ಹಳೇ ಹೈದ್ರಾಬಾದ್​​ ಗಲ್ಲಿಯಲ್ಲಿ ವೇಗಿ ಮೊಹಮ್ಮದ್ ಸಿರಾಜ್​ ಕಟೌಟ್..!

ಹಳೇ ಹೈದ್ರಾಬಾದ್​​ ಗಲ್ಲಿಯಲ್ಲಿ ವೇಗಿ ಮೊಹಮ್ಮದ್ ಸಿರಾಜ್​ ಕಟೌಟ್..!

ಐತಿಹಾಸಿಕ ಲಾರ್ಡ್ಸ್​ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್​​ರ ತವರಿನಲ್ಲಿ ಸಂಭ್ರಮ ಜೋರಾಗಿದೆ. ಸಿರಾಜ್​ರ ಕಟೌಟ್​ ನಿರ್ಮಿಸಿ ಅಭಿಮಾನಿಗಳು ಹೈದ್ರಾಬಾದ್​ನಲ್ಲಿ ಸಂಭ್ರಮಿಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 94 ರನ್​ಗೆ 4 ವಿಕೆಟ್ ಹಾಗೂ 2ನೇ ಇನ್ನಿಂಗ್ಸ್ 32 ರನ್​ಗೆ 4 ವಿಕೆಟ್ ಕಬಳಿಸಿ, ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಸರಣಿಯಲ್ಲಿ ಒಟ್ಟು 8 ವಿಕೆಟ್ ಕಬಳಿಸಿದ ಸಿರಾಜ್, ಮಾಜಿ ನಾಯಕ ಕಪಿಲ್​​ ದೇವ್​ರ 39 ವರ್ಷಗಳ ಹಳೆಯ ದಾಖಲೆಯನ್ನ ಬ್ರೇಕ್​ ಮಾಡಿದರು.

ಲಾರ್ಡ್ಸ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೈದ್ರಾಬಾದ್​ನ ಲೋಕಲ್ ಬಾಯ್ ಮೊಹಮ್ಮದ್ ಸಿರಾಜ್​ಗೆ ನೆರೆಹೊರೆಯವರು, ಆಪ್ತ ಸ್ನೇಹಿತರು ಬೃಹತ್ ಕಟೌಟ್‌ಗಳನ್ನ ನಿರ್ಮಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಟೌಟ್​ನ ವಿಶೇಷ ಏನೆಂದರೆ, ಸಿರಾಜ್ ವಿಕೆಟ್ ಪಡೆದಾಗ ತುಟಿಗಳ ಮೇಲೆ ಬೆರಳಿಟ್ಟು ಸಂಭ್ರಮಿಸುತ್ತಾರೆ. ಆ ಮೂಲಕ ತಮ್ಮನ್ನ ಅಗುರವಾಗಿ ಪರಿಗಣಿಸಿದ್ದವರಿಗೆ ಸಂದೇಶ ರವಾನಿಸುತ್ತಾರೆ. ಅದೇ ಐಕಾನಿಕ್ ಸೆಲೆಬ್ರೇಷನ್ ಪೋಸ್ಟರ್​​ ಕಟೌಟ್ ಆಗಿ ಬೀದಿಗಳಲ್ಲಿ ಕಟ್ಟಿದ್ದಾರೆ.

Source: newsfirstlive.com Source link