ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸ್​ ಪಿಸ್ತೂಲ್​​ -ಕುಖ್ಯಾತ ರೌಡಿಶೀಟರ್ ಅವಿನಾಶ್ ಕಾಲಿಗೆ ಗುಂಡು

ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸ್​ ಪಿಸ್ತೂಲ್​​ -ಕುಖ್ಯಾತ ರೌಡಿಶೀಟರ್ ಅವಿನಾಶ್ ಕಾಲಿಗೆ ಗುಂಡು

ಬೆಂಗಳೂರು: ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕುಖ್ಯಾತ ರೌಡಿಶೀಟರ್​ ಅವಿನಾಶ ಅಲಿಯಾಸ್ ರೆಬೆಲ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಹೆಬ್ಬಾಳ ಬಳಿಯ ಗುಡ್ಡದಹಳ್ಳಿ ಬಳಿ ಘಟನೆ ನಡೆದಿದ್ದು, ಅವಿನಾಶ್ ಅಲಿಯಾಸ್ ರೆಬೆಲ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ಅವಿನಾಶ್ ಸಂಜಯನಗರ ಠಾಣೆ ರೌಡಿಶೀಟರ್ ಆಗಿದ್ದು, ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ.

blank

ಈ ಹಿಂದೆ ಮುನಿರಾಜು ಎಂಬವರ ಮೇಲೆ ಹಾಡಹಗಲೇ ಅವಿನಾಶ್​​ ಹಲ್ಲೆ ಮಾಡಿ ಎಸ್ಕೇಪ್​ ಆಗಿದ್ದ. ಈ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿತ್ತು. ಪ್ರಕರಣದ ಸಂಬಂಧ ಆರೋಪಿಯನ್ನು ಬಂಧಿಸಿಲು ಸಂಜನಗರ ಇನ್ಸ್​​​ಪೆಕ್ಟರ್​ ಬಾಲರಾಜ್ ಹಾಗೂ ತಂಡ ತೆರಳಿತ್ತು. ಈ ವೇಳೆ ಪೇದೆ ಸಂತೋಷ್ ಮೇಲೆ ಅವಿನಾಶ್​ ಹಲ್ಲೆ ಮಾಡಿ ಎಸ್ಕೇಪ್​ ಆಗಲು ಯತ್ನಿಸಿದ್ದ. ಪರಿಣಾಮ ಆತ್ಮ ರಕ್ಷಣೆಗಾಗಿ ಆರೋಪಿ ಕಾಲಿಗೆ ಇನ್ಸ್​​ಪೆಕ್ಟರ್​ ಬಾಲರಾಜ್​​ ಗುಂಡು ಹಾರಿಸಿ ಬಂಧಿಸಿದ್ದಾರೆ. ಸದ್ಯ ಗಾಯಗೊಂಡಿರುವ ಆರೋಪಿ ಹಾಗೂ ಪೊಲೀಸ್​ ಪೇದೆರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

blank

Source: newsfirstlive.com Source link