ಕಾಬೂಲ್​ನಿಂದ ಏರ್​ಲಿಫ್ಟ್​ ಮಾಡುವುದು ಕಷ್ಟಸಾಧ್ಯ -​ಕೈಚೆಲ್ಲಿದ ಜೋ ಬೈಡನ್

ಕಾಬೂಲ್​ನಿಂದ ಏರ್​ಲಿಫ್ಟ್​ ಮಾಡುವುದು ಕಷ್ಟಸಾಧ್ಯ -​ಕೈಚೆಲ್ಲಿದ ಜೋ ಬೈಡನ್

ನಾವು ಬದಲಾಗಿದ್ದೇವೆ.. ಅಫ್ಘಾನ್​​ನಲ್ಲಿ ಹೊಸ ಸರ್ಕಾರ ರಚನೆ ಮಾಡಿ ಶರಿಯಾ ನಿಯಮಗಳ ಅನ್ವಯ ಉತ್ತಮ ಆಡಳಿತ ನೀಡ್ತೇವೆ ಎಂದಿದ್ದ ತಾಲಿಬಾನಿಗಳು ತಮ್ಮ ಅಸಲಿ ಮುಖವನ್ನು ಬಯಲು ಮಾಡುತ್ತಿದ್ದಾರೆ. ಅಫ್ಘಾನ್​​​ನ ಬೀದಿ ಬೀದಿಗಳಲ್ಲಿ ತಮ್ಮ ವಿರೋಧಿಗಳಿಗಾಗಿ ಹುಡುಕಾಟ ನಡೆಸಿದ್ದು, ಸಿಕ್ಕ ಸಿಕ್ಕವರನ್ನು ಗುಂಡಿಕ್ಕಿ ಕ್ರೂರವಾಗಿ ಕೊಲೆಗೈಯುತ್ತಿದ್ದಾರೆ. ಆದರೆ ಈ ನಡುವೆ ಅಫ್ಘಾನ್​​ನಲ್ಲಿ ಉಗ್ರರು ರಕ್ತಪಾತವನ್ನೇ ನಡೆಸುತ್ತಿದ್ದರೂ ಕಾಬೂಲ್​ನಿಂದ ಏರ್​​ಲಿಫ್ಟ್​ ಮಾಡುವುದು ಕಷ್ಟಸಾಧ್ಯ ಕೆಲಸ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಕೈಚೆಲ್ಲಿದ್ದಾರೆ.

ಇದೊಂದು ಅತ್ಯಂತ ಕಠಿಣವಾದ ಏರ್​ ಲಿಫ್ಟ್​. ಆದ್ರೆ ಕಾಬೂಲ್​ನಲ್ಲಿರುವ ಅಮೆರಿಕನ್ನರನ್ನು ವಾಪಸ್​ ಕರೆಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದ್ದೇವೆ. ಈ ಬಗ್ಗೆ ಏನೂ ಭರವಸೆ ನೀಡಲು ಸಿದ್ಧವಿಲ್ಲ ಅಂತ ಜೋ ಬೈಡನ್​ ಹೇಳಿದ್ದಾರೆ.

blank

ಏರ್​ ಲಿಫ್ಟ್​ ಮಾಡುವುದು ತುಂಬಾ ಅಪಾಯಕಾರಿ ಕೆಲಸ. ಸೇನೆಗೆ ಇದು ಕಷ್ಟಕರವಾಗಿದ್ದು ವಿವಿಧ ಸಮಸ್ಯೆಗಳ ನಡುವೆ ಏರ್​ ಲಿಫ್ಟ್ ಮಾಡುವುದು ಕಷ್ಟಸಾಧ್ಯ. ಈ ಬಗ್ಗೆ ಏನೂ ಭರವಸೆ ನೀಡಲು ಸಿದ್ಧವಿಲ್ಲ. ಆದ್ರೆ ಕಾಬೂಲ್​ನಲ್ಲಿರುವ ಎಲ್ಲ ಅಮೆರಿಕನ್ನರನ್ನು ವಾಪಸ್​ ಕರೆಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತೇನೆ.

ಜೋ ಬೈಡನ್, ಅಮೆರಿಕ ಅಧ್ಯಕ್ಷ

ಇತ್ತ, ಚೀನಾ, ರಷ್ಯಾದಂತೆ ಬ್ರಿಟನ್​​ ಕೂಡಾ ರಾಗ ಬದಲಿಸಿದೆ. ಅಫ್ಘಾನ್ ಜನರಿಗಾಗಿ ತಾಲಿಬಾನ್​ಗಳಿಗೆ ನೆರವು ನೀಡಲು ಸಿದ್ಧರಿದ್ದೇವೆ ಅಂತ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ತಿಳಿಸಿದ್ದಾರೆ. ಇದೇ ವೇಳೆ ಇತರೆ ದೇಶಗಳು ಅಫ್ಘಾನಿಸ್ತಾನದ ಮೇಲೆ ತಮ್ಮ ಸಿದ್ಧಾಂತ ಹೇರುವುದು ತಪ್ಪು ಅಂತ ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ವಾಯುಸೇನೆಯ ಏರ್​ಕ್ರಾಫ್ಟ್​ ಸಿ-17 ಸಿದ್ಧವಾಗಿದೆ ಅಂತ ತಿಳಿದುಬಂದಿದೆ. ಇದು ಸುಮಾರು 250 ಜನರನ್ನು ಕರೆತರಲು ಶಕ್ತವಾಗಿದೆ. ಒಟ್ಟಾರೆ, ದೇವರನಾಡು ಆಗಿಸ್ತೀವಿ ಅಂತ ಶರಿಯಾ ಶಾಸನ ಹೇರಲು ಬಂದ ತಾಲಿಬಾನಿಗಳು, ಅಫ್ಘಾನ್​​ನಲ್ಲಿ ಗನ್​​ ಹಿಡಿದು ಸೈತಾನರ ನಾಡಾಗಿ ಬದಲಿಸಿದ್ದಾರೆ.

Source: newsfirstlive.com Source link