ಜೈಲಿನಿಂದ ಬರ್ತಿದ್ದಂತೆ ಅದ್ಧೂರಿ ಮೆರವಣಿಗೆ; ವಿನಯ್ ಕುಲಕರ್ಣಿ ಮೇಲೆ ಬಿತ್ತು ಕೇಸ್

ಜೈಲಿನಿಂದ ಬರ್ತಿದ್ದಂತೆ ಅದ್ಧೂರಿ ಮೆರವಣಿಗೆ; ವಿನಯ್ ಕುಲಕರ್ಣಿ ಮೇಲೆ ಬಿತ್ತು ಕೇಸ್

ಬೆಳಗಾವಿ: ಇದೀಗ ಜೈಲಿನಿಂದ ಹೊರಬಂದ ವಿನಯ್​ ಕುಲಕರ್ಣಿಗೆ ಬೆಳಗಾವಿ ಪೊಲೀಸರು ಶಾಕ್​ ನೀಡಿದ್ದಾರೆ. ಬೆಳಗಾವಿ ಗ್ರಾಮಾಂತರ ಪೊಲೀಸ್​ರಿಂದ ವಿನಯ್ ಕುಲಕರ್ಣಿ ಸೇರಿ 12 ಜನರ ಮೇಲೆ ಸುಮೋಟೋ ಕೇಸ್​ ದಾಖಲಿಸಿದ್ದಾರೆ.

ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿನಯ್ ಕುಲಕರ್ಣಿ ಇಂದು ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಕಾಂಗ್ರೆಸ್​ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ವೀಟ್​ ತಿನ್ನಿಸಿ, ಹಣೆಗೆ ತಿಲಕವಿಟ್ಟು ಸ್ವಾಗತಿಸಿದ್ದರು. ಈ ವೇಳೆ ಅದ್ಧೂರಿ ಮೆರವಣಿಗೆ ಆಯೋಜಿಸಲಾಗಿತ್ತು.. ಜೈಲಿನಿಂದ ಹೊರಬಂದು ಬೆಳಗಾವಿಯ ವಿನಾಯಕ ಮಂದಿರಕ್ಕೆ ಅಭಿಮಾನಿಗಳ ಜೊತೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು.

ಇದನ್ನು ಓದಿ: ಜೈಲಿನಿಂದ ವಿನಯ್ ಕುಲಕರ್ಣಿ ರಿಲೀಸ್; ಸ್ವೀಟ್​ ತಿನ್ನಿಸಿ ಸ್ವಾಗತಿಸಿದ ಲಕ್ಷ್ಮೀ ಹೆಬ್ಬಾಳ್ಕರ್

ಇನ್ನು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ ಸಾವಿರಾರು ಜನ ಹಿಂಡಲಗಾ ಜೈಲಿಂದ ಹೊರಬಂದ ವಿನಯ್ ಕುಲಕರ್ಣಿ ಅವರನ್ನು ಸ್ವಾಗತಿಸಿ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಜೈಕಾರ ಕೂಗಿದರು. ಕೋವಿಡ್ ನಿಯಮ, ವಾರಾಂತ್ಯ ಕರ್ಫ್ಯೂ ಇದ್ದರೂ ಇಷ್ಟೊಂದು ಸಂಖ್ಯೆಯಲ್ಲಿ ಜನರು ದೈಹಿಕ ಅಂತರ ಮರೆದು, ಮಾಸ್ಕ್ ಧರಿಸದೆ ಮೆರವಣಿಗೆಯಲ್ಲಿ ಭಾಗವಹಿಸಿ ಕೋವಿಡ್​ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಪೊಲೀಸರು ಕೇಸ್​ ದಾಖಲಿಸಿದ್ದಾರೆ.

Source: newsfirstlive.com Source link