ವಿಕೇಂಡ್ ಕರ್ಫ್ಯೂ – ಕೊಡಗಿನಲ್ಲಿ ಉತ್ತಮ ಸ್ಪಂದನೆ, ಬೀದರ್ ನಲ್ಲಿ ಡೋಂಟ್ ಕೇರ್

ಬೀದರ್/ಕೊಡಗು: ವೀಕೆಂಡ್ ಕರ್ಫ್ಯೂಗೆ ಕೊಡಗಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಆದ್ರೆ ಬೀದರ್ ನಗರದಲ್ಲಿ ಎಂದಿನಂತೆ ಜನಸಂಚಾರವಿದೆ.

ಬಿದರ್ ನಲ್ಲಿ ವಿಕೇಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ ವಾಹನ ಸವಾರರು ಮಾತ್ರ ಡೊಂಟ್ ಕೇರ್ ಮಾಸ್ಟರ್ ರೀತಿ ವರ್ತನೆ ಮಾಡುತ್ತಿದ್ದಾರೆ. ಅನಾವಶ್ಯಕವಾಗಿ ಹೊರ ಬಂದಿರುವ ಜನರು ಕೋವಿಡ್ ನಿಯಮಗಳ ಉಲ್ಲಂಘನೆ ಮಾಡುತ್ತಿದ್ದಾರೆ. ಮಾಸ್ಕ್ ಹಾಕದೇ ಗುಂಪು ಗುಂಪಾಗಿ ನಿಂತು ಮಾತನಾಡುತ್ತಿರುವ ದೃಶ್ಯಗಳು ಬೀದರ್ ನಲ್ಲಿ ಕಂಡು ಬರುತ್ತಿವೆ.

ಕೊಡಗಿನಲ್ಲಿ ಉತ್ತಮ ಸ್ಪಂದನೆ: ಪಕ್ಕದ ದೇವರನಾಡು ಕೇರಳದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿಯೂ ದಿನೇ ದಿನೇ ಕೊರೊನಾ ಮೂರನೇ ಅಲೆಯ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ಕೊರೊನಾ ಮಹಾಮಾರಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಕೊಡಗು ಸೇರಿದಂತೆ ರಾಜ್ಯ ಎಂಟು ಜಿಲ್ಲೆಗಳಲ್ಲಿ ವಿಕೇಂಡ್ ಕರ್ಫ್ಯೂ ಜಾರಿ ಮಾಡಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ವಾರಾಂತ್ಯದ ಕಫ್ರ್ಯೂಗೆ ಉತ್ತಮ ರೀತಿಯಲ್ಲಿ ಈ ವಾರವು ಸ್ಪಂದನೆ ದೊರೆತಿದೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಬೀಕೋ ಎನ್ನುತ್ತಿದೆ. ಅಗತ್ಯ ವಸ್ತುಗಳ ಖರೀದಿಸಲು ಬೆರಳೆಣಿಕೆಯಷ್ಟು ಮಾತ್ರ ಜನ ಕಂಡು ಬರುತ್ತಿದ್ದಾರೆ. ಅದರೆ ವಾರಾಂತ್ಯ ಕರ್ಫ್ಯೂ ಮಾಡಿರುವುದು ಅವ್ಯಜ್ಞಾನಿಕವಾಗಿದೆ ಎಂದು ಪ್ರವಾಸೋದ್ಯಮ ಅವಲಂಬಿಸಿಕೊಂಡು ಬದುಕು ನಡೆಸುತ್ತಿರುವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಕೇರಳದಿಂದ ಅಸ್ಸಾಂ ಕೂಲಿ ಕಾರ್ಮಿಕರು ಜಿಲ್ಲೆಗೆ ಅಗಮಿಸುತ್ತಿದ್ದಾರೆ. ಯಾವುದೇ ಕೋವಿಡ್ ನಿಯಮಗಳನ್ನು ಪಾಲಿಸದೇ ಮಾಸ್ಕ್ ಧರಿಸದೇ ಎಂದಿನಂತೆ ಇರುವ ದೃಶ್ಯಗಳು ಮಡಿಕೇರಿ ನಗರದ ಬಸ್ ನಿಲ್ದಾಣದಲ್ಲಿ ಕಂಡು ಬರುತ್ತಿದೆ. ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಅಸಮಾಧಾನ – ಖಾಲಿ ಸಿಲಿಂಡರ್ ಪ್ರದರ್ಶನ

blank

ರಾತ್ರಿ ಯಾವುದೇ ಕೊರೊನಾ ಪರೀಕ್ಷೆ ವರದಿ ಇಲ್ಲದೇ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಕುಟ್ಟ ಚೆಕ್ ಪೋಸ್ಟ್ ಮೂಲಕ ಅಸ್ಸಾಂದ ಕಾರ್ಮಿಕರು ಕೊಡಗಿಗೆ ಬಂದಿದ್ದಾರೆ. ಇದೀಗ ಮಡಿಕೇರಿ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿರುವ ಕಾರ್ಮಿಕರು ಗೋಣಿಕೊಪ್ಪಕ್ಕೆ ಹೋಗಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ: ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

Source: publictv.in Source link