ಜೈಲಿನಲ್ಲಿದ್ಕೊಂಡೇ ರೌಡಿಸಂ.. ಪರಪ್ಪನ ಅಗ್ರಹಾರ ಜೈಲಿನಿಂದ 19 ನಟೋರಿಯಸ್ ರೌಡಿಶೀಟರ್ಸ್ ಶಿಫ್ಟ್

ಜೈಲಿನಲ್ಲಿದ್ಕೊಂಡೇ ರೌಡಿಸಂ.. ಪರಪ್ಪನ ಅಗ್ರಹಾರ ಜೈಲಿನಿಂದ 19 ನಟೋರಿಯಸ್ ರೌಡಿಶೀಟರ್ಸ್ ಶಿಫ್ಟ್

ಬೆಂಗಳೂರು: ಅಪರಾಧಿಗಳು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ನೀಡುವ ಸಲುವಾಗಿ ಅವರನ್ನು ಜೈಲಿಗೆ ಅಟ್ಟಲಾಗುತ್ತದೆ. ಆದರೆ ಕೆಲ ನಟೋರಿಯಸ್​ ರೌಡಿಶೀಟರ್​ಗಳು ಜೈಲಿನಲ್ಲಿದ್ದುಕೊಂಡೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಬೆಳಕಿಗೆ ಬಂದಿದೆ.

blank

ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ತಮ್ಮ, ತಮ್ಮ ಶಿಷ್ಯಂದಿರ ಮೂಲಕ ಅಪರಾಧ ಕೃತ್ಯಗಳಿಗೆ ರೌಡಿಶೀಟರ್​ಗಳು ಸ್ಕೆಚ್ ಹಾಕುತ್ತಿರುವುದು ತಿಳಿದುಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಸಿಲಿಕಾನ್​ ಸಿಟಿಯಲ್ಲಿನ ಭೂಗತ ಲೋಕದ ಚಟುವಟಿಕೆಗಳನ್ನು ನಿಯಂತ್ರಣ ಮಾಡಲು ಪೊಲೀಸರು ಸಜ್ಜಾಗಿದ್ದಾರೆ.

ರೌಡಿಗಳನ್ನ ಪರಪ್ಪನ ಅಗ್ರಹಾರದಿಂದ ಬೇರೆ ಜೈಲುಗಳಿಗೆ ಹಂತ ಹಂತವಾಗಿ ಶಿಫ್ಟ್ ಮಾಡಲು ಲಿಸ್ಟ್​ ರೆಡಿ ಮಾಡಿಕೊಂಡ ಖಾಕಿ ಪಡೆ, ಕೇಂದ್ರ ಕಾರಾಗೃಹದಿಂದ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಖತರ್ನಾಕ್​ ರೌಡಿಶೀಟರ್​ಗಳನ್ನ ಶಿಫ್ಟ್ ಮಾಡುತ್ತಿದ್ದಾರೆ.

blank

ಇದನ್ನೂ ಓದಿ: ಜೈಲಿನಿಂದ ವಿನಯ್ ಕುಲಕರ್ಣಿ ರಿಲೀಸ್; ಸ್ವೀಟ್​ ತಿನ್ನಿಸಿ ಸ್ವಾಗತಿಸಿದ ಲಕ್ಷ್ಮೀ ಹೆಬ್ಬಾಳ್ಕರ್

ಜೈಲಿನಲ್ಲಿದ್ದು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 19 ರೌಡಿಶೀಟರ್​ಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆ ಬೇರೆ ಜಿಲ್ಲೆಯ ಜೈಲುಗಳಿಗೆ ಸ್ಥಳಾಂತರ ಮಾಡಲು ಖಾಕಿ ಪಡೆ ನಿರ್ಧರಿಸಿದೆ. ಬೆಂಗಳೂರಿನಿಂದ ಬಳ್ಳಾರಿ, ಶಿವಮೊಗ್ಗ, ಬೆಳಗಾವಿ, ವಿಜಯಪುರ, ಮೈಸೂರು, ಧಾರವಾಡ, ಕಲಬುರಗಿ ಜೈಲುಗಳಿಗೆ ರೌಡಿಶೀಟರ್​ಗಳನ್ನ ಸ್ಥಳಾಂತರ ಮಾಡಲಾಗುತ್ತಿದೆ.

blank

ವಿಲ್ಸನ್ ಗಾರ್ಡನ್ ನಾಗ, ಬಾಂಬೆ ಸಲೀಂ, ಕಾಟನ್ ಪೇಟೆ ಗಾರ್ಡನ್ ಶಿವ, ಮೈಕಲ್, ಪೂರ್ಣ, ಚೊಟ್ಟೆ ಪ್ರದೀಪ್ ಸೇರಿ 19 ರೌಡಿಗಳನ್ನ ಮೊದಲ ಹಂತದಲ್ಲಿ ಶಿಫ್ಟ್ ಮಾಡಲಾಗುತ್ತಿದೆ ಎನ್ನಲಾಗಿದ್ದು, ಎರಡನೇ ಲಿಸ್ಟ್ ನಲ್ಲಿ ಕುಳ್ಳು ರಿಜ್ವಾನ್, ಸ್ಟಾರ್ ನವೀನ, ಬೇಕರಿ ರಘು, ಕಾಡುಬೀಸನಹಳ್ಳಿ ರೋಹಿತ್, ಬ್ಯಾಡರಹಳ್ಳಿ ಸಿದ್ದ, ಅಂಧ್ರಹಳ್ಳಿ ಅಭಿ ಸೇರಿ 15 ಕ್ಕೂ ಹೆಚ್ಚು ರೌಡಿಗಳ ಶಿಫ್ಟ್ ಮಾಡಲಿಕ್ಕೆ ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link