ರೈಲ್ವೆ ಹಳಿ ಮೇಲೆ ಜ್ಞಾನತಪ್ಪಿ ಬಿದ್ದಿದ್ದ ವ್ಯಕ್ತಿ – ನಿಮಿಷದಲ್ಲಿ ಸಾವಿನ ಅಂಚಿನಿಂದ ಪಾರು

ನ್ಯೂಯಾರ್ಕ್: ಸುರಂಗ ಮಾರ್ಗದಲ್ಲಿರುವ ರೈಲ್ವೆ ಹಳಿ ಮೇಲೆ ಜ್ಞಾನ ಕಳೆದುಕೊಂಡಿದ್ದ ಬಿದ್ದಿದ್ದ ವ್ಯಕ್ತಿಯನ್ನು ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಅಧಿಕಾರಿ ರಕ್ಷಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ರೈಲ್ವೆ ಹಳಿಯ ಮೇಲೆ ಬಿದ್ದಿರೋದನ್ನ ಕಾಣಬಹುದಾಗಿದ್ದು, ಇದನ್ನು ಗಮನಿಸಿದ ತಕ್ಷಣ ಅಧಿಕಾರಿಯೊಬ್ಬರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ರೈಲ್ವೆ ಹಳಿಗೆ ಇಳಿದು ವ್ಯಕ್ತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಆದರೆ ಎಷ್ಟೇ ಮೇಲಕ್ಕೆ ಎತ್ತಲು ಪ್ರಯತ್ನಿಸಿದರೂ ಸಾಧ್ಯವಾಗದೇ ಇದ್ದಾಗ ಅಲ್ಲಿಯೇ ಇದ್ದ ಪ್ರಯಾಣಿಕರೊಬ್ಬರು ಕೂಡ ಅಧಿಕಾರಿಯೊಂದಿಗೆ ಪ್ರಜ್ಞೆ ಕಳೆದುಕೊಂಡಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಲು ಸಹಾಯ ಮಾಡಿದ್ದಾರೆ. ನಂತರ ರೈಲು ಬರುತ್ತಿದ್ದಂತೆಯೇ ಇಬ್ಬರು ಫ್ಲಾಟ್ ಫಾರ್ಮ್‍ನಿಂದ ಬೇಗ ಮೇಲೆ ಹತ್ತಿದ್ದಾರೆ. ಸದ್ಯ ಸಂತ್ರಸ್ತನನ್ನು ಜೆಸ್ಸಿ ಬ್ರಾಂಚ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ:ಕಾಬೂಲ್‍ನಲ್ಲಿ ಸುರಕ್ಷಿತವಾಗಿದ್ದೇನೆ: ಮಂಗಳೂರು ಮೂಲದ ಸಿಸ್ಟರ್ ಥೆರೆಸಾ ಕ್ರಾಸ್ತಾ ಸಂದೇಶ

ಈ ಕುರಿತಂತೆ ಅಧಿಕಾರಿ ಲುಡಿನ್ ಲೋಪೆಜ್, ನನ್ನ ಸಹಾಯದ ಅವಶ್ಯಕತೆ ಇರುವವರು ಯಾರೇ ಆದರೂ ನಾನು ಅವರಿಗೆ ಪ್ರತಿಕ್ರಿಯಿಸುತ್ತೇನೆ. ಯಾವುದನ್ನು ಯೋಚಿಸುವುದಿಲ್ಲ. ಎಂದು ಹೇಳಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 2,35,000ಕ್ಕಿಂತಲೂ ಹೆಚ್ಚು ವ್ಯೂವ್ ಆಗಹಿದೆ. ಅಧಿಕಾರಿ ಮತ್ತು ಪ್ರಯಾಣಿಕನ ಧೈರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.ಇದನ್ನೂ ಓದಿ:ಮೂವರು ಉಗ್ರರನ್ನು ಸದೆಬಡಿದ ಸೈನಿಕರು

Source: publictv.in Source link