ಚೀನಾ-ತಾಲಿಬಾನ್-ಪಾಕಿಸ್ತಾನ ದುಷ್ಟಕೂಟ ಒಂದಾದ್ರೆ ಭಾರತದ ಮೇಲೆ ಏನು ಪರಿಣಾಮ ಬೀರುತ್ತೆ?

ಚೀನಾ-ತಾಲಿಬಾನ್-ಪಾಕಿಸ್ತಾನ ದುಷ್ಟಕೂಟ ಒಂದಾದ್ರೆ ಭಾರತದ ಮೇಲೆ ಏನು ಪರಿಣಾಮ ಬೀರುತ್ತೆ?

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಷ್ಟು ಕ್ಷಿಪ್ರವಾಗಿ ಅಧಿಕಾರ ಹಿಡಿದಿದ್ದು ಹೇಗೆ? ಅನ್ನೋ ಪ್ರಶ್ನೆ ಇಂದು ಹಲವರನ್ನ ಕಾಡ್ತಿದೆ. ಜೊತೆಗೆ, ಇದ್ರಿಂದ ಭಾರತಕ್ಕೆ ಏನಾದ್ರೂ ಸಮಸ್ಯೆ ಆಗುತ್ತಾ? ಏಷ್ಯಾದ ಶಾಂತಿ ಭಂಗವಾಗುತ್ತಾ? ಮುಂತಾದ ಆತಂಕವೂ ಎದುರಾಗಿದೆ. ಇದಕ್ಕೆಲ್ಲ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ..

ಅಫ್ಘಾನಿಸ್ತಾನ.. ಇಂದು ಇಡಿ ವಿಶ್ವದ ಗಮನವನ್ನೇ ತನ್ನತ್ತ ಸೆಳೆದಿರೋ ದೇಶ. ಕೇವಲ 3 ರಿಂದ 4 ಕೋಟಿ ಜನಸಂಖ್ಯೆ ಹೊಂದಿರೋ ಈ ಗುಡ್ಡಗಾಡು ದೇಶ. ಸೂಪರ್​ ಪವರ್​​ಗಳನ್ನೇ ಮಣ್ಣು ಮುಕ್ಕಿಸಿದೆ. ಈ ಬಾರಿಯಂತೂ ಉಗ್ರ ಸಂಘಟನೆ ಅಮೆರಿಕದ ಲೆಕ್ಕಾಚಾರ ಉಲ್ಟಾ ಮಾಡಿದ್ರೆ, ಪ್ರಜಾಪ್ರಭುತ್ವ ಸರ್ಕಾರವನ್ನ ಕಿತ್ತೊಗೆದು ಇಸ್ಲಾಮಿಕ್ ಷರಿಯಾ ನಿಯಮ ಹೊಂದಿರೋ ಕ್ಯಾಲಿಫೆಟ್ ಸ್ಥಾಪಿಸಿದೆ. ಆದ್ರೆ ಈ ಬಾರಿ ಅವರ ವೇಗ. ಎಲ್ಲರನ್ನೂ ಚಕಿತಗೊಳಿಸಿದೆ. ಮಾತ್ರವಲ್ಲ ಹಲವರು ಉಗ್ರಸಂಘಟನೆಗಳ ಗುಂಪಾಗಿರೋ ಇದು. ಮುಂದೆ ಏನೆಲ್ಲಾ ಮಾಡಬಹುದೋ? ಅನ್ನೋ ಭಯ ಮಿಶ್ರಿತ ಎಚ್ಚರಿಕೆ ಪ್ರಶ್ನೆಗಳು ತೂರಿ ಬರ್ತಿವೆ..

blank

ಅಫ್ಘಾನಿಸ್ತಾನದಲ್ಲಿ ಇಂದು ಏನಾಗ್ತಿದೆ ಗೊತ್ತಾ?
ತಾಲಿಬಾನ್​ ಸದ್ಯದ ಸ್ಥಿತಿಗತಿ ಕುರಿತು ಮಾಹಿತಿ
ಇಂಡಿಪೆಂಡೆಂಟ್​ ರಿಸರ್ಚರ್​​ ಆದಿತ್ಯ ಜಿಎಸ್ ಮಾಹಿತಿ

ಅಫ್ಘಾನಿಸ್ತಾನದಲ್ಲಿ ಇಂದು ತಾಲಿಬಾನ್​ ಮೂರು ರೀತಿಯ ಯುದ್ಧವನ್ನ ಆರಂಭಿಸಿದೆ. ಶೇ.45ರಷ್ಟಿರುವ ಪಶ್ತೋನ್​ ಜನರ ನ್ಯಾಷನಲಿಸ್ಟ್​ ಆಡಳಿತವನ್ನ ಜಾರಿಗೆ ತರಲು ಮುಂದಾಗಿರೋ ತಾಲಿಬಾನ್, ಆರ್ಥಿಕವಾಗಿ, ಸೈದ್ಧಾಂತಿಕವಾಗಿ ಹಾಗೂ ಮಾನಸಿಕವಾದಂಥ ಯುದ್ಧವನ್ನ ಒಂದು ರೀತಿಯಲ್ಲಿ ಆರಂಭಿಸಿದೆ. ಈ ಮೂರು ಮಾರ್ಗಗಳಲ್ಲಿಯೇ ಬಹುತೇಕ ದೇಶವನ್ನ ಗೆದ್ದುಕೊಂಡಿದೆ.

ಈಗಾಗಲೇ ತಾಲಿಬಾನ್ ಟು ಪಾಯಿಂಟ್ ಓ ಅನ್ನೋ ಮುಖವಾಡ ತೊಟ್ಟಿರುವ ಈ ಉಗ್ರಗಾಮಿ ಸಂಘಟನೆ, ಈ ಬಾರಿ ಸಾಕಷ್ಟು ಸಿದ್ಧತೆಯನ್ನೂ ಮಾಡಿಕೊಂಡಂತೆ ತೋರ್ತಿದೆ. ಜೊತೆಗೆ, ಅತ್ಯಂತ ಬುದ್ಧಿವಂತಿಕೆಯಿಂದಲೂ ಉಗ್ರ ಸಂಘಟನೆಗಳನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಬಹುತೇಕರಿಗೆ ಗೊತ್ತಿಲ್ಲ ತಾಲಿಬಾನ್ ಅನ್ನೋದು ಕೇವಲ ಒಂದು ಸಂಘಟನೆಯಲ್ಲ. ಅದೊಂದು ರೀತಿಯಲ್ಲಿ ಆ ಮನಸ್ಥಿತಿಯನ್ನ ಹೊಂದಿರೋ ಹಲವು ಉಗ್ರ ಸಂಘಟನೆಗಳ, ವಾರ್​​ ಲಾರ್ಡ್ಸ್​​ಗಳ, ಟ್ರೈಬಲ್​ ಲೀಡರ್​​ಗಳನ್ನು ಒಳಗೊಂಡಂಥ ಒಂದು ಒಕ್ಕೂಟ. ಅದ್ರಲ್ಲೂ ಹೆಚ್ಚಾಗಿ ಪಶ್ತೂನ್​ ಭಾಷೆ ಮಾತನಾಡೋ ಪಶ್ತೂನಿಗಳೇ ಮೇಲುಗೈ ಸಾಧಿಸಿರೋ ಉಗ್ರ ಸಂಘಟನೆ.

ಇದೇ ಕಾರಣದಿಂದಾಗಿ, ಈ ತಾಲಿಬಾನ್ ಮುಂದೆ ಒಂದು ಮಾದರಿಯಾಗಿ ಬಿಡುತ್ತಾ? ಈ ಸಂಘಟನೆ ಬಲಗೊಂಡ ಬೆನ್ನಲ್ಲೇ ಅಫ್ಘನ್ ನೆಲ ವಿಭಿನ್ನ ಉಗ್ರ ಸಂಘಟನೆಗಳ ಲ್ಯಾಬೊರೇಟರಿ, ಟ್ರೇನಿಂಗ್​ ಗ್ರೌಂಡ್​.. ಸೇಫ್ ಹೆವನ್​ ಆಗೋದ್ರಲ್ಲಿ ಸಂಶಯವಿಲ್ಲ. ಅದಿಷ್ಟೇ ಅಲ್ಲ, ಈ ಸಂಘಟನೆ ಬಲಗೊಂಡ ಬೆನ್ನಲ್ಲೇ ಸುತ್ತಲಿನ ದೇಶಗಳ ಮೇಲೆ ಎಂಥ ಪರಿಣಾಮ ಬೀರಬಹುದು? ಅನ್ನೋ ಪ್ರಶ್ನೆ ಇಂದು ಎಲ್ಲರನ್ನ ಕಾಡ್ತಿದೆ. ಅದ್ರಲ್ಲೂ ಭಾರತದ ಮೇಲೆ ಎಂಥ ಪರಿಣಾಮ ಆಗಬಹುದು? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.

blank

ಚೀನಾ-ಪಾಕ್-ತಾಲಿಬಾನ್ ಒಂದಾದ್ರೆ ಏನಾಗುತ್ತೆ?
ಬಾಂಗ್ಲಾದೇಶದಿಂದಲೂ ಉಗ್ರರ ಉಪಟಳ ಆಗುತ್ತಾ?

ಇತ್ತೀಚೆಗೆ ತಾನೆ ತಾಲಿಬಾನಿನ ದೊಡ್ಡ ತಂಡವೊಂದು ಚೀನಾಕ್ಕೆ ಭೇಟಿ ನೀಡಿತ್ತು. ಅಲ್ಲಿ ಚೀನಾದ ಉನ್ನತ ಸಚಿವರುಗಳೊಂದಿಗೆ ಸಾಕಷ್ಟು ಚರ್ಚೆಯನ್ನೂ ನಡೆಸಲಾಗಿತ್ತು. ಕೆಲ ಮೂಲಗಳ ಮಾಹಿತಿ ಪ್ರಕಾರ ಚೀನಾ ತಾಲಿಬಾನ್​ಗೆ ಸಾಕಷ್ಟು ಫಂಡಿಂಗ್​ ಮಾಡೋದಲ್ಲದೇ. ಶಸ್ತಾತ್ತ್ರ ಕೂಡ ಪೂರೈಸಲು ಸಮ್ಮತಿಸಿತ್ತು. ಆದ್ರೆ ಇದಕ್ಕಾಗಿ ಎರಡು ಷರತ್ತುಗಳನ್ನು ಹಾಕಿತ್ತ ಎನ್ನಲಾಗಿದೆ. ಅದರಂತೆ ಒಂದು ಕಂಡೀಷನ್​ ಅಂದ್ರೆ ಚೀನಾ ವಿರೋಧಿ ಉಯಿಘರ್​ ಮುಸ್ಲಿಮರನ್ನು ಒಳಗೊಂಡ East Turkestan Islamic Movement ಭಯೋತ್ಪಾದಕ ಸಂಘಟನೆಗೆ ಅಫ್ಘಾನ್​​ನಲ್ಲಿ ಜಾಗ ನೀಡಬಾರದು ಹಾಗೂ ಇನ್ನೊಂದು ಕಂಡೀಷನ್ ಅಂದ್ರೆ ಚೀನಾದಿಂದ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವ ಚೀನಾ-ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್​​ ಹಾಗೂ bridge and road initiativeಗೆ ಧಕ್ಕೆಯನ್ನ ಉಂಟು ಮಾಡಬಾರದು ಅನ್ನೋದು.. ಇದೇ ಕಾರಣದಿಂದಾಗಿ ತಾಲಿಬಾನ್, ಪಾಕಿಸ್ತಾನ್ ಹಾಗೂ ಚೀನಾ ಒಂದಾಗುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿ ಬರ್ತಿವೆ..

ಜೊತೆಗೆ, ಈ ಹಿಂದೆ ಭಾರತದ ಮೇಲೆ ಬಾಂಗ್ಲಾದೇಶದ ಮೂಲಭೂತವಾಗಿ ಉಗ್ರ ಸಂಘಟನೆಗಳಿಂದ ಹಲವು ಆಕ್ರಮಣಗಳು ನಡೆದ ಉದಾಹರಣೆಗಳು ಇವೆ. ಅದರಂತೆ ಈ ತಾಲಿಬಾನಿ ಉಗ್ರರು ಅಧಿಕಾರ ಹಿಡಿದ ಬೆನ್ನಲ್ಲೇ ಇಂಥ ಉಗ್ರ ಸಂಘಟನೆಗಳಿಗೂ ಸ್ಫೂರ್ತಿ ದೊರಕುವ ಸಾಧ್ಯತೆ ಇದ್ದೇ ಇದೆ!

blank
ಆದಿತ್ಯ ಜಿಎಸ್, ಇಂಡಿಪೆಂಡೆಂಟ್​​ ರಿಸರ್ಚರ್

ಕಾಶ್ಮೀರದಲ್ಲಿ ಮತ್ತೆ ಶುರುವಾಗುತ್ತಾ ಉಗ್ರರ ಉಪಟಳ?
ಮುಂದು ವರದೇ ಇದೆ ಪಾಕಿಸ್ತಾನದ ಹುನ್ನಾರ

ಅದು ತೊಂಬತ್ತರ ದಶಕದ ಆರಂಭ.. ಆಗ ಪಾಕಿಸ್ತಾನದ ಐಎಸ್​​ಐ ಹಾಗೂ ಅಮೆರಿಕದ ಸಿಐಎ ಬೆಂಬಲಿತ ಮುಜಾಹಿದೀನ್​​ಗಳು ಸೋವಿಯತ್​​ ಯೂನಿಯನ್​ ಅಂದ್ರೆ ಅಂದಿನ ರಷ್ಯಾ ಒಕ್ಕೂಟವನ್ನ ಅಫ್ಘಾನಿಸ್ತಾನದಲ್ಲಿ ಸೋಲಿಸಿದ ಬೆನ್ನಲ್ಲೇ, ಅದರ ದುಷ್ಪರಿಣಾಮ ಕಾಶ್ಮೀರದ ಮೇಲೆ ದೊಡ್ಡ ಪ್ರಮಾಣದಲ್ಲಿ ಆಗಿತ್ತು..

ಮುಜಾಹೀದ್​ಗಳ ಆತ್ಮವಿಶ್ವಾಸ, ಕಾಶ್ಮೀರದಲ್ಲಿ ಸಾಕಷ್ಟು ರಕ್ತ ಹರಿಯಲು ಕಾರಣವಾಯ್ತು. ಅದ್ರಲ್ಲೂ ಪಾಕಿಸ್ತಾನ ಪ್ರಾಕ್ಸಿ ವಾರ್​ಗಾಗಿ ಇದೇ ಮುಜಾಹೀದ್​ಗಳನ್ನ ಕಾಶ್ಮೀರದಲ್ಲಿ ಪಾಕಿಸ್ತಾನ ಬಳಸಲು ಆರಂಭಿಸಿತ್ತು. ಇದರ ಪರಿಣಾಮವಾಗಿ ಲಕ್ಷಾಂತರ ಕಾಶ್ಮೀರಿ ಪಂಡಿತರ ಹತ್ಯೆ, ಕಾಶ್ಮೀರಿ ಪಂಡಿತ ಮಹಿಳೆಯರ ಮೇಲೆ ಅತ್ಯಾಚಾರ.. ನಡೆಯಲು ಶುರುವಾಗಿತ್ತು.. ಕೊನೆಗಂತೂ ಕಾಶ್ಮೀರಿ ಪಂಡಿತರನ್ನ ಕಾಶ್ಮೀರದಿಂದಲೇ ಓಡಿಸಲಾಗಿತ್ತು.. ಇಂದಿಗೂ ಆ ಕಾರಳ ನೆನಪು ಬಾರತೀಯರಲ್ಲಿ ಇದ್ದೇ ಇದೆ.. ಇದೇ ಕಾರಣದಿಂದಾಗಿ ತಾಲಿಬಾನಿಗಳ ಬೆಳವಣಿಗೆಯನ್ನ ಭಾರತ ಸಂಶಯದ ದೃಷ್ಟಿಯಿಂದ ನೋಡ್ತಿದೆ.. ಹೀಗಾಗಿ, ಸಹಜವಾಗಿ ಇದರಿಂದ ಏನಾಗುತ್ತೆ ಅನ್ನೋ ಆತಂಕ ಇದ್ದೇ ಇದೆ..!

ಒಟ್ಟಿನಲ್ಲಿ ಮುಂಬರೋ ದಿನಗಳಲ್ಲಿ ಕೇವಲ ಭಾರತ ಮಾತ್ರವಲ್ಲ, ಇಡೀ ಏಷ್ಯಾಕ್ಕೇ ತಾಲಿಬಾನ್​​​ ಆಡಳಿತ ಚಾಲೆಂಜ್​ ಆಗೋದ್ರಲ್ಲಿ ಸಂಶಯವಿಲ್ಲ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಹಿಡಿದಿರೋದು ನಿಜಕ್ಕೂ ಅಪೇಕ್ಷಣೀಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಯಾಕಂದ್ರೆ ಒಂದು ಉಗ್ರ ಸಂಘಟನೆ ಅಧಿಕಾರ ಹಿಡಿದಾಗ.. ಸಹಜವಾಗಿ ಉಳಿದ ಉಗ್ರ ಸಂಘಟನೆಗಳೂ ಅದೇ ರೀತಿ ಮಾಡಬೇಕು ಅಂತ ಬಯಸಲು ಆರಂಭಿಸುತ್ತವೆ.. ಅದು ಶಾಂತಿಗೆ ಎಂದಿಗೂ ಚಾಲೆಂಜೇ ಸರಿ..

ವಿಶೇಷ ಮಾಹಿತಿ: ಆದಿತ್ಯ ಜಿಎಸ್, ಇಂಡಿಪೆಂಡೆಂಟ್​​ ರಿಸರ್ಚರ್

blank

Source: newsfirstlive.com Source link