2.85 ಲಕ್ಷ ರೈತರ, ಕೃಷಿ ಕಾರ್ಮಿಕರ ಸಾಲ ಮನ್ನಾ ಘೋಷಿಸಿದ ಪಂಜಾಬ್​ ಸಿಎಂ

2.85 ಲಕ್ಷ ರೈತರ, ಕೃಷಿ ಕಾರ್ಮಿಕರ ಸಾಲ ಮನ್ನಾ ಘೋಷಿಸಿದ ಪಂಜಾಬ್​ ಸಿಎಂ

ಅಮೃತಸರ; ಪಂಜಾಬ್​ ರೈತರಿಗೆ ಸಿಎಂ ಅಮರೀಂದರ್ ಸಿಂಗ್ ಬಂಪರ್​​ ಗಿಫ್ಟ್​​ ನಿಡಿದ್ದಾರೆ. ರಾಜ್ಯದ 2 ಲಕ್ಷದ 85 ಸಾವಿರ ಕೃಷಿ ಕಾರ್ಮಿಕರಿಗಾಗಿ 520 ಕೋಟಿ ರೂ.ಗಳ ಸಾಲ ಪರಿಹಾರ ಯೋಜನೆ ಘೋಷಿಸಿದ್ದಾರೆ.

2017ರ ಜುಲೈ 31ರಿಂದ ಸಹಕಾರಿ ಸಾಲಗಳನ್ನು ಮಾಡಿದವರ ಹಾಗೂ ಶೇ.7ರಷ್ಟು ಅಥವಾ ಅದಕ್ಕಿಂತ ಅಧಿಕ ವಾರ್ಷಿಕ ಬಡ್ಡಿದರದ ಸಾಲವನ್ನು ಪಡೆದಿರುವ ಕೃಷಿ ಕಾರ್ಮಿಕರ ಒಟ್ಟು 520 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ ಅಂತ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.

ರಾಜೀವ್​ ಗಾಂಧಿ ಅವರ 77ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಪಂಜಾಬ್​ ಸರ್ಕಾರ ಸಾಲ ಮನ್ನಾ ಯೋಜನೆಯನ್ನು ಪ್ರಕಟಿಸಿದ್ದು, ಈ ಕುರಿತು ಮಾಹಿತಿ ನೀಡಿರುವ ಸಿಎಂ ಅಮರಿಂದರ್ ಸಿಂಗ್​, ಬಡತನ ನಿರ್ಮೂಲನೆ ರಾಜೀವ್ ಗಾಂಧಿ ಅವರ ಕನಸಾಗಿತ್ತು.. ಅವರ ಕನಸಿನಂತೆ ಭಾರತ ಒಂದು ದಿನ ಹಸಿವು ಮತ್ತು ಬಡತನ ಮುಕ್ತವಾಗಲಿದೆ ಎಂದು ಹೇಳಿದ್ದಾರೆ. ಅಂದಹಾಗೇ, ಈ ಹಿಂದೆ ಪಂಜಾಬ್​ ಸರ್ಕಾರ 4,700 ಕೋಟಿ ರೂಪಾಯಿ ಸಾಲ ಮನ್ನಾ ಯೋಜನೆಯನ್ನು ಜಾರಿ ಮಾಡಿತ್ತು. ಇದರಿಂದ 5.85 ಲಕ್ಷ ರೈತರಿಗೆ ಅನುಕೂಲವಾಗಿತ್ತು.

Source: newsfirstlive.com Source link