನ್ಯೂ ಲ್ಯಾಂಡ್​ ಸ್ಕೇಪ್​ ತೆಗೆದುಕೊಂಡಾಗ ಅಲ್ಲಿ ಯಾರೂ ಕಾಣಿಸಲಿಲ್ಲ, ಬದಲಾಗಿ ಸ್ಫೋಟದ ತೀವ್ರತೆಗೆ ಕುಳಿಗಳು ಬಿದ್ದಿದ್ದವು. ಆ ಶಬ್ದದಲ್ಲಿ ಶಾಂತತೆ ಇತ್ತು. ನಿಜ! ನಾವು ಸಾಕಷ್ಟು ಮಂದಿಯನ್ನ ಕೊಂದಿದ್ದೇವೆ..

ಮತ್ತೆ ಎರಡು ಕಾರ್ಯಾಚರಣೆ
ಅದಾದ ನಂತರ ಹೆಲಿಕಾಪ್ಟರ್​ಗಳ ಮೂಲಕ ಹೋಗಿ ಮತ್ತೆ ಎರಡು ದಳಿ ಮಾಡಿದ್ದೇವು. ಈ ವೇಳೆ ಅವರು ಕಿರುಚಾಡುವುದು ನನಗೆ ಕೇಳಿಸಿತು. ನಾವು ಶೂಟ್ ಮಾಡುತ್ತಲೇ ಇದ್ದೇವು. ಅವರು ನಮ್ಮನ್ನ ಹಿಮ್ಮೆಟ್ಟಿಸಲು ಯತ್ನಿಸಿದ್ದರು. ನಾವು ದಾಳಿಗಳನ್ನ ಮುಂದುವರಿಸಿದೇವು. ಅವರು ಪ್ರತಿದಾಳಿಯನ್ನ ಮುಂದುವರಿಸಿದ್ದರು.. ಈ ವೇಳೆ ಅವರು ಕೂಗುತ್ತಿರೋದು ಕೇಳಿಸಿತು.. ಸಹೋದರೇ ಇಂದು ನಮಗೆ ಜಯ ಸಿಗಲಿದೆ. ದೊಡ್ಡ ಗೆಲುವು ಎಂದು ಕೂಗುತ್ತಿದ್ದರು..

ಮತ್ತು ನಾನು ಅಮೆರಿಕ 6 ಮಂದಿ ಸಾವನ್ನಪ್ಪಿರೋದನ್ನ ನೋಡಿದೆ. ‘ಅಲ್ಲಾ ಹೋ ಅಕ್ಬರ್​ ಅವರು ಸಾಯುತ್ತಿದ್ದಾರೆ’ ಅಂತಾ 20 ಉಗ್ರರು ಕೂಗೋದು ನನ್ನ ಕಿವಿಯಲ್ಲಿ ಕೇಳಿಸಿತು. ಅದನೆಲ್ಲಾ ನಾನು ಕೇಳಿಸಿಕೊಂಡೆ.. ಅವರಿಗೆ ಆ ದಿನ ತಮ್ಮ 100 ಮಂದಿ ಸತ್ತರೂ ಪರವಾಗಿರಲಿಲ್ಲ. ಅವರು ತಮ್ಮ ಉತ್ಸಾಹವನ್ನ ಉಳಿಸಿಕೊಂಡು ಒಬ್ಬರಿಗೊಬ್ಬರು ಪ್ರೋತ್ಸಾಹಿಸುತ್ತಿರೋದು ಕಂಡು ಬಂದಿತ್ತು.

blank

ಹೀಗೆ ಆಫ್ಘಾನ್​ನಲ್ಲಿ ಸಮಯ ಸಾಗಿತ್ತು.. ಉಗ್ರರ ಬೇರೆ ಬೇರೆ ಕೋಡ್ ವರ್ಡ್‌ಗಳ ಅರ್ಥ ನನಗೆ ಆಗ ತೊಡಗಿತ್ತು.. ಗುಂಡಿನ ಶಬ್ದಗಳ ಮಧ್ಯೆ ಉಗ್ರರ ಮಾತುಗಳನ್ನ ಹೇಗೆಲ ಆಲಿಸೋದು ನಾನು ಕಲಿತೆ. ಉಗ್ರರ ಮಾತುಗಳನ್ನ ಕದ್ದಾಲಿಸುವಲ್ಲಿ ನಾನು ಪರಿಣಿತಿ ಪಡೆದುಕೊಂಡುಬಿಟ್ಟೆ.

2011 ರಲ್ಲಿ ಆಫ್ಘಾನ್​ ಹಳ್ಳಿ ಒಂದರಲ್ಲಿ ಹೊಂಚು ಹಾಕಿದ್ದ ತಂಡದ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದೆ. ಉಗ್ರರ ಮಾತುಗಳನ್ನ ಕದ್ದಾಲಿಸಲು ನಮ್ಮನ್ನ ಕಳುಹಿಸಲಾಗಿತ್ತು. ಇದು ತುಂಬಾ ತ್ರಾಸದಾಯಕವಾಗಿತ್ತು.. ಗಂಟೆಗಟ್ಟಲೆ ವೃತ್ತಾಕಾರದಲ್ಲಿ ಹಾರುವುದು, ಅಲ್ಲಿರುವ ಸ್ಥಳೀಯರ ಬಗ್ಗೆ ನಿಗಾ ಇಡುವುದು ಮತ್ತು ಅವರು ಏನು ಮಾತನಾಡುತ್ತಿದ್ದಾರೆ ಅಂತಾ ಕೇಳಿಸಿಕೊಳ್ಳುವುದು.

blank

ನಾವು ಕೆಲವು ರೈತರು ಬೇಸಾಯ ಮಾಡುತ್ತಿದ್ದ ಜಾಗಕ್ಕೆ ಬಂದಿದ್ವಿ. ಅಲ್ಲಿ ನಮ್ಮ ಮೇಲೆ ಫೈರಿಂಗ್​ ಯತ್ನ ನಡೆದಿತ್ತು. ನಂತರ ಗೊತ್ತಾಯ್ತು ಹೊಲದಲ್ಲಿ ಇದ್ದವರು ಕೆಲಸ ಮಾಡುತ್ತಿಲ್ಲ, ಜಮೀನಿನಲ್ಲಿ ಶಸ್ತ್ರಾಸ್ತ್ರಗಳನ್ನ ಮುಚ್ಚಿಟ್ಟಿದ್ದಾರೆ ಎಂದು ಖಚಿತವಾಯಿತು.. ಹಾಗಾಗಿ ನಾವು ಅವರನ್ನ ಟಾರ್ಗೆಟ್ ಮಾಡಿ ಗುಂಡು ಹಾರಿಸಿದೆವು. ಅಲ್ಲಿದ್ದ ಮೂವರಲ್ಲಿ ಒಬ್ಬನ ಕಾಲುಗಳು ಮುರಿದು ಹೋಗಿತ್ತು. ಇನ್ನಿಬ್ಬರು ಅಲ್ಲೇ ಸಾವನ್ನಪ್ಪಿದ್ದರು. ನಂತರ ಅಲ್ಲಿಂದ ಅಲ್ಲಿಂದ 10 ಅಡಿ ದೂರದಲ್ಲಿ ಮತ್ತೊಂದು ಸ್ಫೋಟ ನಡೆಸಲಾಯಿತು. ಇಷ್ಟೆಲ್ಲ ಆದ ಬಳಿಕವೂ ನಾವು ಅಲ್ಲಿಂದ ಹೊರ ಬರುತ್ತಿದ್ದಂತೆಯೇ ಮತ್ತೆ ಆ ಹಳ್ಳಿಯನ್ನ ತಾಲಿಬಾನಿಗಳು ವಶಪಡಿಸಿಕೊಂಡ್ರು.

ಆಗ ನನಗೆ ತಾಲಿಬಾನಿಗಳು ಏನು ಹೇಳಲು ಬಯಸುತ್ತಿದ್ದಾರೆ ಅನ್ನೋದು ಅರ್ಥವಾಗಿತ್ತು. ಅವರು 30 ವರ್ಷ ಹಳೆಯ ಗನ್ನುಗಳನ್ನು ಬಳಸುತ್ತಿದ್ದರೂ.. ನಾವು ಗೆದ್ದೇ ಗೆಲ್ಲುತ್ತೇವೆ ಅಂತಾ ಹೇಳುತ್ತಿದ್ದರು. ಅಷ್ಟೇ ಅಲ್ಲ..ನೀವು ನೂರು ಜನರನ್ನ ಸಾಯಿಸಿ ನಾವು ಮತ್ತೆ ನೂರು ಜನರನ್ನು ಕರೆದುಕೊಂಡು ಬರ್ತೀವಿ.. ನೀವು ಸಾವಿರ ಜನರನ್ನು ಸಾಯಿಸಿ ಮತ್ತೆ ನಾವು ಅಷ್ಟೇ ಜನರನ್ನ ಕರೆದುಕೊಂಡು ಬರ್ತೀವಿ.. ನಾವು ಗೆಲ್ಲುತ್ತೇವೆ ಅಂತಾ ಸಂದೇಶ ರವಾನಿಸಿದಂತೆ ಆಗುತ್ತಿತ್ತು.. ಅದೇ ತಾಲಿಬಾನಿಗಳು ಇಂದು ಮತ್ತೆ ಅಫ್ಘಾನಿಸ್ತಾನದಲ್ಲಿ ಅಧಿಕಾರ ಹಿಡಿದ್ದಾರೆ.. ಅವರು ಅಂದುಕೊಂಡಿದ್ದನ್ನ ಸಾಧಿಸಿದ್ದಾರೆ..

ಒಟ್ಟಿನಲ್ಲಿ ಇದೇ ಕಾರಣದಿಂದಾಗಿ ತಾಲಿಬಾನ್​ ಅನ್ನೋದು ಒಂದು ಮನಸ್ಥಿತಿ ಆ. ಮನಸ್ಥಿತಿಯನ್ನ ಬದಲಾಯಿಸದೇ ಗೆಲ್ಲೋದು ಸಾಧ್ಯವಿಲ್ಲ.. ಆ ನಿಟ್ಟಿನಲ್ಲಿ ಅಮೆರಿಕಾ ಕಾರ್ಯ ನಿರ್ವಹಿಸದೇ ಇರೋದು ವಿಪರ್ಯಾಸವೇ ಸರಿ..!

ವಿಶೇಷ ಬರಹ: ಗಣೇಶ್ ಕೆರೆಕುಳಿ, ಡಿಜಿಟಲ್ ಮೀಡಿಯಾ

Source: newsfirstlive.com Source link