ರೆಡ್​​ ಝೋನ್​ನಲ್ಲಿ 8 ಜಿಲ್ಲೆಗಳು! ರಾಜ್ಯಕ್ಕೆ ಮತ್ತೆ ಕೊರೊನಾ ಕಂಟಕ?

ರೆಡ್​​ ಝೋನ್​ನಲ್ಲಿ 8 ಜಿಲ್ಲೆಗಳು! ರಾಜ್ಯಕ್ಕೆ ಮತ್ತೆ ಕೊರೊನಾ ಕಂಟಕ?

ಬೆಂಗಳೂರು: ನೆರೆಯ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಕೂಡ ಸೋಂಕಿತರ ಸಂಖ್ಯೆ ಏರಿಕೆ ಕಂಡ ಬಂದಿದೆ. ಅದರಲ್ಲೂ ರಾಜ್ಯದ 8 ಜಿಲ್ಲೆಗಳು ರೆಡ್ ಝೋನ್​ಗೆ ತಲುಪಿವೆ.

ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ ಪ್ರಮುಖ 8 ಜಿಲ್ಲೆಗಳಲ್ಲಿ ನಿತ್ಯ ಪಾಸಿಟಿವಿಟಿ ರೇಟ್ ಏರಿಕೆ ಕಾಣುತ್ತಿದೆ. ಕಳೆದ ಒಂದು ವಾರದ ಪಾಸಿಟಿವಿಟಿ ದರದ ಏರಿಕೆಯಲ್ಲಿ ಈ 8 ಜಿಲ್ಲೆಗಳು ಮುಂಚೂಣಿಯಲ್ಲಿವೆ.

ಎಲ್ಲಾ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ 0. ಇದ್ರೆ ಈ 8 ಜಿಲ್ಲೆಗಳಲ್ಲಿ ಮಾತ್ರ 1.00 ನಿಂದ 3.26 ರವರೆಗೆ ಏರಿಕೆ ಕಂಡು ಗಾಬರಿ ಹುಟ್ಟಿಸಿದೆ. ಸದ್ಯ ರಾಜ್ಯದ ಒಟ್ಟು ಪಾಸಿಟಿವಿಟಿ ದರ 0.92 ರಷ್ಟಿದೆ. ಈ ಜಿಲ್ಲೆಗಳಿಂದ ಅಕ್ಕಪಕ್ಕದ ಜಿಲ್ಲೆಗಳಿಗೂ ಸದ್ಯ ಆತಂಕ ಶುರುವಾಗಿದ್ದು, ಈಡೀ ರಾಜ್ಯಕ್ಕೆ ಈ ಜಿಲ್ಲೆಗಳೇ ಕಂಟಕವಾಗುವ ಆತಂಕ ಉಂಟುಮಾಡಿದೆ.

ಜಿಲ್ಲೆ (ಪಾಸಿಟಿವಿಟಿ ರೇಟ್)

  • ದಕ್ಷಿಣ ಕನ್ನಡ-3.26
  • ಉಡುಪಿ-2.63
  • ಕೊಡಗು-2.00
  • ಚಿಕ್ಕಮಗಳೂರು-1.95
  • ಹಾಸನ-1.71
  • ಶಿವಮೊಗ್ಗ-1.39
  • ಮೈಸೂರು-1.23
  • ಉತ್ತರ ಕನ್ನಡ-1.00

ಇದನ್ನೂ ಓದಿ: ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಳ -ಆಂಧ್ರಪ್ರದೇಶದಲ್ಲಿ ನೈಟ್​ ಕರ್ಫ್ಯೂ ವಿಸ್ತರಣೆ

Source: newsfirstlive.com Source link