IPL​ ಮರು ಆಯೋಜನೆಯಿಂದ ಬಿಸಿಸಿಐಗೆ ಟೆನ್ಶನ್.. ಫ್ರಾಂಚೈಸಿಗಳಿಗೆ ವಾರ್ನಿಂಗ್​​​!

IPL​ ಮರು ಆಯೋಜನೆಯಿಂದ ಬಿಸಿಸಿಐಗೆ ಟೆನ್ಶನ್.. ಫ್ರಾಂಚೈಸಿಗಳಿಗೆ ವಾರ್ನಿಂಗ್​​​!

ಫೇಸ್-2 ಐಪಿಎಲ್​​ ಏನೋ ಹತ್ತಿರ ಬರ್ತಿದೆ. ಮತ್ತೊಂದೆಡೆ ಟಿ20 ವಿಶ್ವಕಪ್​ ಟೂರ್ನಿಗೂ ದಿನಗಣನೆ ಶುರುವಾಗ್ತಿದೆ. ಇತ್ತ ಬಿಸಿಸಿಐಗೂ ಟೆನ್ಶನ್ ಮೇಲೆ ಟೆನ್ಶನ್ ಸ್ಟಾರ್ಟ್​​​ ಆಗಿದೆ. ಅಷ್ಟೇ ಅಲ್ಲ..! ವಿಶ್ವಕಪ್​​ನಿಂದಾಗಿ ಐಪಿಎಲ್​​ ಫ್ರಾಂಚೈಸಿಗಳಿಗೂ, ಬಿಸಿಸಿಐ ವಾರ್ನಿಂಗ್ ಕೊಟ್ಟಿದೆ.

ಮಿಲಿಯನ್ ಡಾಲರ್ ಟೂರ್ನಿಯ ಮರು ಆರಂಭಕ್ಕೆ ದಿನಗಣನೆ ಶುರುವಾಗಿದೆ. ಕಪ್ ಮೇಲೆ ಕಣ್ಣಿಟ್ಟಿರುವ ಫ್ರಾಂಚೈಸಿಗಳು, ಸಕಲ ಸಿದ್ಧತೆಯಲ್ಲಿ ತೊಡಗಿವೆ. ಈಗಾಗಲೇ ಕೆಲ ತಂಡಗಳು ಅರಬ್​​ ನಾಡಲ್ಲಿ ಬೀಡುಬಿಟ್ಟಿವೆ. ಕೊರೊನಾತಂಕದ ನಡುವೆ ಮಹತ್ವದ ಟೂರ್ನಿಯ ಹೊಣೆ ಹೊತ್ತಿರುವ ಬಿಸಿಸಿಐ, ಅತ್ತ ವಿಶ್ವಕಪ್ ಟೂರ್ನಿಯ ಸಿದ್ಧತೆಯಲ್ಲಿ ತೊಡಗಿದೆ. ಆದ್ರೆ ಈ ನಡುವೆ ಬಿಸಿಸಿಐಗೆ, ಐಪಿಎಲ್​ನಲ್ಲಿ ಪಾಲ್ಗೊಳ್ಳುವ ಟೀಮ್ ಇಂಡಿಯಾದ ಸ್ಟಾರ್​ ಆಟಗಾರರ ಬಗ್ಗೆ ಹೊಸ ಆತಂಕವೊಂದು ಶುರುವಾಗಿದೆ.

blank

ಐಪಿಎಲ್ ಫ್ರಾಂಚೈಸಿಗಳಿಗೆ ಬಿಸಿಸಿಐ ವಾರ್ನಿಂಗ್​​​..!
ಸದ್ಯಕ್ಕೆ ಐಪಿಎಲ್​​ ಮರು ಆಯೋಜನೆ ಸಿದ್ಧತೆಯಲ್ಲಿ ತೊಡಗಿರುವ ಬಿಸಿಸಿಐ, ಟಿ20 ವಿಶ್ವಕಪ್​ ಟೂರ್ನಿಯ ಬಗ್ಗೆಯೂ ತಲೆಕೆಡಿಸಿಕೊಂಡಿದೆ. ಅದ್ರಲ್ಲೂ ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಶ್ವಕಪ್​ ತಂಡವನ್ನ ಪ್ರಕಟಿಸಲು ಮುಂದಾಗಿರುವ ಬಿಗ್​ಬಾಸ್​ಗಳು, ಐಪಿಎಲ್​ನಲ್ಲಿ ಭಾಗವಹಿಸಲಿರುವ ಸ್ಟಾರ್​ ಆಟಗಾರರ ಬಗ್ಗೆ ವಿಶೇಷ ನಿಗಾವಹಿಸಲು ಎಚ್ಚರಿಕೆಯ ಸಂದೇಶ ರವಾನಿಸಿದೆ.

ಹೌದು..! ಟೀಮ್ ಇಂಡಿಯಾದ ಸ್ಟಾರ್ ಆಟಗಾರರು, ಐಪಿಎಲ್ ಟೂರ್ನಿಗಳಲ್ಲಿ ಭಾಗಿಯಾಗ್ತಿದ್ದಾರೆ. ಈ ಬೆನ್ನಲ್ಲೇ ಟಿ20 ವಿಶ್ವಕಪ್ ಟೂರ್ನಿಗೆ ಅಣಿಯಾಗಲಿದ್ದಾರೆ. ಅಕಸ್ಮಾತ್​​ ಈ ವೇಳೆ ಟೀಮ್ ಇಂಡಿಯಾ ಸ್ಟಾರ್​​ ಆಟಗಾರರು ಇಂಜುರಿಗೆ ಒಳಪಟ್ಟರೆ, ಟಿ20 ವಿಶ್ವಕಪ್​​ನಲ್ಲಿ ಭಾರತಕ್ಕೆ ಭಾರಿ ಹಿನ್ನಡೆಯೇ ಉಂಟಾಗಲಿದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡಿರುವ ಬಿಸಿಸಿಐ, ಸ್ಟಾರ್ ಆಟಗಾರರು ಇಂಜುರಿಗೆ ಒಳಗಾಗದಂತೆ ಹಾಗೂ ವರ್ಕ್ ಲೋಡ್ ಹೆಚ್ಚು ಮಾಡದಂತೆ ಫ್ರಾಂಚೈಸಿಗಳಿಗೆ ಸೂಚಿಸಿದೆ.

blank

ಬಿಸಿಸಿಐ ಫ್ರಾಂಚೈಸಿಗಳಿಗೆ ವಾರ್ನಿಂಗ್ ನೀಡಲು, ಕಾರಣವೂ ಇದೆ. ಈ ಹಿಂದೆ ಯುಎಇಯಲ್ಲಿ ನಡೆದಿದ್ದ 13ನೇ ಆವೃತ್ತಿಯಲ್ಲಿ ಪ್ರಮುಖ ಆಟಗಾರರೇ ಇಂಜುರಿಗೆ ತುತ್ತಾಗಿದ್ದರು. ಪ್ರಮುಖವಾಗಿ ಆಸ್ಟ್ರೇಲಿಯಾ ಸರಣಿಗೆ ತಂಡ ಪ್ರಕಟಿಸಿದ್ದಾಗ ರೋಹಿತ್ ಶರ್ಮಾ, ಇಂಜುರಿ ವಿಚಾರ ಬಾರೀ ವಿವಾದಕ್ಕೂ ಕಾರಣವಾಗಿತ್ತು. ಇದಲ್ಲದೆ ತಂಡಕ್ಕೆ ಪ್ರಕಟಿಸಲಾಗಿದ್ದ ಇಶಾಂತ್ ಶರ್ಮಾ, ವರುಣ್ ಚಕ್ರವರ್ತಿ ಇನ್ನಿತರೆ ಆಟಗಾರರು ಸಹ, ಗಾಯಗೊಂಡು ಸರಣಿಯಿಂದ ಹಿಂತಿರುಗಬೇಕಾಯ್ತು. ಇದನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವ ಬಿಸಿಸಿಐ, ಈಗ ಸ್ಟಾರ್ ಆಟಗಾರರ ಮೇಲೆ ವಿಶೇಷ ಕಣ್ಣಿಟ್ಟಿದೆ.​

Source: newsfirstlive.com Source link