ಸೋತರೂ ‘ಕುಂದಾನಗರಿ’ಯ ಗೆಲುವಿಗೆ ರಣತಂತ್ರ -‘ಮಿಷನ್​ ಬೆಳಗಾವಿ’ ಮೇಲೆ ಸತೀಶ್​ ಜಾರಕಿಹೊಳಿ ಚಿತ್ತ..!

ಸೋತರೂ ‘ಕುಂದಾನಗರಿ’ಯ ಗೆಲುವಿಗೆ ರಣತಂತ್ರ -‘ಮಿಷನ್​ ಬೆಳಗಾವಿ’ ಮೇಲೆ ಸತೀಶ್​ ಜಾರಕಿಹೊಳಿ ಚಿತ್ತ..!

ಸತೀಶ್​ ಜಾರಕಿಹೊಳಿ.. ಬೆಳಗಾವಿ ಕಾಂಗ್ರೆಸ್​ ಪಾಲಿನ ಚಾಣಾಕ್ಯ ರಾಜಕಾರಣಿ. ಅಹಿಂದ ವರ್ಗ ಸಂಘಟನೆಯಲ್ಲಿ ಮಹತ್ತ ಪಾತ್ರ ನಿಭಾಯಿಸಿದ ನಾಯಕ. ಸತೀಶ್​, ಯಮಕನಮರಡಿ ಕ್ಷೇತ್ರದ ಶಾಸಕರು, ಜಾರಕಿಹೊಳಿ ಕುಟುಂಬದ ರಾಜಕಾರಣದ ಮರಕ್ಕೆ ನೀರುಣಿಸಿ ಬೆಳೆಸಿದವರು. ಸತೀಶ್​ ಸಹೋದರರಲ್ಲಿ ಇಬ್ಬರು ಈಗ ಬಿಜೆಪಿಯ ಶಾಸಕರು.. ಈಗ 2023ರ ಟಾರ್ಗೆಟ್​​ ಹಾಕಿಕೊಂಡಿದ್ದಾರೆ.

blank

2023ರ ಚುನಾವಣೆ ಮೇಲೆ ಸತೀಶ್ ಜಾರಕಿಹೊಳಿ ಕಣ್ಣಿಟ್ಟಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಯ ಕೆಲಸ ಚುರುಕುಗೊಳಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಿರುವ ಸತೀಶ್​, ಉಪಚುನಾವಣೆ ವೇಳೆ ಮತ ಹಾಕಿದ ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಪ ಮತದಲ್ಲಿ ಸೋತರೂ ಭವಿಷ್ಯದ ರಾಜಕಾರಣದಲ್ಲಿ ಮತ್ತಷ್ಟು ಗಟ್ಟಿಯಾಗಲು ಜಾರಕಿಹೊಳಿ ತಮ್ಮದೇ ಸರಳ ಶೈಲಿಯಲ್ಲಿ ಕ್ಷೇತ್ರಾದ್ಯಂತ ಸಂಚಾರ ನಡೆಸ್ತಿದ್ದಾರೆ.

blank

ಸೋತರೂ ‘ಕುಂದಾನಗರಿ’ ಮೇಲೆ ಕಣ್ಣು..!
2023ರ ಚುನಾವಣೆಗೆ ಸತೀಶ್ ಮಾಸ್ಟರ್ ಪ್ಲಾನ್​ ಹೆಣೆದಿದ್ದಾರೆ. ಈ ಲೆಕ್ಕಾಚಾರದಂತೆ ಬೆಳಗಾವಿ ಕ್ಷೇತ್ರದ ಜನರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಮಯ ವ್ಯರ್ಥ ಮಾಡದೆ ಪ್ರತಿ ಹಳ್ಳಿಗೂ ಭೇಟಿ ನೀಡಿ, ಕಾರ್ಯಕರ್ತರು, ಜನರ ಜೊತೆ ಸಮಾಲೋಚನೆ ಮಾಡ್ತಿದ್ದಾರೆ. ಈ ಮೂಲಕ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಸತೀಶ್​​ ರಣತಂತ್ರ ಹೆಣೆದಿದ್ದಾರೆ.

ಸತೀಶ್​ ಜಾರಕಿಹೊಳಿ ಮಹತ್ವಾಕಾಂಕ್ಷಿ ರಾಜಕಾರಣಿ. ಉನ್ನತ ಹುದ್ದೆಯ ಮೇಲೆ ಕಣ್ಣೀಟ್ಟು ಕುಳಿತಿರುವ ಹಿಂದುಳಿದ ಸಮುದಾಯದ ನಾಯಕ. ಅಷ್ಟಕ್ಕೂ ಸತೀಶ್​​ ಹಾಕಿಕೊಂಡಿರುವ ಯೋಜನೆಗಳೇನು? ಸೋತರು, ಬೆಳಗಾವಿಯ ಮೇಲೆ ಯಾಕಿಷ್ಟು ಪ್ರೀತಿ? ಭವಿಷ್ಯದ ಲೆಕ್ಕಾಚಾರ ಏನು ಹೇಳ್ತೀವಿ ಓದಿ..

blank

ಮಿಷನ್​ ಬೆಳಗಾವಿ!
ಮೊದಲು ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಕೆಲಸ ಚುರುಕುಗೊಳಿಸಬೇಕು.. ಜಿಲ್ಲೆಯ 2 ಲೋಕಸಭಾ ಕ್ಷೇತ್ರದ ಮೇಲೆ ಕಣ್ಣು ನೆಟ್ಟಿರುವ ಸತೀಶ್​​, ಬೆಳಗಾವಿ ಮತ್ತು ಚಿಕ್ಕೋಡಿ-ಸದಲಗಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ.. ಇದರ ಜೊತೆಗೆ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 10 ಸ್ಥಾನ ಕಾಂಗ್ರೆಸ್​​​ ಮಡಿಲಿಗೆ ತುಂಬಿಸಬೇಕು ಅನ್ನೋ ಗುರಿ ಹೊಂದಿದ್ದಾರೆ.

blank

ಒಟ್ಟಾರೆ, ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಮಂಗಳಾ ಅಂಗಡಿ ವಿರುದ್ಧ ಅಲ್ಪಮತದಲ್ಲಿ ಸತೀಶ್ ಜಾರಕಿಹೊಳಿ ಸೋಲು ಕಂಡಿದ್ದರು. ಆದ್ರೆ, ಸೋತರು ಕಾಂಗ್ರೆಸ್​ ಪಾಲಿಗೆ ಈ ಮತಗಳಿಕೆ ಹೊಸ ಆಶಾಭಾವ ಹುಟ್ಟುಹಾಕಿತ್ತು. ಅದನ್ನೇ ಈಗ ಲಾಭಕ್ಕೆ ತಿರುಗಿಸಿಕೊಳ್ಳಲು ಸತೀಶ್​​ ಜಾರಕಿಹೊಳಿ ಮಾಸ್ಟರ್​​ ಪ್ಲಾನ್​​ ಹೆಣೆದಿದ್ದಾರೆ. ಆದ್ರೆ, ಪ್ಲಾನ್​​​ ಸಕ್ಸಸ್​​ ಆಗುತ್ತಾ ಅನ್ನೋದು 2023ರ ಫಲಿತಾಂಶವೇ ಉತ್ತರ ನೀಡಬೇಕು.

ಮಧುಸೂದನ್​, ಪೊಲಿಟಿಕಲ್​ ಬ್ಯೂರೋ, ನ್ಯೂಸ್​ಫಸ್ಟ್​

Source: newsfirstlive.com Source link