ಕೇರಂ ಸ್ಪಿನ್ನರ್​​​ ಆಯ್ಕೆ ವಿಚಾರದಲ್ಲಿ ಗೊಂದಲ -ಟೀಮ್​ ಮ್ಯಾನೇಜ್​ಮೆಂಟ್​ ನಡೆಗೆ ಅಶ್ವಿನ್​ ಬೇಸರ

ಕೇರಂ ಸ್ಪಿನ್ನರ್​​​ ಆಯ್ಕೆ ವಿಚಾರದಲ್ಲಿ ಗೊಂದಲ -ಟೀಮ್​ ಮ್ಯಾನೇಜ್​ಮೆಂಟ್​ ನಡೆಗೆ ಅಶ್ವಿನ್​ ಬೇಸರ

ಅಶ್ವಿನ್​ಗೆ ಸ್ಥಾನ ಸಿಗುತ್ತಾ ಇಲ್ವಾ? ಆರಂಭಿಕ 2 ಟೆಸ್ಟ್​ಗಳಲ್ಲಿ ಎದ್ದಿದ್ದ ಈ ಪ್ರಶ್ನೆ, ಇದೀಗ ಮೂರನೇ ಪಂದ್ಯಕ್ಕೂ ಮುನ್ನವೂ ಚರ್ಚೆಯಲ್ಲಿದೆ. ಇನ್​ಫ್ಯಾಕ್ಟ್..!​ ನಾನು ಆಡ್ತಿನಾ? ಇಲ್ವಾ? ಅನ್ನೋ ಕ್ಲಾರಿಟಿ ಸ್ವತಃ ಅಶ್ವಿನ್​ಗೂ ಸಿಗ್ತಿಲ್ವಂತೆ. ಈ ಒಂದು ಅಂಶವೇ ಇದೀಗ ಮ್ಯಾನೇಜ್​ಮೆಂಟ್​​ ಮೇಲೆ ಕೇರಂ ಸ್ಪಿನ್ನರ್​​ಗೆ ಬೇಸರ ತರಿಸಿದೆ.

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ಅಶ್ವಿನ್​ ಆಯ್ಕೆಯ ಬಗ್ಗೆ, ಹಲವು ಪ್ರಿಡಿಕ್ಷನ್​ ನಡೆದಿದ್ವು. ಅಶ್ವಿನ್​ ಪ್ಲೇಯಿಂಗ್​ ಇಲೆವೆನ್​ನ ಭಾಗ ಅನ್ನೋದು, ಹಲವರ ಮಾತಾಗಿತ್ತು. ಆದ್ರೆ ನಾಟಿಂಗ್​ಹ್ಯಾಮ್​ ಟೆಸ್ಟ್​ನಲ್ಲಿ ಈ ಭವಿಷ್ಯ ಸುಳ್ಳಾಗಿತ್ತು. ಅಶ್ವಿನ್​ ಕೈ ಬಿಟ್ಟ ಕಾರಣ ಮ್ಯಾನೇಜ್​ಮೆಂಟ್ ತೀವ್ರ ಟೀಕೆಯನ್ನ ಎದುರಿಸಿತ್ತು. ಹೀಗಾಗಿ ಲಾರ್ಡ್ಸ್​​ ಟೆಸ್ಟ್​ ಪಂದ್ಯದಲ್ಲಾದ್ರೂ ಅವಕಾಶ ಸಿಗುತ್ತೆ ಎಂದು ಭಾವಿಸಲಾಗಿತ್ತು.. ಲಾರ್ಡ್ಸ್​ ಅಂಗಳದಲ್ಲೂ ಆ ನಿರೀಕ್ಷೆ ಹುಸಿಯಾಯ್ತು.

ಲಾರ್ಡ್ಸ್​​ ಟೆಸ್ಟ್​ ಪಂದ್ಯದಿಂದ ಅಶ್ವಿನ್​ರನ್ನ ಕೈ ಬಿಟ್ಟ ನಡೆಯಂತೂ,ತೀವ್ರ ಟೀಕೆಗೆ ಗುರಿಯಾಗಿತ್ತು. ಸ್ಪಿನ್​ ದಿಗ್ಗಜ ಶೇನ್​ ವಾರ್ನ್​, ಡೇವಿಡ್​ ಲಾಯ್ಡ್​​, ವಾಸೀಂ ಜಾಫರ್​​ ಸೇರಿದಂತೆ ಹಲವರು ಕೇರಂ ಸ್ಪಿನ್ನರ್​​ಗೆ ಅವಕಾಶ ನೀಡದ್ದನ್ನ ಖಂಡಿಸಿದ್ರು. ಇದೀಗ ಸ್ವತಃ ಅಶ್ವಿನ್​ ಕೂಡ ಈ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಮ್ಯಾನೇಜ್​ಮೆಂಟ್​​ನ ಗೊಂದಲದ ನಡೆ ಅಶ್ವಿನ್​ ಬೇಸರಕ್ಕೆ ಕಾರಣವಾಗಿದೆ.

‘ನಿರಾಸೆಯಲ್ಲಿ ಅಂತ್ಯಗೊಳಿಸುತ್ತಾರೆ’..!

‘ಪಂದ್ಯಕ್ಕೂ ಮೊದಲು ಹೆಚ್ಚಿನ ಬಿಸಿಲಿನ ವಾತವರಣ ಇದೆ. ನೀನು ಆಡಲು ತಯಾರಾಗು ಎನ್ನುತ್ತಾರೆ. ಆದ್ರೆ, ಮಳೆ ಬಂದರೆ ಸಾಕು ನನ್ನನ್ನ ಬಿಟ್ಟು ಬೇರೆ ಆಯ್ಕೆ ಮಾಡುತ್ತಾರೆ. ಅವಕಾಶದ ಭರವಸೆ ನೀಡಿ ನಿರಾಸೆಯಲ್ಲಿ ಅದನ್ನ ಅಂತ್ಯಗೊಳಿಸುತ್ತಾರೆ’’

ಅಶ್ವಿನ್​, ಭಾರತದ ಸ್ಪಿನ್ನರ್​

blank

ಹೌದು, ಲಾರ್ಡ್ಸ್​​ ಟೆಸ್ಟ್​ ಪಂದ್ಯಕ್ಕೂ ಮುನ್ನ ಆಡಲು ತಯಾರಾಗಿ ಎಂದು ಹೇಳಿದ್ದ ಮ್ಯಾನೇಜ್​ಮೆಂಟ್​, ಮಳೆ ಬಂದ ಕಾರಣ ಅವಕಾಶ ನಿರಾಕರಿಸಿತ್ತಂತೆ. ಇದೇ ಆಶ್ವಿನ್​ಗೆ ಮ್ಯಾನೇಜ್​ಮೆಂಟ್​ ಮೇಲಿನ ಬೇಸರಕ್ಕೆ ಕಾರಣವಾಗಿದೆ. ಜೊತೆಗೆ ದೇಶ-ವಿದೇಶ ಎರಡೂ ಕಡೆ ಅಮೋಘ ಟ್ರ್ಯಾಕ್​ ರೆಕಾರ್ಡ್​​​ ಹೊಂದಿರುವ ಆಟಗಾರನ ಸಾಮರ್ಥ್ಯವನ್ನ ಅಳೆಯುವಲ್ಲಿ ಮ್ಯಾನೇಜ್​ಮೆಂಟ್​​ ವಿಫಲವಾಯ್ತಾ ಎಂಬ ಚರ್ಚೆ ಹುಟ್ಟಿಗೆ ಕಾರಣವಾಗಿದೆ.

ಇಷ್ಟೇ ಅಲ್ಲ..! ಈ ಸರಣಿಗೆ ಮುನ್ನ ಆಡಿದ ಕೌಂಟಿ ಪಂದ್ಯದಲ್ಲೂ ಅಶ್ವಿನ್​ 6 ವಿಕೆಟ್​ ಕಬಳಿಸಿ ಮಿಂಚಿದ್ರು. ಹೀಗಿದ್ದೂ ಆಯ್ಕೆಯ ವಿಚಾರದಲ್ಲಿ ಟೀಮ್ ​ಮ್ಯಾನೇಜ್​ಮೆಂಟ್​ ಗೊಂದಲದಲ್ಲಿರೋದ್ಯಾಕೆ ಅನ್ನೋದು ಪ್ರಶ್ನೆಯಾಗಿದೆ. ಕ್ಯಾಪ್ಟನ್​- ಕೋಚ್​ ಸ್ಪಷ್ಟ ನಿಲುವನ್ನ ತೆಳೆಯುವಲ್ಲಿ ವಿಫಲರಾಗ್ತಿರೋದು ಭಾರತದ ಹಿನ್ನೆಡೆಗೆ ಪ್ರಮುಖ ಕಾರಣ ಎಂದೇ ಇದನ್ನ ವಿಶ್ಲೇಷಣೆ ಮಾಡಲಾಗ್ತಿದೆ.

Source: newsfirstlive.com Source link