‘ಉಸಿರೆ ಉಸಿರೆ’ ಚಿತ್ರದ ನಿರ್ದೇಶಕರಿಗೆ ಬೆಳ್ಳಿ ಪೆನ್ ಗಿಫ್ಟ್​ ಕೊಟ್ಟ ಕಿಚ್ಚ ಸುದೀಪ್​

‘ಉಸಿರೆ ಉಸಿರೆ’ ಚಿತ್ರದ ನಿರ್ದೇಶಕರಿಗೆ ಬೆಳ್ಳಿ ಪೆನ್ ಗಿಫ್ಟ್​ ಕೊಟ್ಟ ಕಿಚ್ಚ ಸುದೀಪ್​

ಕಿಚ್ಚ ಸುದೀಪ್​ ನಿನ್ನೆ ತಮ್ಮ ಆಪ್ತ ಗೆಳೆಯ ರಾಜೀವ್​ ಅವ್ರ ಹೊಸ ಸಿನಿಮಾ ಉಸಿರೆ ಉಸಿರೆ ಚಿತ್ರದ ಪೋಸ್ಟರ್​ ಲಾಂಚ್​ ಕಾರ್ಯಕ್ರಮದಲ್ಲಿ ಅಥಿತಿಯಾಗಿ ಭಾಗವಹಿಸಿದ್ರು.

ಕಾರ್ಯಕ್ರಮದ ಕೊನೆಯಲ್ಲಿ ಚಿತ್ರತಂಡ ಸುದೀಪ್​ ಅವರಿಗೆ ಒಂದು ನೆನಪಿನ ಕಾಣಿಕೆ ಮತ್ತು ಒಂದು ಬೆಳ್ಳಿ ಪೆನ್​ ಉಡುಗೊರೆಯಾಗಿ ನೀಡುತ್ತಾರೆ. ಆದ್ರೆ ಆಗ ಕಿಚ್ಚ ಸುದೀಪ್​ ತನಗೆ ಚಿತ್ರತಂಡ ಉಡುಗೊರೆಯಾಗಿ ನೀಡಿದ ಬೆಳ್ಳಿ ಪೆನ್​ನ್ನು ಅದೇ ಚಿತ್ರದ ನಿರ್ದೇಶಕ ಸಿ.ಎಮ್​ ವಿಜಯ್​ ಅವರಿಗೆ ನೀಡುತ್ತಾರೆ.

blank

ಈ ಬೆಳ್ಳಿ ಪೆನ್​ ಬಹಳ ಅದ್ಭುತವಾಗಿದೆ, ಅದ್ರೆ ಈ ಪೆನ್​ ಅನ್ನ ನಾನು ನಿರ್ದೇಶಕರಿಗೆ ನೀಡುತ್ತೆನೇ.. ಯಾಕಂದ್ರೆ ಇದು ಯಾವಾಗಲೂ ಬರಹಗಾರನ್ನು ಕೈಯಲ್ಲಿ ಇರಬೇಕು. ಇನ್ನು ಈ ಪೆನ್​ ನನ್ನ ಹತ್ರ ಇದ್ರೆ ನನಗೆ ಬಾರಿ ಟೆನ್ಶನ್​ ಯಾಕಂದ್ರೆ ನನ ಹತ್ರ ಎಲ್ಲರೂ ಜಾಸ್ತಿ ಚೆಕ್​ ಸೈನ್​ ಮಾಡಿಸುತ್ತಾರೆ. ಅದಕ್ಕೆ ನನಗೆ ಇದು ಬೇಡ ಅಂತಾ ಕಿಚ್ಚ ತಮಾಷೆ ಮಾಡಿದ್ರು. ಇದನ್ನು ನಾನು ಮನಸ್ಪೂರ್ವಕವಾಗಿ ನಿರ್ದೇಶಕರಿಗೆ ನೀಡುತ್ತೆನೆ ಅಂತಾ ಕಿಚ್ಚ ತಮಗೆ ಉಡಗೊರೆಯಾಗಿ ಬಂದ ಬೆಳ್ಳಿ ಪೆನ್​ನ್ನು ಉಸಿರೆ ಉಸಿರೆ ಚಿತ್ರದ ನಿರ್ದೇಶಕರಿಗೆ ನೀಡುತ್ತಾರೆ.

Source: newsfirstlive.com Source link