ಮಂಗಳೂರಲ್ಲಿ ರೈಲ್ವೇ ಹಳಿ ದಾಟುತ್ತಿದ್ದಾಗ ಆಕ್ಸಿಡೆಂಟ್; ಟ್ರೈನ್ ಡಿಕ್ಕಿಯಾಗಿ ಇಬ್ಬರು ದುರ್ಮರಣ

ಮಂಗಳೂರಲ್ಲಿ ರೈಲ್ವೇ ಹಳಿ ದಾಟುತ್ತಿದ್ದಾಗ ಆಕ್ಸಿಡೆಂಟ್; ಟ್ರೈನ್ ಡಿಕ್ಕಿಯಾಗಿ ಇಬ್ಬರು ದುರ್ಮರಣ

ಮಂಗಳೂರು: ರೈಲು ಡಿಕ್ಕಿಹೊಡೆದು ಮಹಿಳೆಯರಿಬ್ಬರು ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಮಾಹಾಕಾಳಿ ಪಡ್ಪು ಎಂಬಲ್ಲಿ ನಡೆದಿದೆ.

ರೈಲು ಹಳಿ ದಾಟುತಿದ್ದಾಗ ದುರ್ಘಟನೆ ಸಂಭವಿಸಿದೆ. ಮೃತ ಮಹಿಳೆಯರು ಬೀಡಿ ಬ್ರಾಂಚ್​ನಲ್ಲಿ ಕೆಲಸ ಮಾಡುತ್ತಿದ್ದರು. ಅಂತೆಯೇ ಇಂದು ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

Source: newsfirstlive.com Source link