ರಾಧಿಕಾ ಪಂಡಿತ್​ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೇಗಿತ್ತು..?​

ರಾಧಿಕಾ ಪಂಡಿತ್​ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೇಗಿತ್ತು..?​

ಇತ್ತೀಚೆಗಷ್ಟೇ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ್ದ ಸ್ಯಾಂಡಲ್​ವುಡ್​ನ ಕ್ಯೂಟ್​ ಜೋಡಿ ರಾಕಿಂಗ್​ ಸ್ಟಾರ್​ ಯಶ್​, ರಾಧಿಕಾ ಪಂಡಿತ್ ತಮ್ಮ ಹೊಸ ಮನೆಯಲ್ಲಿ ಮಕ್ಕಳೊಂದಿಗೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದಾರೆ.

blank

ಹಬ್ಬದ ಸಂಭ್ರಮದ ಕುರಿತು ನಟಿ ರಾಧಿಕಾ ಪಂಡಿತ್ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡು “ಹಬ್ಬ ಎಂದರೆ ಎಲ್ಲರೂ ಒಟ್ಟಾಗಿ ಪ್ರಾರ್ಥಿಸುವುದು, ಖುಷಿ, ಸಾಕಷ್ಟು ಬಗೆ ಬಗೆಯ ಸಿಹಿತಿಂಡಿಗಳು, ಉಡುಗೆ ಧರಿಸೋದು ಎಂದರ್ಥ. ಎಲ್ಲದಕ್ಕಿಂತ ಮುಖ್ಯವಾಗಿ ಸುಂದರ ಸಮಯ ಕಳೆಯುವುದು. ನೀವು ಕೂಡ ಅದನ್ನೆಲ್ಲ ಮಾಡಿದ್ದೀರಿ ಎಂದು ಭಾವಿಸುತ್ತೇನೆ. ನಮ್ಮ ಮನೆಯ ಹಬ್ಬದ ಸಂಭ್ರಮ ಹೀಗಿತ್ತು” ಅಂತಾ ಬರೆದುಕೊಂಡಿದ್ದಾರೆ.

blank

ಇನ್ನು ಮೊನ್​ಮೊನ್ನೆಯಷ್ಟೆ ಈ ಮುದ್ದಾದ ಜೋಡಿ ತಮ್ಮ ಐದು ವರ್ಷದ ಎಂಗೆಜ್​ಮೆಂಟ್ ಆ್ಯನಿವರ್ಸರಿಯನ್ನು ಕೂಡ ಬಹಳ ಸಂಭ್ರಮದಿಂದ ಆಚರಿಸಿಕೊಂಡಿದ್ರು.

blank

Source: newsfirstlive.com Source link