‘ವಿನಯ್ ಕುಲಕರ್ಣಿ ಅಣ್ಣನಿದ್ದಂತೆ..’ -ಬರಮಾಡಿಕೊಳ್ಳಲು ಹಿಂಡಲಗಾ ಜೈಲಿಗೆ ಬಂದ ಹೆಬ್ಬಾಳ್ಕರ್

‘ವಿನಯ್ ಕುಲಕರ್ಣಿ ಅಣ್ಣನಿದ್ದಂತೆ..’ -ಬರಮಾಡಿಕೊಳ್ಳಲು ಹಿಂಡಲಗಾ ಜೈಲಿಗೆ ಬಂದ ಹೆಬ್ಬಾಳ್ಕರ್

ಬೆಂಗಳೂರು: ಬಿಜೆಪಿ ನಾಯಕ ಯೋಗೇಶ್​ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರನ್ನ ಬರ ಮಾಡಿಕೊಳ್ಳಲು ಹಿಂಡಲಗಾ ಜೈಲಿಗೆ ಕಾಂಗ್ರೆಸ್​ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸಿದ್ದಾರೆ.

blank

ಇದನ್ನೂ ಓದಿ: ಮತ್ತೆ ಕಾಂಗ್ರೆಸ್​ನಲ್ಲಿ ಹುಬ್ಬೇರಿಸಿದ ಡಿಕೆಎಸ್​-ಜಮೀರ್ ಭೇಟಿ..!

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಹೆಬ್ಬಾಳ್ಕರ್.. ವಿನಯ್ ಕುಲಕರ್ಣಿ ನನ್ನ ಅಣ್ಣನಿದ್ದಂತೆ, ಅಣ್ಣ ಹೊರಗೆ ಬರುತ್ತಿರುವುದು ಖುಷಿ ನೀಡಿದೆ. ನಾಳೆ ರಕ್ಷಾ ಬಂಧನ ಹಿನ್ನೆಲೆಯಲ್ಲಿ ಅಣ್ಣ ಹೊರ ಬರುತ್ತಿದ್ದಾರೆ. ಒಬ್ಬ ತಂಗಿಯಾಗಿ ಮಾನಸಿಕ ಧೈರ್ಯ ತುಂಬಲು ಬಂದಿದ್ದೇನೆ. ವಿನಯ್ ಅಣ್ಣ ರಾಜ್ಯಮಟ್ಟದ ನಾಯಕರು, ಅವರ ಬಿಡುಗಡೆ ಖುಷಿ ತಂದಿದೆ. ಅಣ್ಣನ ಬಿಡುಗಡೆ ನನಗೆ ಹಾಗೂ ಕಾರ್ಯಕರ್ತರಿಗೆ ಶಕ್ತಿ ತಂದಿದೆ. ಕೋರ್ಟ್​ನಲ್ಲಿ ಪ್ರಕರಣ ಇರುವುದರಿಂದ ಇದರ ಬಗ್ಗೆ ನಾನು ಏನೂ ಮಾತನಾಡಲ್ಲ ಎಂದರು.

blank

ಇದನ್ನೂ ಓದಿ: ಸೋತರೂ ‘ಕುಂದಾನಗರಿ’ಯ ಗೆಲುವಿಗೆ ರಣತಂತ್ರ -‘ಮಿಷನ್​ ಬೆಳಗಾವಿ’ ಮೇಲೆ ಸತೀಶ್​ ಜಾರಕಿಹೊಳಿ ಚಿತ್ತ..!

ಇನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ವಿನಯ್ ಕುಲಕರ್ಣಿ ಅಭಿಮಾನಿಗಳು ಕೂಡ ಆಗಮಿಸಿದ್ದಾರೆ. ಜೈಲಿನ ಬಳಿ ಕೆಲವು ಅಭಿಮಾನಿಗಳು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದ ಪ್ರಸಂಗವವೂ ನಡೆದಿದೆ.

blank

ಇದನ್ನೂ ಓದಿ: ಜಾಮೀನು ಸಿಕ್ಕರೂ ಇಂದು ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಬಿಡುಗಡೆ ಭಾಗ್ಯವಿಲ್ಲ

Source: newsfirstlive.com Source link