ಕಣಿವೆ ನಾಡಿನಲ್ಲಿ ಸರಣಿ ಎನ್​ಕೌಂಟರ್​: ನಿನ್ನೆ ಎರಡು, ಇಂದು ಮೂವರು ಉಗ್ರರು ಉಡೀಸ್

ಕಣಿವೆ ನಾಡಿನಲ್ಲಿ ಸರಣಿ ಎನ್​ಕೌಂಟರ್​: ನಿನ್ನೆ ಎರಡು, ಇಂದು ಮೂವರು ಉಗ್ರರು ಉಡೀಸ್

ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಗುಂಡಿನ ಸದ್ದು ಜೋರಾಗಿತ್ತು. ಉಗ್ರರ ವಿರುದ್ಧ ಬಿಎಸ್​ಎಫ್ ಯೋಧರು ನಡೆಸಿದ ರೋಚಕ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನ ಹೊಡೆದುರುಳಿಸಲಾಗಿದೆ.

ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ.. ನಾಗಬೀರನ್ ಕಾಡಿನಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಅವಂಟಿಪೊರಾ ಪೊಲೀಸರು ಹಾಗೂ ಯೋಧರು ಭಯೋತ್ಪಾದಕರ ವಿರುದ್ಧ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ವೇಳೆ ಮೂವರು ಅಪರಿಚಿತ ಉಗ್ರರನ್ನ ಹೊಡೆದುರುಳಿಸಲಾಗದೆ. ಇವರೆಲ್ಲಾ ಜೈಷ್ -ಇ-ಮೊಹಮ್ಮದ್ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು.

ಇನ್ನು ನಿನ್ನೆ ಇದೇ ಜಿಲ್ಲೆಯಲ್ಲಿ ಇಬ್ಬರು ಹಿಜ್ಬಲ್ ಮುಜಾಹಿದ್ದೀನ್ ಉಗ್ರರನ್ನ ಹೊಡೆದುರುಳಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ನಿರಂತರವಾಗಿ ಎನ್​ಕೌಂಟರ್ ನಡೆಯುತ್ತಿದೆ. ಈ ವರ್ಷದಲ್ಲಿ ಇದುವರೆಗೆ ನಡೆದ ಎನ್​ಕೌಂಟರ್​ನಲ್ಲಿ ಒಟ್ಟು 94 ಉಗ್ರರನ್ನ ಹೊಡೆದು ಸಾಯಿಸಲಾಗಿದೆ.

Source: newsfirstlive.com Source link