ಆ.13ರಂದೇ ಅಧಿಕಾರ ಸ್ವೀಕಾರಸಿದ್ದ ಎಸ್​​.ಆರ್​​​.ಬೊಮ್ಮಾಯಿ- ಸಿಎಂ ಬೊಮ್ಮಾಯಿಗೆ ಇದ್ಯಾ 13ರ ಕಂಟಕ?

ಆ.13ರಂದೇ ಅಧಿಕಾರ ಸ್ವೀಕಾರಸಿದ್ದ ಎಸ್​​.ಆರ್​​​.ಬೊಮ್ಮಾಯಿ- ಸಿಎಂ ಬೊಮ್ಮಾಯಿಗೆ ಇದ್ಯಾ 13ರ ಕಂಟಕ?

ಬೆಂಗಳೂರು: ಸೆ.13ರಿಂದ ಅಧಿವೇಶನ ಆರಂಭ ಬೇಡ ಅಂದಿದ್ರಂತೆ ಸಿಎಂ ಬಸವರಾಜ್ಯ ಬೊಮ್ಮಾಯಿ. ಸಂಪುಟ ಸಭೆಯಲ್ಲಿ 20 ನಿಮಿಷಗಳ ಕಾಲ ನಂಬರದ್ದೇ ಚರ್ಚೆ ಆಗಿತ್ತು ಅನ್ನೋ ಇಂಟ್ರಸ್ಟಿಂಗ್​​ ಸುದ್ದಿ ಒಂದು ವಿಧಾನಸೌಧದಲ್ಲಿ ಓಡಾಡ್ತಿದೆ. ಏನದು ಬಿಸಿ ಬಿಸಿ ಸುದ್ದಿ.. ಹೇಳ್ತೀವಿ ಓದಿ..

ನಂಬಿಕೆಗಳು ಹಲವು. ದೇವರ ಮೇಲಿನ ನಂಬಿಕೆ ಒಂದಾದ್ರೆ, ಜ್ಯೋತಿಷ್ಯ ನಂಬಿಕೆ ಮತ್ತೊಂದು. ಇತ್ತೀಚೆಗೆ ಈ ಜ್ಯೋತಿಷ್ಯದಲ್ಲಿ ಸಂಖ್ಯಾಶಾಸ್ತ್ರದ ಪರಿಣಾಮ ಹೆಚ್ಚು ಕಾಣಿಸಿಕೊಳ್ತಿದೆ. ಈ ನಂಬಿಕೆಯಿಂದ ಸಿಎಂ ಕೂಡಾ ಹೊರತಾಗಿಲ್ಲ. ಸಿಎಂ ಬೊಮ್ಮಾಯಿ ನ್ಯೂಮರಾಲಜಿ ಹೆಚ್ಚು ವಿಶ್ವಾಸ ಇರಿಸಿದವ್ರು.

blank

ಸಂಪುಟ ಸಭೆಯಲ್ಲಿ 20 ನಿಮಿಷ ಕಾಲ ನಂಬರದ್ದೇ ಚರ್ಚೆ
ಈ ಹಿಂದೆ ಸಿಎಂ ಬೊಮ್ಮಾಯಿಗೆ ತಮ್ಮ ಹಳೇ ಕಾರಿನ ಮೇಲಿನ ವಿಶೇಷ ಪ್ರೀತಿ ಬಗ್ಗೆ ನ್ಯೂಸ್​​ಫಸ್ಟ್​​ ವರದಿ ಮಾಡಿತ್ತು. ಸಚಿವರಾಗಿದ್ದಾಗ ಉಪಯೋಗಿಸಿದ್ದ ಕಾರನ್ನೇ ಬಳಕೆ ಮಾಡಲು ನಿರ್ಧರಿಸಿದ್ದರ ಕಾರಣ ಹೇಳಿದ್ವಿ.. ತಮ್ಮ ಹಳೇ ಕಾರಿನ ಮೇಲೆ ವಿಶೇಷ ಪ್ರೀತಿ ಮತ್ತು ಮಮಕಾರಕ್ಕೆ ಕಾರಣ ಅದೇ ಸಂಖ್ಯಾಶಾಸ್ತ್ರ..

ಈಗ ಮತ್ತೊಂದು ಅಂಥದ್ದೆ ಸುದ್ದಿ ವಿಧಾನಮಂಡಲ ಅಧಿವೇಶನ ವಿಚಾರವಾಗಿ ಹೊರಬಿದ್ದಿದೆ. ಕಲಾಪದ ದಿನಾಂಕದ ಬಗ್ಗೆ ಸಿಎಂ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಸೆಪ್ಟೆಂಬರ್ 13ರಿಂದ ಅಧಿವೇಶನ ಆರಂಭ ಆಗಬೇಕಿತ್ತು. ಸಿಎಂ ಬೊಮ್ಮಾಯಿ‌ ನೇತೃತ್ವದಲ್ಲಿ ಮೊದಲ ಅಧಿವೇಶನ ನಡೆಯಬೇಕಿತ್ತು. ಇದು ಬೊಮ್ಮಾಯಿ ಪಾಲಿಗೆ ಸಂತಸ, ಹೆಮ್ಮೆ, ಜವಾಬ್ದಾರಿ ಜೊತೆ ಆತಂಕ, ಭಯ ಸವಾಲಿನ ಸದನ.
10 ದಿನ ಕಲಾಪ ನಡೆಸಲು ಸಂಪುಟ ಸಭೆಯಲ್ಲಿ ಅನುಮತಿ ಸಿಕ್ಕಿದೆ. ಆದ್ರೆ ಕಲಾಪ ನಡೆಸುವ ದಿನಾಂಕದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಜೋರಾಗಿತ್ತು. ಅಧಿವೇಶನ ದಿನಾಂಕ ವಿಚಾರದಲ್ಲಿ 2 ಬಣಗಳು ಗಂಭೀರ ಚರ್ಚೆ ನಡೆಸಿದ್ವು.

ಬೊಮ್ಮಾಯಿಗೇಕೆ ‘13’ರ ಭಯ?
ವಿಶ್ವದೆಲ್ಲೆಡೆ ನಂಬರ್​​ 13 ಅನ್​ಲಕ್ಕಿ ಎಂದೇ ಕುಖ್ಯಾತಿ ಪಡೆದಿದೆ. ಸಿಎಂ ಬೊಮ್ಮಾಯಿಗೂ ನಂಬರ್​-13 ಅಂದ್ರೆ ಆತಂಕ. ಸೆ.13ರಂದು ಕಲಾಪ ಆರಂಭವಾದ್ರೆ ಕೆಟ್ಟದಾಗಬಹುದು ಅನ್ನೋ ಭೀತಿ. 1988 ಆಗಸ್ಟ್​​ 13 ರಂದು ತಂದೆ ಎಸ್​​.ಆರ್​​​ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಆದ್ರೆ, ಅಂದಿನ ಕೆಲ ರಾಜಕೀಯ ಬೆಳವಣಿಯಿಂದ ಎಂಟೇ ತಿಂಗಳಿಗೆ ಅಂದ್ರೆ 1989 ಏಪ್ರಿಲ್​​​ 21 ಎಸ್​​​.ಆರ್​​​ ಬೊಮ್ಮಾಯಿ ಅಧಿಕಾರ ಕಳೆದುಕೊಂಡಿದ್ದರು. ಅವತ್ತು ರಾಜೀನಾಮೆಯಿಂದ ರಾಷ್ಟ್ರಪತಿ ಆಡಳಿತ ಜಾರಿ ಆಗಿತ್ತು. ಹೀಗಾಗಿ ಬೊಮ್ಮಾಯಿ ಕುಟುಂಬಕ್ಕೆ ಈ ನಂಬರ್​​​​ ನಿರ್ಭಾಗ್ಯ ಅಂತನೇ ಗುರುತಿಸಿದೆ. ನನ್ನ ಸರ್ಕಾರಕ್ಕೂ ಸಮಸ್ಯೆ ಆಗಬಾರದು ಅನ್ನೋ ಲೆಕ್ಕಾಚಾರ ಸಿಎಂ ಹೊಂದಿದ್ದರು ಎನ್ನಲಾಗಿದೆ.

ಸಿಎಂ ಆಪ್ತ ಸಚಿವರು, ಉಳಿದ ಸಚಿವರ ನಡುವೆ ಮಾತುಕತೆ ನಡೆದ್ವು. ಸೆಪ್ಟೆಂಬರ್ 13ರಿಂದಲೇ ಆರಂಭಿಸೋಣ ಅಂತ ಕೆಲ ಸಚಿವರು ಹೇಳಿದ್ರೆ, ಸೆ.14ರಿಂದಲೇ ಕಲಾಪ ಆರಂಭಿಸೋಣ ಅಂತ ಸಿಎಂ ಪರ ಸಚಿವರು ವಕಾಲತ್ತು ನಡೆಸಿದ್ರು.

blank

ಆತಂಕದಲ್ಲೇ 13ಕ್ಕೆ ಸಮ್ಮತಿ!
ದಿನಾಂಕದ ವಿಚಾರಕ್ಕೆ ಕ್ಯಾಬಿನೆಟ್​ನಲ್ಲಿ 20 ನಿಮಿಷಗಳ ಚರ್ಚೆ ನಡೆದಿದೆ. ಸಂಖ್ಯಾಶಾಸ್ತ್ರದ ಪ್ರಕಾರ ನಂ-14 ಅದೃಷ್ಟ ಸಂಖ್ಯೆ ಎಂಬ ವಾಡಿಕೆ ಇದೆ. ಆದ್ರೆ, ಕೆಲ ಸಚಿವರು ಸೆಪ್ಟೆಂಬರ್​​ 13ರಂದೆ ಒಳ್ಳೆಯ ಖಾತೆ ಸಿಕ್ಕಿದೆ. ಹಾಗಾಗಿ 13ರಂದೇ ಸದನ ಆರಂಭಿಸಿ, ನಮಗೂ ಒಳ್ಳೆಯದು ಆಗುತ್ತದೆ, ನಿಮಗೂ ಒಳ್ಳೆಯದಾಗಲಿದೆ ಅಂತ ಸಲಹೆ ಕೊಟ್ರು. ಕೊನೆಗೆ ಒಲ್ಲದ ಮನಸ್ಸಿನಿಂದಲೇ ಸೆ.13ರಂದೇ ಅಧಿವೇಶನಕ್ಕೆ ಸಿಎಂ ಬೊಮ್ಮಾಯಿ ಒಪ್ಪಿಗೆ ಕೊಟ್ಟರಂತೆ.

ಅದು ಏನೇ ಇರಲಿ, ನಂಬರ್​ ಒಂದು ಬದುಕು ನಿರ್ಧರಿಸುತ್ತೇ ಅನ್ನೋದೇ ಹಾಸ್ಯಾಸ್ಪದ. ಇಂಥಹ ನಂಬಿಕೆಗಳಿಗೆ ಸದಾ ಸೆಡ್ಡು ಹೊಡೆದ ಸಿದ್ದರಾಮಯ್ಯ 2013 ಮೇ 13 ರಂದು ಅಧಿಕಾರ ಸ್ವೀಕರಿಸಿದ್ದರು. ಯಾವುದೇ ಅಡ್ಡಿ ಆತಂಕಗಳಿಲ್ಲದೇ ದೇವರಾಜ್​ ಅರಸು ಬಳಿಕ ಐದು ವರ್ಷ ಪೂರ್ಣಗೊಳಿಸಿದ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ ಬರೆದಿದ್ದರು. ಆದ್ರೆ, ಬಿಜೆಪಿ ಸರ್ಕಾರ ಮಾತ್ರ, ನಂಬರ್​​ಗೆ ಹೆದರಿ, ಆತಂಕದಲ್ಲೇ ಅಧಿವೇಶನ ಎದುರಿಸುತ್ತಿದೆ.

Source: newsfirstlive.com Source link