ನಾಯಕತ್ವದ ಗೊಂದಲಕ್ಕೆ ಪರಿಹಾರ ಕಂಡುಕೊಂಡ ಡೆಲ್ಲಿ ಕ್ಯಾಪಿಟಲ್ಸ್​

ನಾಯಕತ್ವದ ಗೊಂದಲಕ್ಕೆ ಪರಿಹಾರ ಕಂಡುಕೊಂಡ ಡೆಲ್ಲಿ ಕ್ಯಾಪಿಟಲ್ಸ್​

ಒಂದೆಡೆ ಫಿಟ್​ ಆಗಿರೋ ಶ್ರೇಯಸ್,​​ ಯುಇಎನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಇನ್ನೊಂದೆಡೆ ರಿಷಭ್​ ಪಂತ್​ ನಾಯಕನಾಗಿ ಮೊದಲಾರ್ಧದಲ್ಲಿ ಸಕ್ಸಸ್​ ಕಂಡಿದ್ದಾರೆ. ಈ ಎರಡು ಅಂಶಗಳೇ ಡೆಲ್ಲಿ ಕ್ಯಾಪಿಟಲ್ಸ್​​​ ಮ್ಯಾನೇಜ್​ಮೆಂಟ್​​ ಗೊಂದಲಕ್ಕೆ ಸಿಲುಕಿಸಿದ್ವು. ಈ ಗೊಂದಲಕ್ಕೆ ಕೊನೆಗೂ ಡೆಲ್ಲಿ ಪಡೆ ಪರಿಹಾರ ಕಂಡುಕೊಂಡಿದೆ. ಏನದು ಪರಿಹಾರ.? ಇಲ್ಲಿದೆ ಡಿಟೇಲ್ಸ್​..!!

ಭುಜದ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಶ್ರೇಯಸ್​ ಅಯ್ಯರ್ ಫಿಟ್ ಆಗಿದ್ದಾರೆ. 4 ತಿಂಗಳಿಂದ ಕ್ರಿಕೆಟ್​ಗೆ ದೂರವಾಗಿದ್ದ ಶ್ರೇಯಸ್,​ ಐಪಿಎಲ್​ ಮೂಲಕ ಕಮ್​ಬ್ಯಾಕ್​ ಎದುರು ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅರಬ್ಬರ ನಾಡಿಗೆ ಹಾರಿರುವ ಶ್ರೇಯಸ್​ ಅಯ್ಯರ್​ ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ. ಶ್ರೇಯಸ್​​ ಫಿಟ್​​ ಆಗಿದ್ದು, ಡೆಲ್ಲಿ ಕ್ಯಾಪಿಟಲ್ಸ್​​ ಪಾಳಯಕ್ಕೆ ಗುಡ್​ನ್ಯೂಸ್​ ಆದ್ರೆ, ಮ್ಯಾನೇಜ್​ಮೆಂಟ್ ಪಾಲಿಗೆ ಅದೆ ದೊಡ್ಡ ತಲೆನೋವಾಗಿದೆ.

blank

14ನೇ ಆವೃತ್ತಿಯ ಮೊದಲಾರ್ಧಕ್ಕೆ ಶ್ರೇಯಸ್​​ ಅಲಭ್ಯರಾಗಿದ್ದ ಹಿನ್ನೆಲೆ ಪಂತ್​ಗೆ ನಾಯಕನ ಪಟ್ಟ ಕಟ್ಟಲಾಗಿತ್ತು. ಆ ನಾಯಕತ್ವದ ಅಗ್ನಿಪರೀಕ್ಷೆಯನ್ನ ಪಂತ್​ ಗೆದ್ದಿದ್ದಾರೆ. ಹೀಗಾಗಿ ಇದೀಗ ಮತ್ತೆ ನಾಯಕನಾಗಿ ಪಂತ್​ ಕಣಕ್ಕಿಳಿಯತಾರಾ? ಅಥವಾ ಜವಾಬ್ಧಾರಿ ಶ್ರೇಯಸ್​​ ಹೆಗಲೇರುತ್ತಾ ಎಂಬ ಪ್ರಶ್ನೆ ಅಯ್ಯರ್​​ ಕಮ್​ಬ್ಯಾಕ್​ ಬೆನ್ನಲ್ಲೇ ಡೆಲ್ಲಿ ಕ್ಯಾಂಪ್​ನಲ್ಲಿ ಎದ್ದಿತ್ತು. ಕೊನೆಗೂ ಆ ಪ್ರಶ್ನೆಗೆ ಮ್ಯಾನೇಜ್​ ಮೆಂಟ್​ ಉತ್ತರ ಕಂಡುಕೊಂಡಿದೆ.

ನಾಯಕನಾಗಿ ಶ್ರೇಯಸ್​​ ಅಯ್ಯರ್​​ಗೆ ಮಣೆ.?
ಯೆಸ್, ಶ್ರೇಯಸ್​ ಅಯ್ಯರ್​​ ಫಿಟ್​​ ಅನ್ನೋ ಸುದ್ದಿ ಎನ್​ಸಿಎನಿಂದ ಹೊರ ಬಿದ್ದ ದಿನದಿಂದ ಈ ಬಗ್ಗೆ ಗೊಂದಲದಲ್ಲಿದ್ದ ಡೆಲ್ಲಿ ಫ್ರಾಂಚೈಸಿ ಕೊನೆಗೂ ಅಂತಿಮ ನಿರ್ಧಾರ ಕೈಗೊಂಡಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ಟೀಮ್​ ಮ್ಯಾನೇಜ್​ಮೆಂಟ್​​ ಶ್ರೇಯಸ್​ ಅಯ್ಯರ್​ರನ್ನೇ ನಾಯಕರಾಗಿ ಮುಂದುವರೆಸಲು ನಿರ್ಧರಿಸಿದೆ. ಜೊತೆಗೆ ರಿಷಭ್​ ಪಂತ್​ಗೆ ಉಪನಾಯಕನ ಹೊಣೆ ನೀಡೋ ಬಗ್ಗೆಯೂ ಚಿಂತನೆ ನಡೆದಿದೆ ಅನ್ನೋದು ಮೂಲದ ಮಾಹಿತಿಯಾಗಿದೆ.

ಸಾಧನೆಯ ಲೆಕ್ಕಾಚಾರದಲ್ಲಿ ನಾಯಕರಾಗಿ ಈ ಇಬ್ಬರು ಸಮಭಲವನ್ನೇ ಸಾಧಿಸಿದ್ದಾರೆ. 13ನೇ ಆವೃತ್ತಿಯಲ್ಲಿ ತಂಡವನ್ನ ಮುನ್ನಡೆಸಿದ್ದ ಶ್ರೇಯಸ್​, ಇತಿಹಾಸದಲ್ಲೇ ಮೊದಲ ಬಾರಿಗೆ ತಂಡವನ್ನ ಫೈನಲ್​ಗೇರಿಸಿದ್ರು. ಇದೀಗ ಸಿಕ್ಕ ಅವಕಾಶವನ್ನ ಅಚ್ಚುಕಟ್ಟಾಗಿ ನಿಭಾಯಿಸಿರುವ ಪಂತ್​, ತಂಡವನ್ನ ಅಂಕಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರಿದ್ದಾರೆ. ಹೀಗಾಗಿ ಈ ಇಬ್ಬರಿಗೆ ತಂಡದ ಹೊಣೆ ಹೊರಿಸಿ ತಂಡವನ್ನ ಯಶಸ್ಸಿನಡೆ ಸಾಗಿಸೋದು ಮ್ಯಾನೇಜ್​ಮೆಂಟ್​​ನ ಪ್ಲಾನ್​.

Source: newsfirstlive.com Source link