ಬೆಂಗಳೂರಲ್ಲಿ ಫೈರಿಂಗ್ ಅಂಡ್ ಅರೆಸ್ಟ್ -ರೌಡಿಶೀಟರ್ ಅವಿನಾಶ್ ಬಂಧನದ ರೋಚಕ ಕಹಾನಿ..!

ಬೆಂಗಳೂರಲ್ಲಿ ಫೈರಿಂಗ್ ಅಂಡ್ ಅರೆಸ್ಟ್ -ರೌಡಿಶೀಟರ್ ಅವಿನಾಶ್ ಬಂಧನದ ರೋಚಕ ಕಹಾನಿ..!

ಬೆಂಗಳೂರು: ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕುಖ್ಯಾತ ರೌಡಿಶೀಟರ್​ ಅವಿನಾಶ್ ಅಲಿಯಾಸ್ ರೆಬೆಲ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಹೆಬ್ಬಾಳ ಬಳಿಯ ಗುಡ್ಡದಹಳ್ಳಿ ಬಳಿ ಘಟನೆ ನಡೆದಿದ್ದು, ಅವಿನಾಶ್ ಅಲಿಯಾಸ್ ರೆಬೆಲ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ಅವಿನಾಶ್ ಸಂಜಯನಗರ ಠಾಣೆ ರೌಡಿಶೀಟರ್ ಆಗಿದ್ದು, ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.

22 ದಿನಗಳಿಂದ ತಲೆಮರೆಸಿಕೊಂಡಿದ್ದ!
ಈ ಹಿಂದೆ ಮುನಿರಾಜು ಎಂಬವವರ ಮೇಲೆ ಹಾಡಹಗಲೇ ಅವಿನಾಶ್​​ ಹಲ್ಲೆ ಮಾಡಿ ಎಸ್ಕೇಪ್​ ಆಗಿದ್ದ. ಈ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿತ್ತು. ಪ್ರಕರಣದ ಸಂಬಂಧ ಆರೋಪಿಯನ್ನು ಬಂಧಿಸಿಲು ಸಂಜನಗರ ಇನ್ಸ್​​​ಪೆಕ್ಟರ್​ ಬಾಲರಾಜ್ ಹಾಗೂ ತಂಡ ತೆರಳಿತ್ತು. ಈ ವೇಳೆ ಪೇದೆ ಸಂತೋಷ್ ಮೇಲೆ ಅವಿನಾಶ್​ ಹಲ್ಲೆ ಮಾಡಿ ಎಸ್ಕೇಪ್​ ಆಗಲು ಯತ್ನಿಸಿದ್ದ. ಪರಿಣಾಮ ಆತ್ಮ ರಕ್ಷಣೆಗಾಗಿ ಆರೋಪಿ ಕಾಲಿಗೆ ಇನ್ಸ್​​ಪೆಕ್ಟರ್​ ಬಾಲರಾಜ್​​ ಗುಂಡು ಹಾರಿಸಿ ಬಂಧಿಸಿದ್ದಾರೆ.

blank
ಸಂಜಯನಗರ ಇನ್ಸ್​ಪೆಕ್ಟರ್ ಬಾಲರಾಜ್

ಇದೇ ಜುಲೈ 29 ರಂದು ಮುನಿರಾಜು ಅನ್ನೋರ ಮೇಲೆ ಲೈವ್ ಅಟ್ಯಾಕ್ ನಡೆಸಿದ್ದ. ಅವಿನಾಶ್ ಅಂಡ್ ಟೀಂ ವಿಕೆಟ್ಸ್​ ಹಾಗೂ ದೊಣ್ಣೆಯಿಂದ ಅಟ್ಯಾಕ್ ಮಾಡಿತ್ತು. ಮುನಿರಾಜು, ತನ್ನ ಸಹೋದ್ಯೋಗಿ & ಆಕೆಯ ಮಗಳನ್ನ ಕರೆದೊಯ್ಯುವಾಗ ಈ ಗ್ಯಾಂಗ್ ದಾಳಿ ನಡೆಸಿತ್ತು.

5 ಪ್ರಕರಣಗಳು ದಾಖಲು!
ರೌಡಿ ಅವಿನಾಶ್ ವಿರುದ್ಧ ಒಟ್ಟು 5 ಪ್ರಕರಣಗಳು ದಾಖಲಾಗಿವೆ. ರಾಮಮೂರ್ತಿ ನಗರದಲ್ಲಿ ಮರ್ಡರ್ ಕೇಸ್, ಸಂಜಯನಗರ, ಯಲಹಂಕ ಮತ್ತು ಹೆಬ್ಬಾಳದಲ್ಲಿ ಪ್ರತ್ಯೇಕ ಕೊಲೆಗೆ ಯತ್ನದ ಕೇಸ್ ದಾಖಲಾಗಿವೆ. ಇನ್ನು ಆರೋಪಿ ಅವಿನಾಶ್ ಕಳೆದ 22 ದಿನಗಳಿಂದ ತಲೆ ಮರೆಸಿಕೊಂಡಿದ್ದ. ಇಂದು ಖಚಿತ ಮಾಹಿತಿ ಪಡೆದು ಬಂಧಿಸಲು ಹೋಗಿದ್ದಾಗ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ.

ಏರ್​ಫೈರಿಂಗ್
ಈ ವೇಳೆ ಪೊಲೀಸ್ ಸಿಬ್ಬಂದಿ ಸಂತೋಷ್​ಗೆ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆಗ ಸರಂಡರ್ ಆಗುವಂತೆ ಇನ್ಸ್ ಪೆಕ್ಟರ್ ಬಾಲರಾಜ್ ಏರ್ ಫೈರಿಂಗ್ ಮಾಡಿದ್ದಾರೆ. ಆಗಲೂ ಸುಮ್ಮನಾಗದ ಆರೋಪಿ, ಇನ್ಸ್ ಪೆಕ್ಟರ್ ಮೇಲೆಯೇ‌ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಬಾಲರಾಜ್ ಫೈರ್ ಮಾಡಿದ್ದಾರೆ.

blank

ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ವಿಭಾಗದ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ, ಕಳೆದ ತಿಂಗಳು ಹಾಡಹಗಲೇ ಮುನಿರಾಜು ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಗಾಯಾಳು ಮುನಿರಾಜು ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕೇಸಲ್ಲಿ ಆರೋಪಿ ಅವಿನಾಶ್ ಸುಪಾರಿ ತೆಗೆದುಕೊಂಡು ಹಲ್ಲೆ ನಡೆಸಿದ್ದ. ಈ ಕೇಸ್​ನಲ್ಲಿ ಇನ್ನೂ ಕೆಲವು ಆರೋಪಿಗಳು ನಾಪತ್ತೆಯಾಗಿದ್ದಾರೆ.

ಸುಪಾರಿ ಹಿಂದಿದೆ ಒಂದು ಸಂಬಂಧ
ಇಂದು ಬೆಳಗಿನ ಜಾವ ಗುಡ್ಡದಹಳ್ಳಿ ಬಳಿ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಆರೋಪಿ ಬಂಧಿಸಲು ಹೋದಾಗ ಕಾನ್ಸ್‌ಟೇಬಲ್ ಸಂತೋಷ್ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್ ಬಾಲರಾಜ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ದೂರುದಾರ ಮುನಿರಾಜು ಮಹಿಳೆಯ ಜೊತೆ ಸಂಬಂಧ ಹೊಂದಿದ್ದ. ಬಳಿಕ ಆಕೆಯ ಮಗಳಿಗೂ ಕಿರುಕುಳ ನೀಡಿದ್ದ ಬಗ್ಗೆ ಆರೋಪ ಕೇಳಿ ಬಂದಿದೆ. ಈ ವಿಚಾರ ಯುವತಿ ತನ್ನ ಸ್ನೇಹಿತನ ಬಳಿ ಹೇಳಿಕೊಂಡಿದ್ದಾಳೆ. ಯುವತಿ ಸ್ನೇಹಿತ ಮುನಿರಾಜು ಮೇಲೆ ಅಟ್ಯಾಕ್ ಮಾಡಲು ಸುಪಾರಿ ಕೊಟ್ಟಿದ್ದಾನೆ. ಆರೋಪಿ ಅವಿನಾಶ್ ಸುಪಾರಿ ಪಡೆದು ತನ್ನ ಸಹಚರರ ಜೊತೆಗೂಡಿ ಹಲ್ಲೆ ನಡೆಸಿದ್ದಾನೆ. ಅವಿನಾಶ್ ಮೇಲೆ ಕೊಲೆ, ಕೊಲೆಯತ್ನ ಸೇರಿ ಐದು ಪ್ರಕರಣಗಳು ಬಾಕಿ ಇವೆ ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸ್​ ಪಿಸ್ತೂಲ್​​ -ಕುಖ್ಯಾತ ರೌಡಿಶೀಟರ್ ಅವಿನಾಶ್ ಕಾಲಿಗೆ ಗುಂಡು

Source: newsfirstlive.com Source link