ಸಿಕ್ಕ ಅವಕಾಶದಲ್ಲಿ ಮಿಂಚಿದ ಕನ್ನಡಿಗ ರಾಹುಲ್​ -ಮಯಾಂಕ್ ಪಾಲಿಗೆ ಮತ್ತೆ​ ಮುಚ್ಚಿತಾ ಬಾಗಿಲು?

ಸಿಕ್ಕ ಅವಕಾಶದಲ್ಲಿ ಮಿಂಚಿದ ಕನ್ನಡಿಗ ರಾಹುಲ್​ -ಮಯಾಂಕ್ ಪಾಲಿಗೆ ಮತ್ತೆ​ ಮುಚ್ಚಿತಾ ಬಾಗಿಲು?

ಕಳೆದ 2 ವರ್ಷಗಳಿಂದ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಕೆಎಲ್​ ರಾಹುಲ್,​ ಇದೀಗ ಅದೃಷ್ಠದ ಅವಕಾಶದಲ್ಲಿ ಭರ್ಜರಿ ಕಮ್​ಬ್ಯಾಕ್​ ಮಾಡಿದ್ದಾರೆ. ಇಂಗ್ಲೆಂಡ್​ ಸರಣಿಯ ಆರಂಭಕ್ಕೂ ಮುನ್ನ ಬ್ಯಾಕ್ ಆಪ್ ಓಪನರ್ ಆಗಿ ಗುರುತಿಸಿಕೊಂಡ ರಾಹುಲ್​, ಇದೀಗ ತಮ್ಮ ಸ್ಥಾನವ್ನನ ಭದ್ರ ಪಡಿಸಿಕೊಂಡಿದ್ದಾರೆ. ಜೊತೆಗೆ ಮೂವರು ಕ್ರಿಕೆಟಿಗರ ಪಾಲಿಗೆ ವಿಲನ್​ ಕೂಡ ಆಗಿದ್ದಾರೆ.

ಬರೋಬ್ಬರಿ ಎರಡು ವರ್ಷಗಳ ಬಳಿಕ ವೈಟ್​ಬಾಲ್ ಕ್ರಿಕೆಟ್​​ಗೆ ಮರಳಿದ ರಾಹುಲ್, ಟೆಸ್ಟ್​ ಕ್ರಿಕೆಟ್​ನಲ್ಲೂ ನಾನು ಬೆಸ್ಟ್ ಅನ್ನೋದನ್ನ ನಿರೂಪಿಸಿದ್ದಾರೆ. ಇಂಗ್ಲೀಷ್ ಕಂಡೀಷನ್ಸ್​ನಲ್ಲಿ ಸಮರ್ಥವಾಗಿ ಬ್ಯಾಟ್​ ಮಾಡೋಕೆ, ಇತರರಿಗಿಂತ ತಾನೆಷ್ಟು ಸೂಕ್ತ ಅನ್ನೋದಕ್ಕೆ, ರಾಹುಲ್ ತನ್ನ ಬ್ಯಾಟ್​ ಮೂಲಕವೇ ಉತ್ತರಿಸಿದ್ದಾರೆ. ಎರಡೂ ಕೈಗಳಿಂದ ಸಿಕ್ಕ ಅವಕಾಶವನ್ನ ಕೆ.ಎಲ್, ಬಾಚಿಕೊಂಡಿದ್ದಾರೆ.

blank

ಇಂಗ್ಲೆಂಡ್​​ ಸರಣಿಯಲ್ಲಿ ರಾಹುಲ್​
ಇನ್ನಿಂಗ್ಸ್​          -04
ರನ್​               -244
100/50          -1/1
ಸರಾಸರಿ          -61.00

ಇಂಗ್ಲೆಂಡ್​ ಸರಣಿಯಲ್ಲಿ ಆಡಿದ 4 ಇನ್ನಿಂಗ್ಸ್​ಗಳಲ್ಲಿ ರಾಹುಲ್​, 61.00ರ ಸರಾಸರಿಯಲ್ಲಿ 244 ರನ್​ ಕಲೆ ಹಾಕಿದ್ದಾರೆ. ಇದರಲ್ಲಿ ತಲಾ ಒಂದು ಶತಕ ಹಾಗೂ ಅರ್ಧಶತಕಗಳೂ ಸೇರಿವೆ.

ಕಮ್​ಬ್ಯಾಕ್​ ಮಾಡಿದ ಸರಣಿಯಲ್ಲೇ ಹೀಗೆ ಭರ್ಜರಿ ಪ್ರದರ್ಶನ ನೀಡಿರುವ ರಾಹುಲ್, ತಮ್ಮ ಸ್ಥಾನವನ್ನೇನೋ ಸೀಲ್​ ಮಾಡಿದ್ದಾರೆ. ಅದರ ಜೊತೆ ಆರಂಭಿಕ ಸ್ಥಾನಕ್ಕೆ ಪೈಪೋಟಿ ನಡೆಸ್ತಿದ್ದ ಮಯಾಂಕ್ ಅಗರ್ವಾಲ್, ಶುಭಮನ್​ ಗಿಲ್, ಪೃಥ್ವಿ ಶಾ ಸ್ಥಾನಕ್ಕೂ, ಕುತ್ತು ತಂದಿದ್ದಾರೆ.

blank

ಮಯಾಂಕ್​ ಪಾಲಿಗೆ ಮುಚ್ಚಿತಾ ಬಾಗಿಲು.?
ಸರಣಿ ಆರಂಭಕ್ಕೂ ಮುನ್ನ ಶುಭ್​ಮನ್ ಗಿಲ್​ ಇಂಜುರಿಗೆ ತುತ್ತಾದ ಪರಿಣಾಮ, ಮಯಾಂಕ್​ ಅಗರ್​ವಾಲ್​ಗೆ ಸ್ಥಾನ ಸಿಗುತ್ತೆ ಎನ್ನಲಾಗಿತ್ತು. ಸಿಗೋ ಅವಕಾಶವನ್ನ ಎನ್​ಕ್ಯಾಶ್ ಮಾಡಿಕೊಂಡು ಸ್ಥಾನವನ್ನ ಖಾಯಂ ಮಾಡಿಕೊಳ್ಳೋ ಲೆಕ್ಕಚಾರ, ಮಯಾಂಕ್​ ತಲೆಯಲ್ಲೂ ಇತ್ತು. ಆದ್ರೆ ನೆಟ್​​ ಸೆಷನ್​ ವೇಳೆ ಆದ ಗಾಯ ಬೆಂಚ್​ ಕಾಯೋ ಹಾಗೇ ಮಾಡಿತು. ಜೊತೆಗೆ ಭವಿಷ್ಯದ ಬಗ್ಗೆಯೂ ಪ್ರಶ್ನೆ ಹುಟ್ಟುಹಾಕಿದೆ.

blank

ಶುಭ್​ಮನ್​​​​, ಪೃಥ್ವಿ ಶಾಗೂ ರಾಹುಲ್ ಅಡ್ಡಗಾಲು!
ಮಯಾಂಕ್ ಅಗರ್ವಾಲ್ ಅಸ್ಥಿರ ಪ್ರದರ್ಶನದಿಂದ ತಂಡದಲ್ಲಿ ಸ್ಥಾನ ಪಡೆದ ಶುಭ್​​ಮನ್, ಆಸಿಸ್ ಪ್ರವಾಸಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಆದ್ರೀಗ ಇಂಜುರಿ ಕಾರಣ ಸರಣಿಯಿಂದ ಔಟ್​ ಆಗಿರುವ ಶುಭ್​​ಮನ್, ಮುಂದಿನ ಸರಣಿಗೆ ತಂಡಕ್ಕೆ ಕಮ್​​ಬ್ಯಾಕ್ ಮಾಡಿದರೂ, ಬೆಂಚ್​ ಕಾಯಬೇಕಾಗಿದೆ. ಮುಂಬೈಕರ್ ಪೃಥ್ವಿ ಶಾಗೂ ಕೆ.ಎಲ್.ರಾಹುಲ್, ಕಂಟಕರಾಗಿದ್ದಾರೆ. ಸದ್ಯ ಸರಣಿಯಲ್ಲಿ ಬ್ಯಾಕ್ ಅಪ್ ಓಪನರ್ ಆಗಮಿಸಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಅವಕಾಶದ ಬಾಗಿಲು ತೆರೆಯೋದು ಬಹುತೇಕ ಅನುಮಾನವಾಗಿದೆ.

Source: newsfirstlive.com Source link