ಜಮೀರ್​​ಗೆ ED ಮತ್ತೆ ಬುಲಾವ್; ಇಂದೇ ವಿಚಾರಣೆಗೆ ಹಾಜರಾಗಲು ಸೂಚನೆ

ಜಮೀರ್​​ಗೆ ED ಮತ್ತೆ ಬುಲಾವ್; ಇಂದೇ ವಿಚಾರಣೆಗೆ ಹಾಜರಾಗಲು ಸೂಚನೆ

ಬೆಂಗಳೂರು: ಮಾಜಿ ಸಚಿವ ಜಮೀರ್ ಅಹಮ್ಮದ್​ ಖಾನ್​ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತೆ ನೋಟಿಸ್ ನೀಡಿದ್ದಾರೆ. ನ್ಯೂಸ್​ಫಸ್ಟ್​ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇಂದು ಮಧ್ಯಾಹ್ನ ಜಮೀರ್ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾಗಲಿದ್ದಾರೆ.

ದಾಖಲೆಗಳ ಸಮೇತ ಇ.ಡಿ. ಕಚೇರಿ ಮುಂದೆ ಜಮೀರ್ ಅಹಮ್ಮದ್ ಹಾಜರಾಗಲಿದ್ದಾರೆ. ಅಂತೆಯೇ ಅವರು ಎರಡು ಬ್ಯಾಗ್​​ಗಳಲ್ಲಿ ದಾಖಲೆಗಳನ್ನ ಸಂಗ್ರಹಿಸಿ ದೆಹಲಿಗೆ ಪ್ರಯಾಣಿಸಿದ್ದಾರೆ. ಅಗಸ್ಟ್​ 5 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಮೀರ್ ನಿವಾಸದ ಮೇಲೆ ದಾಳಿ ಮಾಡಿದ್ದರು.

ಮಾಜಿ ಸಚಿವರಿಗೆ ಸಂಬಂಧಿಸಿದ ಒಟ್ಟು 15 ಕಡೆ ದಾಳಿ ನಡೆಸಿ, ಒಂದಿಷ್ಟು ಮಾಹಿತಿಯನ್ನ ಸಂಗ್ರಹಿಸಿದ್ದರು. ಸದ್ಯ ದಾಳಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ಜಮೀರ್​ ಅವರನ್ನ ಇಂದು ಮತ್ತೆ ವಿಚಾರಣೆಗೆ ಕರೆಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಮತ್ತೆ ಕಾಂಗ್ರೆಸ್​ನಲ್ಲಿ ಹುಬ್ಬೇರಿಸಿದ ಡಿಕೆಎಸ್​-ಜಮೀರ್ ಭೇಟಿ..!

Source: newsfirstlive.com Source link