ಹೈಪ್ರೊಫೈಲ್ ಸೆಕ್ಸ್ ದಂಧೆ ಬಯಲು – ವಾಟ್ಸಪ್ ನಲ್ಲಿಯೇ ರೇಟ್ ಫೈನಲ್

– 8 ಮಹಿಳೆಯರು ಸೇರಿದಂತೆ 16 ಜನ ಪೊಲೀಸರ ವಶಕ್ಕೆ
– ಬಂದ ಹಣದಲ್ಲಿ ಹುಡುಗಿಯರಿಗೆ ಶೇ.30ರಷ್ಟು ಹಣ
– ಹೋಟೆಲ್ ಹೆಸರಿನಲ್ಲಿ ವೇಶ್ಯಾವಾಟಿಕೆ

ಪಾಟ್ನಾ: ಹೋಟೆಲ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಅಡ್ಡೆಯ ಪೊಲೀಸರು ದಾಳಿ ನಡೆಸಿ 16 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿಯ ಗರ್ದನಾಬಾಗಿ ಇಲಾಖೆಯ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇದೊಂದು ಹೈ ಪ್ರೊಫೈಲ್ ದಂಧೆಯಾಗಿದ್ದು, ಈ ವ್ಯವಹಾರದಲ್ಲಿ ಭಾಗಿಯಾದವರ ಹೆಸರು ಬೆಳಕಿಗೆ ಬರಬೇಕಿದೆ.

ಹೋಟೆಲ್ ನಲ್ಲಿ ಸಿಕ್ಕಿರುವ ಮಹಿಳೆಯರು ಕೋಲ್ಕತ್ತಾ ಮತ್ತು ಬನಾರಸ ಮೂಲದವರು ಎಂದು ತಿಳಿದು ಬಂದಿದೆ. ಎಸ್.ಪಿ. ಅಂಬರೀಶ್ ರಾಹುಲ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಆದ್ರೆ ಸ್ಥಳೀಯ ಪೊಲೀಸರಿಗೆ ದಾಳಿಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ದಾಳಿ ವೇಳೆ ಪೊಲೀಸರು ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಾಟ್ಸಪ್ ನಲ್ಲಿಯೇ ಡೀಲ್:
ಲಾಕ್‍ಡೌನ್ ವೇಳೆಯಲ್ಲಿಯೂ ಇಲ್ಲಿ ಸೆಕ್ಸ್ ದಂಧೆ ನಡೆಯುತ್ತಿತ್ತು. ಇನ್ನು ಇಲ್ಲಿ ಬರುತ್ತಿದ್ದ ಮಹಿಳೆಯರು ವಿವಾಹಿತರಾಗಿದ್ದು, ಈ ವಿಷಯ ಅವರ ಕುಟುಂಬಸ್ಥರಿಗೂ ತಿಳಿದಿದೆ. ಎಲ್ಲ ವ್ಯವಹಾರಗಳು ವಾಟ್ಸಪ್ ಮೂಲಕವೇ ನಡೆಯುತ್ತಿತ್ತು. ಗ್ರಾಹಕರಿಗೆ ವಾಟ್ಸಪ್ ನಲ್ಲಿಯೇ ಫೋಟೋ ತೋರಿಸಿ ಬೆಲೆ ನಿಗದಿ ಮಾಡಿ ಹೋಟೆಲ್ ಗೆ ಕರೆ ತರಲಾಗುತ್ತಿತ್ತು. ಆರು ಸಾವಿರದಿಂದ 18 ಸಾವಿರ ರೂ.ವರೆಗೆ ಬೆಲೆ ಫಿಕ್ಸ್ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

ಹೋಟೆಲ್ ಮಾಲೀಕ ಪಂಕಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ನಡೆಸುವದಾಗಿ ಹೇಳಿ ಪಂಕಜ್ ಕಟ್ಟಡವನ್ನು ಲೀಸ್ ಪಡೆದುಕೊಂಡು ಸೆಕ್ಸ್ ದಂಧೆ ನಡೆಸುತ್ತಿದ್ದನು. ಈ ದಂಧೆಗೆ ಬರುತ್ತಿದ್ದ ಮಹಿಳೆಯರಿಗೆ ಓರ್ವ ಗ್ರಾಹಕನಿಂದ ಬಂದ ಹಣದಿಂದ ಶೇ.30ರಷ್ಟು ನೀಡಲಾಗುತ್ತಿತ್ತು. ಬರೋ ಗ್ರಾಹಕರಿಗೆ ಹೋಟೆಲ್ ನಲ್ಲಿ ಮದ್ಯ, ಕಾಂಡೋಮ್, ಮಾತ್ರೆಗಳ ಸರಬರಾಜು ಮಾಡಲಾಗುತ್ತಿತ್ತು. ಇದನ್ನೂ ಓದಿ: ತಾವು ನಟಿಸಿದ ಸಿನಿಮಾವನ್ನೇ ನೋಡಿ ಗಳಗಳನೇ ಅತ್ತ ಕಿಯಾರಾ

Source: publictv.in Source link