ಒಂದು ಜಿಂಕೆಗಾಗಿ 6 ಸಿಂಹಗಳ ಕಾದಾಟ -ಈ ಹೊತ್ತಿನ ಟಾಪ್​​ 10 ಸುದ್ದಿಗಳ ಕ್ವಿಕ್​​ರೌಂಡಪ್

ಒಂದು ಜಿಂಕೆಗಾಗಿ 6 ಸಿಂಹಗಳ ಕಾದಾಟ -ಈ ಹೊತ್ತಿನ ಟಾಪ್​​ 10 ಸುದ್ದಿಗಳ ಕ್ವಿಕ್​​ರೌಂಡಪ್

1. ವಿನಯ್​ ಕುಲಕರ್ಣಿಗೆ ಇಂದು ಬಿಡುಗಡೆ ಭಾಗ್ಯ

ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಯೋಗೀಶ್ ಗೌಡ ಹತ್ಯೆ ಕೇಸಿನಲ್ಲಿ ಜಾಮೀನು ಸಿಕ್ಕಿದ್ದು ಇಂದು ಬಿಡುಗಡೆಯಾಗುತ್ತಾರೆ ಎನ್ನಲಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನಿಂದ ಇಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದ್ದು, ಧಾರವಾಡಕ್ಕೆ ವಿನಯ್​ ಕುಲಕರ್ಣಿ ಹೋಗಲು ಇನ್ನೂ ಅನುಮತಿ ನೀಡುವುದು ಸಂಶಯವಾಗಿದೆ. ಇನ್ನು ವಿನಯ್​ ಕುಲಕರ್ಣಿಯ ಬಿಡುಗಡೆಗೆ ಮನೆಯವರು ಮತ್ತು ಅಭಿಮಾನಿಗಳು ಸಂತಸರಾಗಿದ್ದಾರೆ.

2. ಭೂಗರ್ಭದಿಂದ ಕೇಳಿಬಂದ ಸದ್ದಿಗೆ ಆತಂಕಗೊಂಡ ಜನ

ಕಲಬುರಗಿ ಜಿಲ್ಲೆಯ ಗಡಿಕೇಶ್ವರ ಗ್ರಾಮದಲ್ಲಿ ಮತ್ತೆ ಭೂಮಿಯಿಂದ ಭಾರಿ ಸದ್ದು ಕೇಳಿಬಂದಿದ್ದು ಗ್ರಾಮದ ಜನರು ಆತಂಕಗೊಂಡಿದ್ದಾರೆ. ಇನ್ನು ಒಂದೇ ದಿನದಲ್ಲಿ ಭೂಮಿಯಿಂದ 3 ಬಾರಿ ಸದ್ದು ಕೇಳಿಬಂದಿದ್ದು ಗಡಿಕೇಶ್ವರ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇನ್ನು ಚಿಂಚೋಳಿ ತಾಲ್ಲೂಕಿನ ಕೇರಳ್ಳಿ ಗ್ರಾಮದಲ್ಲೂ ಭಾರಿ ಸದ್ದಿನಿಂದ ಭೂ ಕಂಪನ ಅನುಭವವಾಗಿದ್ದು, ಮನೆಯಲ್ಲಿ ಚೇರ್ ಗಳು ಶೇಕ್ ಆದ್ವು, ಇನ್ನು ಆತಂಕಗೊಂಡ ಜನ ಮನೆಯಿಂದ ಹೊರಗಡೆ ಓಡಿಬಂದ್ರು.

3. ದೇಶಾದ್ಯಂತ ವಿಪಕ್ಷಗಳ ಪ್ರತಿಭಟನೆಗೆ ಕರೆ

ದೇಶದ 19 ವಿಪಕ್ಷಗಳು ನಿನ್ನೆ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ರು.. ಸಭೆಯಲ್ಲಿ ಎಲ್ಲಾ ವಿಪಕ್ಷಗಳು ಕೇಂದ್ರದ ವಿರುದ್ಧ ಸೆಪ್ಟೆಂಬರ್​ 20ರಿಂದ 30ರವರೆಗೂ ಪ್ರತಿಭಟನೆ ಮಾಡುವ ಯೋಜನೆ ಹಾಕಿಕೊಂಡಿವೆ. ದೇಶಾದ್ಯಂತ ಈ ಪ್ರತಿಭಟನೆ ನಡೆಯಲಿದ್ದು, ಮುಂದಿನ ದಿನಗಳ ಏಳಿಗೆಗಾಗಿ ಜನರನ್ನು ಜಾಗೃತಗೊಳಿಸುವ ಸಲುವಾಗಿ ಈ ಪ್ರತಿಭಟನೆ ಹಮ್ಮಿಕೊಳ್ತಿರುವುದಾಗಿ ಹೇಳಿಕೊಂಡಿವೆ.. ಜಾತ್ಯತೀತ, ಪ್ರಜಾಪ್ರಭುತ್ವ, ಗಣರಾಜ್ಯದ ಆದೇಶವನ್ನು ರಕ್ಷಿಸಲು ಭಾರತದ ಜನರಿಗೆ ಕರೆ ನೀಡುತ್ತೇವೆ ಅಂತ ಜಂಟಿಯಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

4. ಆಂಧ್ರಪ್ರದೇಶದಲ್ಲಿ ನೈಟ್​ ಕರ್ಫ್ಯೂ ವಿಸ್ತರಣೆ

ಆಂಧ್ರ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಆಗ್ತಿದೆ.. ಈ ಹಿನ್ನೆಲೆ ನೈಟ್​ ಕರ್ಫ್ಯೂವನ್ನು ವಿಸ್ತರಿಸಲಾಗಿದೆ.. ಸೆಪ್ಟೆಂಬರ್ 4 ರವರೆಗೂ ನೈಟ್​ ಕರ್ಫ್ಯೂ ಜಾರಿಯಲ್ಲಿರುತ್ತದೆ ಅಂತಾ ಸಿಎಂ ಜಗನ್​ಆದೇಶ ಹೊರಡಿಸಿದ್ದಾರೆ. ಸದ್ಯ ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆಯವರೆಗೂ ನೈಟ್​ ಕರ್ಫ್ಯೂ ಜಾರಿಯಲ್ಲಿರುತ್ತದೆ.. ಮದುವೆ, ಧಾರ್ಮಿಕ ಸಭೆ ಸಮಾರಂಭಗಳಿಗೆ 150 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.. ಯಾರಾದರೂ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದರೆ, ಅಂತವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕೇಸ್​ ದಾಖಲಿಸಲಾಗುದು ಅಂತ ಎಚ್ಚರಿಕೆ ನೀಡಿದ್ದಾರೆ.

5. ಝೈಡಸ್ ಸಂಸ್ಥೆಯ ಲಸಿಕೆಗೆ ತುರ್ತು ಅನುಮತಿ

ಭಾರತದ ಔಷಧ ನಿಯಂತ್ರಣ ಪ್ರಾಧಿಕಾರವು ಝೈಡಸ್ ಕ್ಯಾಡಿಲಾ ಸಂಸ್ಥೆಯ ಮೂರು ಡೋಸ್‌ಗಳ ಕೋವಿಡ್ -19 ಡಿಎನ್ಎ ಲಸಿಕೆಗೆ ಅನುಮತಿ ನೀಡಿದೆ.. ವಯಸ್ಕರು ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗಾಗಿ ಅನುಮೋದನೆ ಕೊಟ್ಟಿದೆ.. ಕಂಪನಿಯು ವಾರ್ಷಿಕವಾಗಿ 10 ರಿಂದ 12 ಕೋಟಿ ಡೋಸ್ ಝೈಕೋವ್–ಡಿ ಲಸಿಕೆಯನ್ನು ತಯಾರಿಸಲು ಯೋಜನೆ ಹಾಕಿಕೊಂಡಿದ್ದು, ಈಗಾಗಲೇ ಲಸಿಕೆಯ ಸಂಗ್ರಹವನ್ನು ಆರಂಭಿಸಿರುವುದಾಗಿ ತಿಳಿಸಿದೆ.

6. 3 ಜಿಲ್ಲೆಗಳು ತಾಲಿಬಾನ್ ಉಗ್ರರಿಂದ ಮುಕ್ತ

ತಾಲಿಬಾನ್ ಆಡಳಿತಕ್ಕೆ ಹೆದರಿ ದೇಶ ಬಿಟ್ಟು ಪರಾರಿಯಾಗುತ್ತಿರುವ ನಾಗರೀಕರ ನಡುವೆಯೇ.. ಅಫ್ಘಾನ್​ನಲ್ಲಿ ಹಲವಾರು ಮಂದಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬಣದ ದಿಟ್ಟ ಹೋರಾಟದಿಂದಾಗಿ ಕೇವಲ ಕೆಲವೇ ದಿನಗಳ ಅಂತರದಲ್ಲಿ 3 ಜಿಲ್ಲೆಗಳು ತಾಲಿಬಾನ್ ಮುಕ್ತವಾಗಿದೆ. ಸ್ಥಳೀಯರ ಹೋರಾಟದ ಫಲವಾಗಿ 3 ಜಿಲ್ಲೆಗಳು ತಾಲಿಬಾನ್​ ಹಿಡಿತದಿಂದ ಮುಕ್ತವಾಗಿವೆ. ಬಾಗಲನ್ ಪ್ರಾಂತ್ಯದ 3 ಜಿಲ್ಲೆಗಳು ಇದೀಗ ತಾಲಿಬಾನ್ ಕೈತಪ್ಪಿದ್ದು, ಸ್ಥಳೀಯರ ಕೆಚ್ಚೆದೆಯ ಹೋರಾಟಕ್ಕೆ ಪ್ರತಿಫಲ ದೊರೆತಿದೆ. ಈ ಹೋರಾಟ ಇದೀಗ ಕ್ರಮೇಣ ಎಲ್ಲ ಪ್ರಾಂತ್ಯಗಳಿಗೂ ವ್ಯಾಪಿಸುವ ಸಾಧ್ಯತೆ ಇದ್ದು, ತಾಲಿಬಾನ್ ವಿರೋಧಿ ಬಣಕ್ಕೆ ಮತ್ತಷ್ಟು ಹೋರಾಟಗಾರರು ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

7. ‘ಜನರನ್ನ ಏರ್‌ಲಿಫ್ಟ್ ಮಾಡುವುದು ಕಷ್ಟಕರ’

ಆಫ್ಘಾನಿಸ್ತಾನ್​ ವಿಚಾರದಲ್ಲಿ ತಮ್ಮ ನಿರ್ಧಾರವನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡನ್​​​ ಮತ್ತೆ ಸಮರ್ಥಿಸಿಕೊಂಡಿದ್ದಾರೆ.. ಇತಿಹಾಸದ ಅತಿದೊಡ್ಡ ಮತ್ತು ಅತ್ಯಂತ ಕಷ್ಟಕರವಾದ ಏರ್‌ಲಿಫ್ಟ್ ಅಮೆರಿಕ ಸೇನೆ ಆಫ್ಘಾನಿಸ್ತಾನದಲ್ಲಿ ನಡೆಸುತ್ತಿದೆ ಅಂತ ಹೇಳಿದ್ದಾರೆ.. ಇದೊಂದು ಅತ್ಯಂತ ಕಠಿಣವಾದ ಏರ್​ ಲಿಫ್ಟ್​. ಆದ್ರೆ ಕಾಬೂಲ್​ನಲ್ಲಿರುವ ಅಮೆರಿಕನ್ನರನ್ನು ವಾಪಸ್​ ಕರೆಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದ್ದೇವೆ. ಕಾರ್ಯಾಚರಣೆಗೆ ಅಡ್ಡಿ ಮಾಡಿ ಅಮೆರಿಕಾ ನಾಗರಿಕರ ಮೇಲೆ ದಾಳಿ ನಡೆದ್ರೆ ಸುಮ್ನಿರಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.

8. ಗಡ್ಡ ಬಿಟ್ಟು ಗಮನ ಸೆಳೆದ ಜಡೆಜಾ!

ಕಳೆದ ಒಂದು ತಿಂಗಳಿನಿಂದ ಎಂ.ಎಸ್​ ಧೋನಿ ತಮ್ಮ ಹೊಸ ಹೊಸ ಹೇರ್ ಸ್ಟೈಲ್​ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಇನ್ನು ನಾನು ಏನು ಕಡಿಮೆ ಇಲ್ಲ ಅಂತಾ ಆಲ್​ ರೌಂಡರ್ ರವೀಂದ್ರ ಜಡೇಜಾ ಹೊಸ ರೀತಿಯ ಗಡ್ಡ ಬಿಟ್ಟು ಗಮನ ಸೆಳೆಯುತ್ತಿದ್ದಾರೆ. ಸದ್ಯ ಹೊಸ ಸ್ಟೈಲ್​ ಗಡ್ಡದ ಫೋಟೋವನ್ನು ತಮ್ಮ ಇಮ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ರವೀಂದ್ರ ಜಡೆಜಾ ಹೊಸ ಗಡ್ಡಕ್ಕೆ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ.

9. ಮನೋಜ್ ಬಾಜಪೇಯಿಗೆ ಅತ್ಯುತ್ತಮ ನಟ ಪ್ರಶಸ್ತಿ

2021ರ ಭಾರತೀಯ ಚಲನಚಿತ್ರೋತ್ಸವದಲ್ಲಿ ಫ್ಯಾಮಿಲಿ ಮ್ಯಾನ್​ 2 ವೆಬ್​ ಸೀರೀಸ್​ ಪಾತ್ರಕ್ಕಾಗಿ ಮನೋಜ್​ ಬಾಜಪೇಯಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.. ಈ ಬಗ್ಗೆ ಮನೋಜ್​ ಬಾಜಪೇಯಿ ಪ್ರತಿಕ್ರಿಯಿಸಿದ್ದು, ನನಗೆ ಅತ್ಯುತ್ತಮ ಪ್ರಶಸ್ತಿ ದೊರೆತಿರುವುದು ಇಡೀ ಚಿತ್ರತಂಡಕ್ಕೆ ಹೆಮ್ಮೆಯ ಕ್ಷಣ ಎಂದು ಸಂತೋಷ ಹಂಚಿಕೊಂಡ್ರು.. ನಮ್ಮ ಚಿತ್ರದಂಡ ಪರಿಶ್ರಮದಿಂದಲೇ ನನಗೆ ಅತ್ಯುತ್ತಮ ಪ್ರಶಸ್ತಿ ಬಂದಿದೆ ಅಂತ ಮನೋಜ್​ ಬಾಜಪೇಯಿ ಹೇಳಿದ್ರು.. ಫ್ಯಾಮಿಲಿ ಮ್ಯಾನ್​​ ವೆಬ್​ ಸೀರೀಸ್​​ ಸಾಕಷ್ಟು ಸದ್ದು ಮಾಡಿತ್ತು.

10. ಒಂದು ಜಿಂಕೆಗಾಗಿ 6 ಸಿಂಹಗಳ ಕಾದಾಟ

ಒಂದು ಜಿಂಕೆಗಾಗಿ 6 ಸಿಂಹಗಳು ಕಾದಾಟ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ.. ಮೊದಲು ಜಿಂಕೆಯನ್ನ ಬೇಟೆಯಾಡಿದ ಎರಡು ಸಿಂಹಗಳು ಕಿತ್ತಾಡಿಕೊಂಡು ಮರದ ಮೇಲೆ ಜಿಂಕೆಯನ್ನ ಎಳೆದುಕೊಂಡು ಹೋಗಿದೆ. ಇದನ್ನು ಕಂಡ ಉಳಿದ ನಾಲ್ಕು ಸಿಂಹಗಳು ಮರದ ಮೇಲೆ ಹತ್ತಿ ಜಿಂಕೆಗಾಗಿ ಕಾದಾಟ ನಡೆಸಿವೆ. ನಂತರ ಮರದಿಂದ ಕೆಳಗೆ ಜಿಂಕೆ ಬಿದ್ದರೂ ಸಹ ಬಿಡದೇ 6 ಸಿಂಹಗಳು ಎಳೆದಾಡಿ ತಿಂದಿವೆ. ಸದ್ಯ ಈ ವಿಡಿಯೋವನ್ನ ಭಾರತೀಯ ಅರಣ್ಯ ಇಲಾಖೆ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಸಿಂಹಗಳ ಕಾದಾಟ ನೋಡಿ ಆರ್ಶ್ವರ್ಯಗೊಂಡಿದ್ದಾರೆ.

Source: newsfirstlive.com Source link