2,500 ರೂ.ಗೆ ತಂದೆಯನ್ನ ಕೊಂದ ಕ್ರೂರಿ ಮಗ

– ಮಲಗಿದ್ದ ತಂದೆಯನ್ನ ಚಿರನಿದ್ರೆಗೆ ಕಳಿಸಿದ

ರಾಂಚಿ: ಕೇವಲ ಎರಡೂವರೆ ಸಾವಿರ ರೂಪಾಯಿಗಾಗಿ ತಂದೆಯನ್ನ ಪುತ್ರನೇ ಕೊಲೆ ಮಾಡಿರುವ ಘಟನೆ ಜಾರ್ಖಂಡ್ ರಾಜ್ಯದ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಗಿಂಡ್ರಾ ಗ್ರಾಮದಲ್ಲಿ ನಡೆದಿದೆ.

ಮಹದೇವ್ ಉರಾಂವ್ ತಂದೆಯನ್ನ ಕೊಂದ ಮಗ. ಗುರುವಾರ ಬೆಳಗಿನ ಜಾವ ಮಲಗಿದ್ದ ತಂದೆಯನ್ನು ಕೊಂದ ಮಹದೇವ್ ಎಸ್ಕೇಪ್ ಆಗಿದ್ದನು. ಆದ್ರೆ ಗ್ರಾಮಸ್ಥರು ಆರೋಪಿಯನ್ನು ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ:ಪೊಲೀಸರಿಂದ 41 ಲಕ್ಷ ಮೌಲ್ಯದ ಚಿನ್ನಾಭರಣ, ವಾಹನ ವಶ – ಮಾಲೀಕರಿಗೆ ಹಸ್ತಾಂತರ

ಕೆಲ ದಿನಗಳ ಹಿಂದೆ ಮಹದೇವ್ ತಂದೆ ಜಮೀನಿನ ಒಂದು ಚಿಕ್ಕ ಭಾಗವನ್ನು ಮಾರಿದ್ದರು. ಈ ಮಾರಾಟದಿಂದ 5,200 ರೂಪಾಯಿ ಸಿಕ್ಕಿತ್ತು. ತಂದೆ-ಮಗ ಇಬ್ಬರೂ 2,500 ರೂ. ಹಂಚಿಕೊಂಡಿದ್ದರು. ಆದ್ರೆ ಮರುದಿನ ಬೆಳಗ್ಗೆ 4 ಗಂಟೆಗೆ ತಂದೆಯನ್ನ ಕೊಂದು ಹಣ ಎತ್ಕೊಂಡು ಮಹದೇವ್ ಪರಾರಿಯಾಗಿದ್ದನು. ಕೊಲೆ ನಡೆದ ಹಿಂದಿನ ರಾತ್ರಿ ಅಪ್ಪ-ಮಗನ ನಡುವೆ ಹಣದ ವಿಚಾರವಾಗಿ ಜಗಳ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

Source: publictv.in Source link