ರಾಜೀವ್​​ಗೆ ನನ್ನಷ್ಟು ಯಾರೂ ಬೈದಿಲ್ಲ.. ಆದ್ರೆ ಅವ್ರು ನನ್ನ ಕನಸನ್ನ ನನಸು ಮಾಡ್ತಿದ್ದಾರೆ -ಕಿಚ್ಚ ಸುದೀಪ್

ರಾಜೀವ್​​ಗೆ ನನ್ನಷ್ಟು ಯಾರೂ ಬೈದಿಲ್ಲ.. ಆದ್ರೆ ಅವ್ರು ನನ್ನ ಕನಸನ್ನ ನನಸು ಮಾಡ್ತಿದ್ದಾರೆ -ಕಿಚ್ಚ ಸುದೀಪ್

ರಾಜೀವ್ ಒಬ್ಬ ಒಳ್ಳೆ ಕಲಾವಿದನಾಗಬೇಕು ಅನ್ನೋದು ನನ್ನ ಬಹುದಿನಗಳ ಕನಸು ಅಂತಾ ಸ್ಯಾಂಡಲ್​​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಹೇಳಿದ್ದಾರೆ. ಹೌದು, ಇತ್ತೀಚೆಗಷ್ಟೇ ಬಿಗ್​ಬಾಸ್​ ಸೀಸನ್​ 8ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ನಟ ರಾಜೀವ್​ ಸುದೀಪ್​ಅವರಿಗೆ ತುಂಬ ವರ್ಷಗಳಿಂದಲೂ ಬಹಳ ಆಪ್ತ ಗೆಳೆಯ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.

ಇನ್ನು ನಿನ್ನೆಯಷ್ಟೇ ನಟ ರಾಜೀವ್​ ಅಭಿನಯದ ಹೊಸ ಸಿನಿಮಾ ‘ಉಸಿರೆ ಉಸಿರೆ’ ಚಿತ್ರದ ಪೋಸ್ಟರ್​ ಲಾಂಚ್​ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್​ ಅಥಿತಿಯಾಗಿ ಆಗಮಿಸಿದ್ರು. ಬಳಿಕ ಮಾತನಾಡಿದ ಕಿಚ್ಚ ಸುದೀಪ್, ರಾಜೀವ್​ ಒಬ್ಬ ಇನೋಸೆಂಟ್​ ಸೋಲ್​, ಅವನ್ನು ಒಬ್ಬ ಒಳ್ಳೆ ಕಲಾವಿದನಾಗಬೇಕು ಅನ್ನೊದು ನನ್ನ ಬಹುದಿನಗಳ ಕನಸಾಗಿತ್ತು ಅಂತಾ ಹೇಳಿದ್ರು.

blank

ರಾಜೀವ್​ಗೆ ಇನ್ನು ಪ್ರಪಂಚ ಜ್ಞಾನ ಅಷ್ಟಾಗಿ ಗೊತ್ತಿಲ್ಲ, ಇವತ್ತು ಏನಾದರೂ ಸ್ವಲ್ಪ ಅರಿವು ರಾಜೀವ್​ಗೆ ಇದೆ ಅಂದ್ರೆ ಅದು ಅವನ್ನ ಹೆಂಡತಿಯಿಂದ ಅಂತಾ ಸುದೀಪ್, ರಾಜೀವ್​ ಅವ್ರ ಕಾಲೆಳೆದ್ರು. ಇನ್ನು ನಾನ್ನು ರಾಜೀವ್​ಗೆ ಬೈದಷ್ಟು ಬೇರೆಯಾರು ಅವ್ರಿಗೆ ಬೈಯೋಕೆ ಸಾಧ್ಯಯಿಲ್ಲ.. ರಾಜೀವ್​​ ಈಗಲ್ಲೂ ಸ್ಟೇಟ್​ಗಾದ್ರು ಟಿ-20 ಕ್ರಿಕೆಟ್ ಆಡೋ ಕ್ಯಾಪಸಿಟಿ ಇದೆ. ರಾಜೀವ್​​ನನ್ನು ಸ್ಕ್ರೀನ್​​ ಮೇಲೆ ನೋಡೋದು ನನ್ನ ಕನಸಾಗಿತ್ತು.. ಈಗ ನಿಜ ಆಗ್ತಿದೆ ಎಂದ್ರು.

ಬಹಳ ದೊಡ್ಡ ದೊಡ್ಡ ಬ್ಯಾನರ್​ಗಳೇ ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ಮಾಡಲು ಹಿಂಜರಿಯುತ್ತಾರೆ. ಆದ್ರೆ ನೀವು ಮುಂದೆ ಬಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದೀರಾ ನಿಮಗೆ ಒಳ್ಳೆದಾಗಲಿ ಹಾಗೂ ಎಲ್ಲರ ಬೆಂಬಲವೂ ನಿಮಗೆ ಸಿಗುತ್ತೆ ಅಂತಾ ಉಸಿರೆ ಉಸಿರೆ ಚಿತ್ರದ ನಿರ್ಮಾಪಕ ಪ್ರದೀಪ್​ ಅವರಿಗೆ ಆಲ್​ ದಿ ಬೆಸ್ಟ್​ ಅಂದ್ರು.

ಎಲ್ಲರೂ ಈ ಹಾಡು ನನ್ನ ಸಿನಿಮಾದು ಅಂತಾ ಹೇಳ್ತಾರೆ. ಹೌದು, ಇದು ನನ್ನ ಸಿನಿಮಾ ಹಾಡೇ, ಆದ್ರೆ ನನಗೆ ಅದು ಹಿಸ್ಟರಿ.. ರಾಜೀವ್​ಗೆ ಇದು ಪ್ರೆಸೆಂಟ್. ನಾನು ನನ್ನ ಹಿಸ್ಟರಿ ಬಿಟ್ಟು ಮುಂದೆ ಬಂದು 20 ವರ್ಷವಾಗಿದೆ. ಇದೇ ಉಸಿರೆ ಉಸಿರೆ ಮತ್ತೊಬ್ಬರ ಜೀವನದಲ್ಲಿ ಇನ್ನೊಂದು ಮೈಲ್​ಸ್ಟೋನ್​ ಆದ್ರೆ ನನಗೆ ತುಂಬಾ ಖುಷಿಯಾಗುತ್ತೆ ಅಂತಾ ಹೇಳಿದ್ರು. ಕೊನೆಯಲ್ಲಿ ಇಡೀ ಚಿತ್ರತಂಡಕ್ಕೆ ಒಳ್ಳೆದಾಗಲಿ ಆಲ್​ ದ ಬೆಸ್ಟ್​ ಅಂತಾ ಹೇಳಿದ್ರು.

Source: newsfirstlive.com Source link