ರಾಜ್ಯದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ’ ಜಾರಿಗೆ ಆದೇಶ: ಸಂಕಷ್ಟಕ್ಕೆ ಸಿಲುಕಿದ ಕೆಲ ಖಾಸಗಿ ಕಾಲೇಜುಗಳು

ರಾಜ್ಯದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ’ ಜಾರಿಗೆ ಆದೇಶ: ಸಂಕಷ್ಟಕ್ಕೆ ಸಿಲುಕಿದ ಕೆಲ ಖಾಸಗಿ ಕಾಲೇಜುಗಳು

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020 (NEP-2020) ಜಾರಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಸರ್ಕಾರದ ಈ ಆದೇಶ ಖಾಸಗಿ ಕಾಲೇಜುಗಳನ್ನು ಸಂಕಷ್ಟಕ್ಕೆ ತಳ್ಳಿದೆ ಅಂತಾ ಹೇಳಲಾಗುತ್ತಿದೆ.

ಉನ್ನತ ಶಿಕ್ಷಣ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಡಾ.ಸಿ.ಎನ್.ಅಶ್ವತ್​​ ನಾರಾಯಣ ಅವರು ಇಲಾಖೆಯ ಮತ್ತು ರಾಜ್ಯ ಉನ್ನತ ಶಿಕ್ಷಣ ಮಂಡಳಿ ಜೊತೆ ಸಭೆಯನ್ನು ನಡೆಸಿ ರಾಜ್ಯದಲ್ಲಿ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಂತೆ ಆದೇಶ ನೀಡಿದರು. ಆ ಮೂಲಕ ನೂತನ ಶಿಕ್ಷಣ ನೀತಿಯನ್ನು ಮೊದಲು ಜಾರಿಗೊಳಿಸಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಸರ್ಕಾರದ ಈ ಆದೇಶವೇ ಸದ್ಯ ರಾಜ್ಯದ ಖಾಸಗಿ ಪದವಿ ಕಾಲೇಜುಗಳಿಗೆ ಟೆನ್ಯನ್ ಶುರು ಮಾಡಿದೆ.

ಇದನ್ನೂ ಓದಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿ ಇಂದಿಗೆ ಒಂದು ವರ್ಷ;ಪ್ರಧಾನಿ ಮೋದಿ ಹೇಳಿದ್ದೇನು?

2021-22ನೇ ಸಾಲಿನ ಪ್ರಥಮ ವರ್ಷದ ಪದವಿ ಕಾಲೇಜುಗಳ ದಾಖಲಾತಿ ಪ್ರಕ್ರಿಯೆ ಶೇ.100 ರಷ್ಟು ಮುಕ್ತಾಯ ಆಗಿದೆ. ಆದರೆ ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಆದೇಶಿಸಿದ ಹಿನ್ನೆಲೆ ಗೊಂದಲವನ್ನುಂಟು ಮಾಡಿದೆ.

blank

ವಿದ್ಯಾರ್ಥಿಗಳು ಸದ್ಯ ಆಯಾ ಕಾಲೇಜುಗಳಲ್ಲಿ ಲಭ್ಯವಿರುವ ವಿಭಿನ್ನ ಕೋರ್ಸ್​ಗಳನ್ನು ಆಯ್ಕೆ ಮಾಡಿ ಸೇರ್ಪಡೆಯಾಗಿದ್ದಾರೆ. ಈಗ ಹೊಸ ಶಿಕ್ಷಣ ನೀತಿಯಲ್ಲಿ ಸಿಲೆಬಸ್ ಬದಲಾವಣೆ ಆಗುತ್ತೆ. ವಿದ್ಯಾರ್ಥಿಗಳ ಇಚ್ಛೆ ಪಟ್ಟು ಸ್ವೀಕರಿಸಿದ ಕೋರ್ಸ್​​ನಲ್ಲಿ ಬದಲಾವಣೆಯಾದರೆ ಖಾಸಗಿ ಕಾಲೇಜುಗಳಿಗೆ ಬಹುದೊಡ್ಡ ಹೊರೆಯಾಗಲಿದೆ.

ಇದನ್ನೂ ಓದಿ: ಸೋಮವಾರದಿಂದ ಶಾಲೆಗಳು ಪುನರ್​ ಆರಂಭ: ಸಿಎಂ ಬೊಮ್ಮಾಯಿ ಹೇಳಿದ್ದೇನು..?

ಈಗಾಗಲೇ ಲಕ್ಷ ಲಕ್ಷ ಶುಲ್ಕ ವಸೂಲಿ ಮಾಡಿರುವ ಖಾಸಗಿ ಪದವಿ ಕಾಲೇಜುಗಳು, ಒಂದು ವೇಳೆ ವಿದ್ಯಾರ್ಥಿಗಳಿಗೆ ಆ ಹೊಸ ಕೋರ್ಸ್ ಇಷ್ಟವಿಲ್ಲ ಎಂದರೆ ವಿದ್ಯಾರ್ಥಿಗಳು ಪಾವತಿಸಿದ ಶುಲ್ಕ ಹೇಗೆ ಮರುಪಾವತಿ ಮಾಡೋದು ಅನ್ನೋ‌ ಟೆನ್ಷನ್ ಆರಂಭವಾಗಿದೆ.

ಈ ಎಲ್ಲಾ ಕಾರಣದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವುದು ಈ ವರ್ಷ ಬೇಡ ಅಂತೀರೋ ಖಾಸಗಿ ಕಾಲೇಜುಗಳು ಕೊರೊನಾ ನಡುವೆ ಕಾಲೇಜು ಆರಂಭ ಮಾಡುವುದೇ ವಿಶೇಷ. ಅಂತದ್ರಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಈ ಹೊಸ ಬದಲಾವಣೆ ಬೇಕಾ ಎಂದು ಪ್ರಶ್ನೆ ಮಾಡಿದೆ.

Source: newsfirstlive.com Source link