ಮುಂದೊಂದು, ಹಿಂದೊಂದು ನಂಬರ್ – ನಕಲಿ ಪೊಲೀಸ್ ವ್ಯಾನ್ ಕಂಡು ತಬ್ಬಿಬ್ಬಾದ ಜನ

ಗದಗ: ನಗರದಲ್ಲಿ ನಕಲಿ ಪೊಲೀಸ್ ವಾಹನ ಓಡಾಟ ಕಂಡು ಗದಗ-ಬೆಟಗೇರಿ ಅವಳಿ ನಗರದ ಜನರು ಗೊಂದಲಕ್ಕೀಡಾದ ಘಟನೆ ನಡೆದಿದೆ. ನಗರದ ಪಂಡಿತ್ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ ರಸ್ತೆಯಲ್ಲಿ ನಕಲಿ ಪೊಲೀಸ್ ವಾಹನ ನಿಂತಿದೆ.

ಈ ಬೊಲೆರೊ ವಾಹನಕ್ಕೆ ಮುಂದೊಂದು ನಂಬರ್, ಹಿಂದೊಂದು ಎರಡೆರಡು ನಂಬರ್ ಪ್ಲೇಟ್ ಇರುವುದನ್ನು ಅನೇಕರು ಗಮನಿಸಿದ್ದಾರೆ. ನೋಡಿದ ಜನರಿಗೆ ಕೆಲಕಾಲ ಗೊಂದಲ ಸೃಷ್ಟಿಯಾಗಿದೆ. ವಾಹನಕ್ಕೆ ಎರಡು ನಂಬರ್ ಇರಲ್ವಲ್ಲಾ, ಏನಿದು ಅಂತ ತಲೆಕೆಡಿಸಿಕೊಂಡಿದ್ದಾರೆ. ನಂತರ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದನ್ನೂ ಓದಿ:ಬೆಕ್ಕಿಗಾಗಿಯೇ ಎಸಿ ರೂಮ್, ಮಿನಿ ಥಿಯೇಟರ್ ನಿರ್ಮಾಣ – ಗುಜರಾತಿನಲ್ಲೊಬ್ಬ ಕ್ಯಾಟ್ ಪ್ರಿಯ

ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದರು. ಆಗ ಪೊಲೀಸ್ ಸಿಬ್ಬಂದಿ ಒಂದು ಕ್ಷಣ ಕಂಗಾಲಾಗಿದ್ದರು. ಪರಿಶೀಲಿಸಿದಾಗ ವಾಸ್ತವಿಕತೆ ಬಯಲಾಗಿದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ “ಕ್ಷೇತ್ರಪತಿ” ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಈ ಬೊಲೆರೋ ವಾಹನ ಬಳಸಲಾಗಿತ್ತು ಎಂದು ತಿಳಿದು ಬಂದಿದೆ. ಪರವಾನಿಗೆ ಪತ್ರ ನೋಡಿ ನಂತರ ಶೂಟಿಂಗ್ ಸ್ಥಳ ಬಿಟ್ಟು ಎಲ್ಲಂದರಲ್ಲಿ ಓಡಾಡದಂತೆ ವಾಹನ ಚಾಲಕನಿಗೆ ವಾರ್ನ್ ಮಾಡಿ ಬಿಟ್ಟು ಕಳುಹಿಸಿದ್ದಾರೆ. ಇದನ್ನೂ ಓದಿ:ವಿಕೇಂಡ್ ಕರ್ಫ್ಯೂ – ಕೊಡಗಿನಲ್ಲಿ ಉತ್ತಮ ಸ್ಪಂದನೆ, ಬೀದರ್ ನಲ್ಲಿ ಡೋಂಟ್ ಕೇರ್

Source: publictv.in Source link