ಮತ್ತೆ ಕಾಂಗ್ರೆಸ್​ನಲ್ಲಿ ಹುಬ್ಬೇರಿಸಿದ ಡಿಕೆಎಸ್​-ಜಮೀರ್ ಭೇಟಿ..!

ಮತ್ತೆ ಕಾಂಗ್ರೆಸ್​ನಲ್ಲಿ ಹುಬ್ಬೇರಿಸಿದ ಡಿಕೆಎಸ್​-ಜಮೀರ್ ಭೇಟಿ..!

ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆ ಒಂದರಲ್ಲಿ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನ ಮತ್ತೆ ಭೇಟಿಯಾಗಿದ್ದಾರೆ. ಇದು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್​ನಲ್ಲಿ ಇತ್ತೀಚೆಗೆ ‘ಮುಂದಿನ ಸಿಎಂ’ ಕುರಿತ ಘೋಷಣೆಗಳು ಜೋರಾಗಿ ಕೇಳಿಬಂದಿತ್ತು. ಜಮೀರ್ ಅಹಮ್ಮದ್ ಅವರು ಸಾರ್ವಜನಿಕವಾಗಿ ‘ಮುಂದಿನ ಸಿಎಂ ಸಿದ್ದರಾಮಯ್ಯ’ ಎಂದು ಘಂಟಾಘೋಷವಾಗಿ ಹೇಳುತ್ತಿದ್ದರು. ಇದು ಡಿಕೆ ಶಿವಕುಮಾರ್ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೇ ಡಿಕೆ ಶಿವಕುಮಾರ್ ಕೂಡ ಜಮೀರ್ ಅಹಮ್ಮದ್ ವಿರುದ್ಧ ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತು.

ಇದನ್ನೂ ಓದಿ: ಆ.13ರಂದೇ ಅಧಿಕಾರ ಸ್ವೀಕಾರಸಿದ್ದ ಎಸ್​​.ಆರ್​​​.ಬೊಮ್ಮಾಯಿ- ಸಿಎಂ ಬೊಮ್ಮಾಯಿಗೆ ಇದ್ಯಾ 13ರ ಕಂಟಕ?

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಆಗಸ್ಟ್​ 5 ರಂಂದು ಜಮೀರ್​ಗೆ ಸಂಬಂಧಿಸಿದ 15ಕಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಇಡೀ ದಾಳಿ ಬೆನ್ನಲ್ಲೇ ಜಮೀರ್ ಪರ ಬ್ಯಾಟ್ ಬೀಸಿದ್ದ ಡಿ.ಕೆ.ಶಿವಕುಮಾರ್, ಇದು ರಾಜಕೀಯ ಪ್ರೇರಿತ ಎಂದು ಗುಡುಗಿದ್ದರು. ಅದಾದ ನಂತರ ಅಂದರೆ ಆಗಸ್ಟ್ 9 ರಂದು ಜಮೀರ್ ಅವರ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಧೈರ್ಯ ತುಂಬಿ ಬಂದಿದ್ದರು.

ಇದನ್ನೂ ಓದಿ: ಬಳ್ಳಾರಿಗೆ ವಾಪಸ್ಸಾದ ಜನಾರ್ದನ ರೆಡ್ಡಿ; ಕುಟುಂಬ ಸಮೇತರಾಗಿ ವರಮಹಾಲಕ್ಷ್ಮಿ ಪೂಜೆ

ಅಲ್ಲದೇ, ಜಮೀರ್​ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಎಲ್ಲವೂ ಸರಿ ಇಲ್ಲ ಎಂದು ಟೀಕೆ ಮಾಡ್ತಿರೋರಿಗೆ ಹೊಸ ಸಂದೇಶವನ್ನ ಕೊಟ್ಟು ಬಂದಿದ್ದರು. ಇದೀಗ ನಿನ್ನೆ ಜಮೀರ್ ಅಹಮ್ಮದ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: ಜಮೀರ್ ಅಹಮ್ಮದ್​​​ಗೆ ಮತ್ತೆ ಶಾಕ್.. ದಿಢೀರ್ ನೋಟಿಸ್ ಕೊಟ್ಟ E

Source: newsfirstlive.com Source link